Asianet Suvarna News Asianet Suvarna News

ಜಾತಿಗಣತಿ ಸ್ವೀಕಾರಕ್ಕೆ ಲಿಂಗಾಯತ, ಒಕ್ಕಲಿಗರ ವಿರೋಧ ಬೆನ್ನಲ್ಲೇ ಹಿಂದುಳಿದ ವರ್ಗಗಳ ಮುಖಂಡರ ಮಹತ್ವದ ಸಭೆ!

ಜಾತಿಗಣತಿ ಸ್ವೀಕಾರಕ್ಕೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಇಂದು ಖಾಸಗಿ ಹೋಟೆಲ್‌ನಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಮಹತ್ವದ ಸಭೆ ಕರೆಯಲಾಗಿದೆ.

Caste census issue Backward Classes Leaders Meeting at bengaluru rav
Author
First Published Nov 26, 2023, 2:41 PM IST

ಬೆಂಗಳೂರು (ನ.26): ಜಾತಿಗಣತಿ ಸ್ವೀಕಾರಕ್ಕೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಇಂದು ಖಾಸಗಿ ಹೋಟೆಲ್‌ನಲ್ಲಿ ಹಿಂದುಳಿದ ವರ್ಗಗಳ ಮುಖಂಡರ ಮಹತ್ವದ ಸಭೆ ಕರೆಯಲಾಗಿದೆ.

ಇಂದು ನಡೆಯಲಿರುವ ಸಭೆಯಲ್ಲಿ ಎಂಎಲ್ ಸಿ ಸೀತಾರಾಮ, ರಾಮಚಂದ್ರಪ್ಪ ಸೇರಿದಂತೆ ಹಿಂದೂಳಿದ ವರ್ಗಗಳ ನಾಯಕರು ಭಾಗಿ. ಜಾತಿಗಣತಿ ಸ್ವೀಕಾರ ಮಾಡಲು ಸಿಎಂ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ನಡೆಸುತ್ತಿರುವ ಸಭೆ. ಈಗಾಗಲೇ ಮೂರು ಮೀಟಿಂಗ್ ಮಾಡಿರುವ ಹಿಂದೂಳಿದ ವರ್ಗಗಳ ಮುಖಂಡರು. ಡಿಸೆಂಬರ್ ನಲ್ಲಿ ನಡೆಯುವ ಜಾಗೃತಿ ಸಮಾವೇಶದ ತಯಾರಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಿರುವ ಮುಖಂಡರು.

ಕರ್ನಾಟಕದ ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ: ಪ್ರಬಲ ಸಮುದಾಯಗಳಿಂದ ವಿರೋಧ

ಈ ಬಗ್ಗೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ.ಆರ್ ಸೀತಾರಾಮ್, ಇಂದು ಸಮಾನ ಮನಸ್ಕರ ಸಭೆ ಮಾಡುತ್ತಿದ್ದೇವೆ. ಇದು ನಾಲ್ಕನೇ ಸಭೆಯಾಗಿದೆ. ಚುನಾವಣೆ ಮೊದಲು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ನಾವೆಲ್ಲಾ ಹಲವು ಕಡೆ ಪ್ರಚಾರ ಮಾಡಿದ್ವಿ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದು ಆಯ್ತು. ಅವರಿಗೆ ಸಮಸ್ಯೆಗಳ ಬಗ್ಗೆ ಮಾಹಿತಿ ಕೊಡಬೇಕಿದೆ ಎಂದರು.

'ಜಾತಿ ಗಣತಿ ವರದಿ ಬಹಿರಂಗದಿಂದ ರಾಜಕೀಯ ಸ್ಥಿತ್ಯಂತರ'

ಈ ಬಗ್ಗೆ ತಿಂಗಳಿಗೊಮ್ಮೆ ಸಭೆ ಮಾಡುತ್ತೇವೆ. ಒಂದೊಂದು ತಾಲ್ಲೂಕಿನಲ್ಲಿ ಸಾವಿರಾರು ಸಮಸ್ಯೆಗಳು ಇವೆ. ಚುನಾವಣೆಯಲ್ಲಿ ಕ್ಯಾಂಪೇನ್ ಮಾಡಿದ್ದೇವೆ. ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಏನ್ ಸಮಸ್ಯೆ ಇದೆ ಅದನ್ನು ಸಿಎಂ ಗಮನಕ್ಕೆ ತರುತ್ತೇವೆ. ಇಲ್ಲಿರುವ ಎಲ್ಲಾ ನಾಯಕರು ಚುನಾವಣೆ ಪ್ರಚಾರದಲ್ಲಿದ್ದರು. ಈಗ ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಬೇಕಿದೆ. ಇಂದಿನ ಸಭೆಯಲ್ಲಿ ಹಿಂದುಳಿದ ವರ್ಗದವರಿದ್ದಾರೆ.

ಒಕ್ಕಲಿಗ, ಲಿಂಗಾಯತ ಸಮುದಾಯದ ಬಗ್ಗೆ ನಾವು ಮಾತಾಡಲ್ಲಾ. ನಮ್ಮ ಸಮುದಾಯಗಳಲ್ಲೇ ನೂರಾರು ಸಮಸ್ಯೆಗಳು ಇವೆ. ಅವುಗಳನ್ನ ಚರ್ಚೆ ಮಾಡಿ ಸಿಎಂ ಮುಂದೆ ಇಡುತ್ತೇವೆ ಎಂದರು.

Follow Us:
Download App:
  • android
  • ios