ಕಾವೇರಿ ಜಲವಿವಾದ: ಮಂಗಳವಾರ ಬೆಂಗಳೂರು ಬಂದ್‌ಗೆ ಈ ಸಂಘಟನೆಗಳು ಸಾಥ್; ಪೊಲೀಸ್ ಸರ್ಪಗಾವಲು!
ಕಾವೇರಿ ಜಲವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮಿಳನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳಿಂದ ಮಂಗಳವಾರ ಬೆಂಗಳೂರು ಬಂದ್ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಕರ್ನಾಟಕ ಒಕ್ಕೂಟದಿಂದ ಶುಕ್ರವಾರ ಸೆ.29ರಂದು ಅಖಂಡ ಕರ್ನಾಟಕ ಬಂದ್ ಮಾಡಲು ನಿರ್ಧರಿಸಲಾಗಿದೆ. ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ಈ ಬಗ್ಗೆ ನಾಳೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾದ್ಯತೆ ಇದೆ.

ಬೆಂಗಳೂರು (ಸೆ.24) ಕಾವೇರಿ ಜಲವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮಿಳನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳಿಂದ ಮಂಗಳವಾರ ಬೆಂಗಳೂರು ಬಂದ್ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಕರ್ನಾಟಕ ಒಕ್ಕೂಟದಿಂದ ಶುಕ್ರವಾರ ಸೆ.29ರಂದು ಅಖಂಡ ಕರ್ನಾಟಕ ಬಂದ್ ಮಾಡಲು ನಿರ್ಧರಿಸಲಾಗಿದೆ. ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ಈ ಬಗ್ಗೆ ನಾಳೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾದ್ಯತೆ ಇದೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಹಲಸೂರು ಗೇಟ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಬಿಗಿ ಭದ್ರತೆ. 6 ಸಬ್ ಇನ್ಸ್ಪೆಕ್ಟರ್ 2ಎಎಸ್‌ಐ ಸೇರಿ 50ಕ್ಕೂ ಹೆಚ್ಚು ಪೋಲಿಸರ ನಿಯೋಜನೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಾರಾ ಗೋವಿಂದ್, ಕುಮಾರ್ ಸೇರಿದಂತೆ ಹಲವು ಕನ್ನಡಪರ ಸಂಘಟನೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಕಾವೇರಿ ವಿವಾದ: ಸೆ.26ರಂದು ಬೆಂಗಳೂರು ಬಂದ್, ಸೆ.29ರಂದು ಅಖಂಡ ಕರ್ನಾಟಕ ಬಂದ್?
ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ ಕರ್ನಾಟಕ ಫಿಲ್ಮ್ ಚೇಂಬರ್
ಮಂಗಳವಾರ ಕನ್ನಡಪರ ಸಂಘಟನೆಗಳಿಂದ ನಡೆಯಲಿರುವ ಬೆಂಗಳೂರು ಬಂದ್ ಪ್ರತಿಭಟನೆಗೆ ಕರ್ನಾಟಕ ಫಿಲ್ಮ್ ಚೇಂಬರ್ ಮಂಡಳಿ ನೂತನ ಅಧ್ಯಕ್ಷ ಸುರೇಶ್ ಬೆಂಬಲ ಸೂಚಿಸಿದ್ದಾರೆ.
