Asianet Suvarna News Asianet Suvarna News

ಸ್ವಾಮೀಜಿಗಳಿಗೆ ಯಾವುದೇ ರೀತಿಯ ಅವಮಾನ ಆಗಿಲ್ಲ; ಈಶ್ವರಾನಂದಪುರಿ ಶ್ರೀಗಳ ಆರೋಪಕ್ಕೆ ದೇವಾಲಯದ ಪ್ರಧಾನ ಅರ್ಚಕ ಸ್ಪಷ್ಟನೆ

ಕುರುಬ ಸ್ವಾಮಿಗಳು ಪ್ರವೇಶಿಸಿದ್ದಕ್ಕೆ ದೇವಾಲಯ ತೊಳೆದರು ಎಂಬ ಚಿತ್ರದುರ್ಗ ಕನಕಗುರುಪೀಠ ಶಾಖಾ ಮಠದ  ಈಶ್ವರಾನಂದಪುರಿ ಆರೋಪಕ್ಕೆ ಚನ್ನಕೇಶವ ದೇವಾಲಯದ ಪ್ರಧಾನ ಅರ್ಚಕ ಪ್ರತಿಕ್ರಿಯಿಸಿದ್ದು ಸ್ವಾಮೀಜಿಗಳಿಗೆ ಯಾವುದೇ ಅವಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Caste system issue Channakesava temple archaka response to Iswaranandpuri Sri allegation at chitradurga rav
Author
First Published Feb 3, 2024, 12:39 PM IST

ಚಿತ್ರದುರ್ಗ (ಫೆ.3): ಬಾಗೂರಿನ ಚನ್ನಕೇಶವ ದೇವಾಲಯದೊಳಗೆ ಕುರುಬ ಸ್ವಾಮೀಜಿ ಪ್ರವೇಶಿಸಿದ್ದಕ್ಕೆ ದೇವಾಲಯ ತೊಳೆದರು ಎಂದು ಹೊಸದುರ್ಗ ಕೆಲ್ಲೋಡಿನ  ಕನಕ ಶಾಖಾ ಮಠ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಜಾತಿ ವ್ಯವಸ್ಥೆ ಇನ್ನೂ ಜೀವಂತ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳ ಹೇಳಿಕೆಗೆ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಪ್ರತಿಕ್ರಿಯೆ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿಗಳಿಗೆ ಯಾವುದೇ ರೀತಿಯ ಅವಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಾಲಯದೊಳಗೆ ಜಾತಿ ವ್ಯವಸ್ಥೆ, ಅಸಮಾನತೆ ಬಗ್ಗೆ ಕನಕ ಗುರುಪೀಠದ ಶ್ರೀಗಳ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿವರ್ಷ ಏಕಾದಶಿಗೆ ಸ್ವಾಮೀಜಿಯನ್ನ ಕರೆಸಿ   ಸನ್ಮಾನ ಮಾಡುತ್ತೇವೆ. ಕಳೆದ 7 ವರ್ಷಗಳಿಂದ ಅವ್ರು ಏಕಾದಶಿಗೆ ದೇವಾಸ್ಥಾನಕ್ಕೆ ಬರ್ತಿದ್ದಾರೆ. ಅವ್ರು ಹೇಳಿದಂತೆ ಯಾವುದೇ ರೀತಿಯಲ್ಲೂ ದೇವಾಲಯದ ಶುಚಿತ್ವ ಕಾರ್ಯ ಮಾಡಿಲ್ಲ. ಅವ್ರು ಬಂದು ಹೋದಮೇಲೆಯೂ ನಾವು ಶುದ್ದಿ ಕಾರ್ಯ ಮಾಡಿಲ್ಲ. ನಮ್ಮ ದೇವಾಲಯ ದೊಡ್ಡದಿದೆ. ಪೂಜೆಗೂ ಮೊದಲು ಶುದ್ದ ಕಾರ್ಯ ನಡೆಯುತ್ತೆ ಹೊರತು ಭಕ್ತರು ಬಂದ್ಮೇಲೆ ಶುದ್ದಿ ಕಾರ್ಯ ಮಾಡೋದಿಲ್ಲ. ಅಲ್ಲದೇ ಅಂದು ಏಕಕಾದಶಿ ಭಕ್ತರು ಹೆಚ್ಚು ಬಂದಿದ್ದರು ಹೀಗಿರುವಾಗ ಹೇಗೆ ಶುದ್ಧಿಕಾರ್ಯ ಮಾಡುತ್ತೇವೆ? ಎಂದು ಪ್ರಶ್ನಿಸಿದರು.

ಕುರುಬ ಸ್ವಾಮಿ ಪ್ರವೇಶ ಮಾಡಿದ್ದಕ್ಕೆ‌ ದೇವಾಲಯ ತೊಳೆದ್ರು ; ಜಾತಿ ವ್ಯವಸ್ಥೆ ಬಗ್ಗೆ ಈಶ್ವರಾನಂದಪುರಿಶ್ರೀ ಬೇಸರ

ನಮ್ಮ ದೇವಾಲಯದೊಳಗೆ ಅರ್ಚಕರನ್ನು ಹೊರತುಪಡಿಸಿ ಯಾರನ್ನೂ ಬಿಡೋದಿಲ್ಲ. ಈ ವಿಚಾರ ಸ್ವಾಮೀಜಿಗೂ ಗೊತ್ತಿದೆ. ಅವರು ಸಹ ಯಾವತ್ತೂ ಗರ್ಭಗುಡಿಗೆ ಬರಬೇಕು ಅಂತಾ ಕೇಳಿಲ್ಲ. ಇಷ್ಟೆಲ್ಲ ಗೊತ್ತಿದ್ರೂ ಅವ್ರು ಈಗ ಈ ರೀತಿ ಯಾಕೇ ಹೇಳ್ತಿದ್ದಾರೆ ಅನ್ನೋದನ್ನ ಅವರೇ ಉತ್ತರಿಸಬೇಕು.  ಅವರು ದೇವಾಲಯಕ್ಕೆ ಬಂದು ಹೋಗಿದ್ದು ಡಿಸೆಂಬರ್ ನಲ್ಲಿ ಅಂದಿನಿಂದ ಏನು ಮಾತನಾಡದೆ ಈಗ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದರು.

Follow Us:
Download App:
  • android
  • ios