Asianet Suvarna News Asianet Suvarna News

Shaurya Awards : ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ಬಂಪರ್‌

  • ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ಬಂಪರ್‌
  • ಅನುದಾನ ಆರು ಪಟ್ಟು ಹೆಚ್ಚಿಸಿದ ಸಿಎಂ
  • ಅಶೋಕ, ಪರಮ ವೀರ ಚಕ್ರ ಪುರಸೃತರಿಗೆ 1.5 ಕೋಟಿ ರು.
Cash reward for awarded soldiers raised  By Karnataka Govt snr
Author
Bengaluru, First Published Dec 17, 2021, 8:25 AM IST

ಬೆಳಗಾವಿ (ಡಿ.17):   ರಾಜ್ಯ ಸರ್ಕಾರವು (Karnataka Govt) ಪರಮವೀರ ಚಕ್ರ, ಮಹಾವೀರ ಚಕ್ರ, ಅಶೋಕ ಚಕ್ರ ಸೇರಿದಂತೆ ವಿವಿಧ ಶೌರ್ಯ ಪ್ರಶಸ್ತಿ (Shaurya Award) ವಿಜೇತರಿಗೆ ಒಂದು ಬಾರಿ ನೀಡಲಾಗುತ್ತಿರುವ ಅನುದಾನ ಮೊತ್ತವನ್ನು ಏಕಾಏಕಿ ಐದಾರು ಪಟ್ಟು ಹೆಚ್ಚಿಸಿದೆ. ಯುದ್ಧ (War) ಕಾಲದಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ (Award) ಪರಮವೀರ ಚಕ್ರ (ಪಿವಿಸಿ PVC) ಮತ್ತು ಶಾಂತಿ ಕಾಲದಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿ (Shaurya Award) ವಿಜೇತರಿಗೆ ನೀಡುವ ಅನುದಾನವನ್ನು 25 ಲಕ್ಷದಿಂದ 1.50 ಕೋಟಿ ರು. ವರೆಗೂ ಏರಿಸಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಘೋಷಿಸಿದ್ದು, ಈಗಾಗಲೇ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ.

ಬೆಳಗಾವಿಯ (Belagavi) ಮರಾಠಿ ಲಘು ಪದಾತಿ ದಳ ಕೇಂದ್ರ (ಎಂಎಲ್ ಐಆರ್‌ಸಿ)ದ ಆವರಣದಲ್ಲಿ ಗುರುವಾರ ಹಮ್ಮಿ ಕೊಳ್ಳಲಾಗಿದ್ದ ವಿಜಯ ದಿವಸ (Vijay Divas) ಕಾರ್ಯಕ್ರಮದಲ್ಲಿ ಭಾಗವಹಿಸಿ, 1971ರ ಇಂಡೋ​ಪಾಕ್‌ ಯುದ್ಧದಲ್ಲಿ (War) ಪಾಕಿಸ್ತಾನವನ್ನು (Pakistan) ಬಗ್ಗು ಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾದ ಹುತಾತ್ಮ ಯೋಧರಿಗೆ (Sodliers) ಗೌರವ ಸಮರ್ಪಿಸಿದ ಬಳಿಕ ಮಾತನಾಡಿದ ಅವರು ಅನುದಾನ ಮೊತ್ತವನ್ನು ಪರಮವೀರ ಚಕ್ರ ಪ್ರಶಸ್ತಿಗೆ ರು.1.50 ಕೋಟಿ, ಮಹಾವೀರ ಚಕ್ರ ರು.1 ಕೋಟಿ, ಅಶೋಕ ಚಕ್ರ ರು .1.50 ಕೋಟಿ, ಕೀರ್ತಿ ಚಕ್ರ ರು.1 ಕೋಟಿ, ವೀರ ಚಕ್ರ ಹಾಗೂ ಶೌರ್ಯ ಚಕ್ರ ರು.50 ಲಕ್ಷ ಹಾಗೂ ವಿವಿಧ ಸೇನಾ ಮೆಡಲ್ (Medal) ಗಳಿಗೆ  ರು 15 ಲಕ್ಷಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಪರಮ ವೀರ ಚಕ್ರ ವಿಜೇತರಿಗೆ ರು.25 ಲಕ್ಷ, ಮಹಾವೀರ ಚಕ್ರ ರು.12 ಲಕ್ಷ, ಅಶೋಕ ಚಕ್ರ ರು.25 ಲಕ್ಷ, ಕೀರ್ತಿ ಚಕ್ರ ರು.12 ಲಕ್ಷ, ವೀರ ಚಕ್ರ ರು.8 ಲಕ್ಷ, ಶೌರ್ಯ ರು.8 ಲಕ್ಷ, ಸೇನಾ ಮೆಡಲ್‌ ವಿಜೇತರಿಗೆ ರು.2 ಲಕ್ಷ ಅನುದಾನ ನಿಗದಿಪಡಿಸಲಾಗಿತ್ತು. ಆದರೆ ಈ ಮೊತ್ತವು ಇತರೆ ರಾಜ್ಯಗಳಿಗೆ (State) ಹೋಲಿಸಿದರೆ ಕಡಿಮೆ ಇದೆ. ಹೀಗಾಗಿ ಯೋಧರ ಮನೋಭಿಲಾಷೆಯನ್ನು ಹೆಚ್ಚಿಸಿ ದೇಶ  ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಹಾಗೂ ಯೋಧರ (Soldiers) ಮನ ಸ್ಥೈರ್ಯವನ್ನು ಹೆಚ್ಚಿಸಲು ಸಹ ಪ್ರೋತ್ಸಾಹಿಸಿದಂತಾಗುತ್ತದೆಂದ ಕಾರಣಕ್ಕೆ ಅನುದಾನದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯಾರಿಗೆ ಎಷ್ಟು?