'ಕಾವೇರಿ ನಮ್ಮದು ಕಾವೇರಿ ಹೋರಾಟಕ್ಕೆ ನಮ್ ಬೆಂಬಲವಿದೆ. ಈ ಬಗ್ಗೆ ನಾಳೆ ಮದ್ಯಾಹ್ನ ಪ್ರಕಟಣೆ ಹೊರಡಿಸುತ್ತೇವೆ. ಒಂದು ಸುತ್ತು ಸಮಾಲೋಚನೆ ಮಾಡಿ ಹೇಳುತ್ತೇವೆ. ಕನ್ನಡ ನೆಲ ಜಲ ವಿಚಾರದಲ್ಲಿ ನಮ್ಮ ಬೆಂಬಲ ಇದ್ದೇ ಇರುತ್ತದೆ ಯಾವ ರೀತಿ ನಮ್ಮ ಬೆಂಬಲ ಇರುತ್ತೆ. ಹೋರಾಟದ ರೂಪುರೇಷೆ ಏನು ಎಂಬುದನ್ನು ನಾಳೆ ಮಧ್ಯಾಹ್ನವೇಳೆಗೆ ತಿಳಿಸುತ್ತೇವೆ ಎಂದಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸುರೇಶ್ ತಿಳಿಸಿದರು.
ಬೀದಿಬದಿ ವ್ಯಾಪಾರಿ ಸಂಘಟನೆಗಳಿಂದಲೂ ನೈತಿಕ ಬೆಂಬಲ:
ಮಂಗಳವಾರ ನಡೆಯಲಿರುವ ಪ್ರತಿಭಟನೆ ಕನ್ನಡಪರ ಸಂಘಟನೆಗಳು ಸಜ್ಜಾಗಿದ್ದು ಪ್ರತಿಭಟನೆಗೆ ಬೀದಿಬದಿ ವ್ಯಾಪಾರಿಗಳ ಸಹ ಸಾಥ್ ನೀಡಲಿದ್ದಾರೆ. ಈಗಾಗಲೇ ಹೋರಾಟಕ್ಕೆ ನೈತಿಕ ಬೆಂಬಲ ಘೋಷಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಬೀದಿಬದಿ ವ್ಯಾಪಾರಿ ಸಂಘಟನೆ ಅಧ್ಯಕ್ಷ, ನಮ್ಮ ಬೆಂಬಲ ಇರುತ್ತದೆ. ಆದರೆ ಏಕಾಏಕಿ ಬಂದ್ ಮಾಡುವುದು ಸರಿಯಲ್ಲ ಎಂದರು.
ಬಂದ್‌ನಿಂದ ಯಾರಿಗೇನು ಲಾಭ, ಇದರಿಂದ ಬೆಂಗಳೂರಿನ ಘನತೆಗೆ ಧಕ್ಕೆ: ಡಿಕೆಶಿ
ನೆಲ, ಜಲ, ಕಾವೇರಿ ನೀರಿನ ವಿಚಾರ ಬಂದಾಗ ನಾವು ಬೆಂಬಲ ನೀಡುತ್ತೇವೆ, ನೀಡಲೇಬೇಕು. ಬೀದಿಬದಿ ವ್ಯಾಪಾರಿಗಳ ಸಂಘಟನೆಯಿಂದ ನೈತಿಕ ಬೆಂಬಲವಿರುತ್ತದೆ. ಬೆಂಗಳೂರಲ್ಲಿ ಒಂದುವರೆ ಲಕ್ಷ ಜನ ಬೀದಿಬದಿ ವ್ಯಾಪಾರಿಗಳಿದ್ದೇವೆ. ಏಕಾಏಕಿ ಬಂದ್ ಮಾಡುತ್ತಿರುವುದರಿಂದ ಮಂಗಳವಾರ ಎಂದಿನಂತೆ ಅಂಗಡಿಮುಂಗಟ್ಟು ಓಪನ್ ಇರಲಿವೆ. ಆದ್ರೆ ನಾವು ಕಾವೇರಿಗಾಗಿ ನಡೆಯುವ ಹೋರಾಟದಲ್ಲಿ ಮತ್ತು ರ್ಯಾಲಿಯಲ್ಲಿ ಭಾಗಿಯಾಗ್ತೇವೆ. ಯಾರೂ ಕೂಡ ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನ ಮುಚ್ಚಿಸಬಾರದು. ಆ ರೀತಿ ಮಾಡಿದ್ರೆ ಅವರ ವಿರುದ್ದ ಕ್ರಮಕ್ಕಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು.