Asianet Suvarna News Asianet Suvarna News

ಒಂದು ದಿನದ ಬೆಂಗಳೂರು ಬಂದ್‌ಗೆ 1500 ಕೋಟಿ ರು. ವಹಿವಾಟು ನಷ್ಟ!

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಕುರಿತಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್‌ನಿಂದಾಗಿ 1,500 ಕೋಟಿ ರು.ನಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Cauvery dispute 1500 crores loss for one day Bengaluru Bandh rav
Author
First Published Sep 27, 2023, 12:45 AM IST

ಬೆಂಗಳೂರು (ಸೆ.27): ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಕುರಿತಂತೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್‌ನಿಂದಾಗಿ 1,500 ಕೋಟಿ ರು.ನಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಒಂದು ದಿನದ ಬಂದ್‌ನಿಂದಾಗಿ ರಾಜ್ಯದಲ್ಲಿ 4 ಸಾವಿರ ಕೋಟಿ ರು. ವಹಿವಾಟು ಸ್ಥಗಿತಗೊಳ್ಳಲಿದ್ದು, ರಾಜ್ಯ ಸರ್ಕಾರಕ್ಕೆ 450 ಕೋಟಿ ರು.ಗೂ ಹೆಚ್ಚಿನ ಜಿಎಸ್‌ಟಿ ನಷ್ಟವುಂಟಾಗಲಿದೆ. ಅದರಲ್ಲಿ ಶೇ. 60 ಬೆಂಗಳೂರಿನ ಪಾಲಾಗಿರಲಿದೆ. ಅದರಂತೆ ಮಂಗಳವಾರ ನಡೆದಿರುವ ಬೆಂಗಳೂರು ಬಂದ್‌ನಿಂದಾಗಿ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಉತ್ಪಾದನೆಗಳು ಬಹುತೇಕ ಸ್ಥಗಿತಗೊಳ್ಳುವಂತಾಗಿತ್ತು. ಇದರಿಂದಾಗಿ 1,500 ಕೋಟಿ ರು.ಗೂ ಹೆಚ್ಚಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡು, ಸರ್ಕಾರಕ್ಕೆ 250 ಕೋಟಿ ರು. ನಷ್ಟವುಂಟಾಗುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ.

ನಮ್ಮಲ್ಲಿ ಇಲ್ಲದ ನೀರನ್ನು ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು ಬಂದ್‌ ನಂತರ ಶುಕ್ರವಾರ ರಾಜ್ಯ ಬಂದ್‌ ಎದುರಾಗಲಿದೆ. ಈ ವೇಳೆ ಮತ್ತೆ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿವೆ. ಹೀಗಾಗಿ ರಾಜ್ಯದಲ್ಲಿ 4 ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತದ ವ್ಯಾಪಾರ-ವಹಿವಾಟು ಆಗುವುದಿಲ್ಲ. ಅಲ್ಲದೆ, ಅದರಿಂದ ಸರ್ಕಾರಕ್ಕೆ ಬರಬಹುದಾದ 450 ಕೋಟಿ ರು.ಗೂ ಹೆಚ್ಚಿನ ಮೊತ್ತದ ಜಿಎಸ್‌ಟಿ ಖೋತಾ ಆಗಲಿದೆ.  ಹೀಗಾಗಿ ಒಂದೇ ವಾರದಲ್ಲಿ ಸರ್ಕಾರಕ್ಕೆ 700 ಕೋಟಿ ರು.ಗೂ ಹೆಚ್ಚಿನ ನಷ್ಟವುಂಟಾಗುತ್ತಿದ್ದರೆ, ವ್ಯಾಪಾರಿ ವಲಯಕ್ಕೆ 5 ಸಾವಿರ ಕೋಟಿ ರು.ಹೂ ಹೆಚ್ಚಿನ ಆದಾಯ ಖೋತಾ ಆಗುತ್ತಿದೆ.

ರೈತರಿಗೆ ತೊಂದರೆ ಆದ್ರೆ ನಾವು ಸುಮ್ಮನೆ ಕೂರಬೇಕಾ? ರೈತಪರ ಹೋರಾಟಕ್ಕೆ ನಾನು ಸಿದ್ಧ: ನಟಿ ರಾಗಿಣಿ ದ್ವಿವೇದಿ

ಬೆಂಗಳೂರಿನಲ್ಲಿ ಒಂದು ದಿನದ ಬಂದ್‌ ಮಾಡಿದರೆ ರಾಜ್ಯ ಸರ್ಕಾರಕ್ಕೆ 250 ಕೋಟಿ ರು. ಜಿಎಸ್‌ಟಿ ನಷ್ಟವುಂಟಾಗಲಿದೆ. ಅದರ ಜತೆಗೆ ಒಂದು ಸಾವಿರ ಕೋಟಿ ರು.ಗೂ ಹೆಚ್ಚಿನ ವ್ಯಾಪಾರ, ವಹಿವಾಟು ಸ್ಥಗಿತಗೊಳ್ಳಲಿದೆ. ಹೀಗಾಗಿ ಬಂದ್‌ ಮಾಡುವ ಬದಲು ಹೋರಾಟಕ್ಕೆ ಬೇರೆ ಮಾರ್ಗ ಹುಡುಕಿಕೊಳ್ಳುವುದು ಉತ್ತಮ.

-ಬಿ.ವಿ. ಗೋಪಾಲ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ

Latest Videos
Follow Us:
Download App:
  • android
  • ios