  • ಪರಮವೀರ ಚಕ್ರ 25 ಲಕ್ಷ 1.5 ಕೋಟಿ
  • ಮಹಾವೀರ ಚಕ್ರ 12 ಲಕ್ಷ 1 ಕೋಟಿ
  • ಅಶೋಕ ಚಕ್ರ 25 ಲಕ್ಷ 1.5 ಕೋಟಿ
  • ಕೀರ್ತಿ ಚಕ್ರ 12 ಲಕ್ಷ 1 ಕೋಟಿ
  • ವೀರ, ಶೌರ್ಯ ಚಕ್ರ 8 ಲಕ್ಷ 50 ಲಕ್ಷ
  • ಸೇನಾ ಮೆಡಲ್‌ 2 ಲಕ್ಷ 15 ಲಕ್ಷ

 ಶೌರ್ಯ ಪ್ರಶಸ್ತಿ ಪಡೆದ ಸೈನಿಕರಿಗೆ ಬಂಪರ್‌

  • ಅನುದಾನ ಆರು ಪಟ್ಟು ಹೆಚ್ಚಿಸಿದ ಸಿಎಂ
  • ಅಶೋಕ, ಪರಮ ವೀರ ಚಕ್ರ ಪುರಸೃತರಿಗೆ 1.5 ಕೋಟಿ ರು.
  • ಅನುದಾನವನ್ನು 25 ಲಕ್ಷದಿಂದ 1.50 ಕೋಟಿ ರು. ವರೆಗೂ ಏರಿಸಿರುವ  ಮುಖ್ಯಮಂತ್ರಿ
  • ಬೆಳಗಾವಿಯ ಮರಾಠಿ ಲಘು ಪದಾತಿ ದಳ ಕೇಂದ್ರ(ಎಂಎಲ್ ಐಆರ್‌ಸಿ)ದ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಜಯ ದಿವಸ 
  •  ಮೊತ್ತವು ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ
  • ಈ ನಿಟ್ಟಿನಲ್ಲಿ ಪ್ರಶಸ್ತಿ ಅನುದಾನದ ಏರಿಕೆ
Follow Us:
Download App:
  • android
  • ios