Asianet Suvarna News Asianet Suvarna News

Illegal stay: ಭಿವಂಡಿಯಲ್ಲಿ ಅಕ್ರಮವಾಗಿ ನೆಲೆಸಿದ 40 ಬಾಂಗ್ಲಾ ಪ್ರಜೆಗಳ ಬಂಧನ

ಇತ್ತೀಚೆಗೆ ದೇಶದ ವಿವಿಧೆಡೆ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ.  ಅಕ್ರಮವಾಗಿ ಗಡಿ ದಾಟಿ ಬರುವ ಇವರು ದೇಶದ ಪ್ರಮುಖ ನಗರಗಳಲ್ಲಿ ಇಲ್ಲಿನ ನಿವಾಸಿಗಳಂತೆ ಇದ್ದು ವಿವಿಧೆಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.  ಇತ್ತೀಚೆಗೆ ಸ್ಥಳೀಯ ಕೆಲ ರಾಜಕಾರಣಿಗಳ ಸ್ವಾರ್ಥದಿಂದಾಗಿ ಇವರಿಗೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಡಿತರ ಕಾರ್ಡ್‌ ಕೂಡ ದೊರಕುತ್ತಿರುವುದು ವಿಪರ್ಯಾಸ.

40 Bangladeshis arrested in Maharashtra for illegal stay in Bhiwandi akb
Author
Maharashtra, First Published Dec 1, 2021, 11:07 AM IST

ಮಾಹಾರಾಷ್ಟ್ರ(ಡಿ.1) ಮಹಾರಾಷ್ಟ್ರದ ಥಾಣೆ( Thane)ಜಿಲ್ಲೆಯ ಭಿವಂಡಿಯಲ್ಲಿ ಅಕ್ರಮವಾಗಿ ನೆಲೆಸಿದ್ದ 40 ಜನ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರ ಬಳಿ ನಕಲಿ ಪಾಸ್‌ ಪೋರ್ಟ್‌ ಹಾಗೂ ಆಧಾರ್‌ ಕಾರ್ಡ್‌ಗಳಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಭಿವಂಡಿ(Bhiwandi)ಯ ಮೂರು ಬೇರೆ ಬೇರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.  ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಡೆಪ್ಯೂಟಿ ಕಮೀಷನರ್‌ ((DCP)ಯೋಗೇಶ್‌ ಚೌಹಾಣ್‌(Yogesh Chavan), ಬಂಧಿತರೆಲ್ಲರೂ ಕಾರ್ಮಿಕರಾಗಿ  ನಗರದ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದರು.

ಭಾರತದಲ್ಲಿ ವಾಸಿಸುವುದಕ್ಕೆ ಬೇಕಾದ ಯಾವುದೇ  ಅಗತ್ಯ ದಾಖಲೆಗಳು ಇವರ ಬಳಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಿ ಭಾರತೀಯ ಪಾಸ್‌ಪೋರ್ಟ್ ಆಕ್ಟ್‌(Indian Passport Act) ಹಾಗೂ ವಿದೇಶಿ ಪ್ರಜೆಗಳ ಆಕ್ಟ್‌(Foreign Nationals Act) ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಬಾಂಗ್ಲಾ ಅಕ್ರಮ ವಲಸಿಗರು ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಪವರ್‌ಲೂಮ್‌ ನಗರದಲ್ಲಿ ಅನೇಕ ಕಡೆ ದಾಳಿ ನಡೆಸಿ ಇವರನ್ನು ಬಂಧಿಸಲಾಯಿತು. ಶಾಂತಿನಗರ( Shanti Nagar)ದಲ್ಲಿ 20 ಹಾಗೂ ಭಿವಂಡಿ ನಗರ(Bhiwandi town) ಹಾಗೂ ನರ್ಪೊಲಿ ಪೊಲೀಸ್‌ ಠಾಣೆ(Narpoli police station) ವ್ಯಾಪ್ತಿಯಲ್ಲಿ  ತಲಾ 10 ಜನರನ್ನು ಬಂಧಿಸಲಾಗಿದೆ.  

ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಚರ್ಚೆ: ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು ಕನ್ನಡ ಪ್ರಭ ವರದಿ

ಬಂಧಿತರಿಂದ ಪೊಲೀಶರು ನಕಲಿ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌(Aadhaar card), ಪಾನ್‌ ಕಾರ್ಡ್(PAN card) ಹಾಗೂ 94,000 ರೂಪಾಯಿ ಮೌಲ್ಯದ  28 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.  ಇವರು ಹೊಂದಿದ್ದ ನಕಲಿ ದಾಖಲೆಗಳಲ್ಲಿ ಮುಂಬೈ(Mumbai), ಗುಜರಾತ್‌ ಹಾಗೂ ಭಿವಂಡಿಯ ವಿಳಾಸಗಳಿದ್ದವು. ಹೀಗೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿಯರು, ನೆರೆಯ ದೇಶದಲ್ಲಿ ನೆಲೆಸಿದ್ದ ತಮ್ಮ ಬಂಧುಗಳೊಂದಿಗೆ ಹಾಗೂ  ಇವರಿಗೆ ಗಡಿ ದಾಟಲು ನೆರವಾದ ವ್ಯಕ್ತಿಯ ಜೊತೆ  ಮಾತನಾಡಲು  IMO ಆಪ್‌ಗಳನ್ನು ಬಳಸುತ್ತಿದ್ದರು. 

ಕಳೆದ ವಾರವಷ್ಟೇ ಕರ್ನಾಟಕ ಪೊಲೀಸರು ಐವರು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬೆಂಗಳೂರು ನಗರದಲ್ಲಿ ಬಂಧಿಸಿದ್ದರು. ಈ ವೇಳೆ ಮಾತನಾಡಿದ ಕರ್ನಾಟಕದ ಗೃಹ ಸಚಿವ(Karnataka Home Minister) ಆರಗ ಜ್ಞಾನೇಂದ್ರ( Araga Jnanendra) ಅಕ್ರಮ ವಲಸಿಗರು ದೇಶದ ಭದ್ರತೆಗೆ ಮಾರಕವಾಗಿದ್ದು, ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿರುವ ಇವರನ್ನು ಹುಡುಕಿ ಬಂಧಿಸುವಂತೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಆದೇಶ ನೀಡಲಾಗಿದೆ ಎಂದಿದ್ದರು.  ಈ ಬಾಂಗ್ಲಾ ಅಕ್ರಮ ವಲಸಿಗರು ರಾಜ್ಯದ ವಿವಿಧ  ಕಾಫಿ ತೋಟಗಳಲ್ಲಿ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಎಷ್ಟು ಮಂದಿ ನುಸುಳಿದ್ದಾರೆ ಎಂಬ ಸತ್ಯವನ್ನು ಅವರಿಂದ ಹೊರತರುತ್ತೇವೆ ಎಂದು ಜ್ಞಾನೇಂದ್ರ ಹೇಳಿದರು. ಇಲ್ಲಿನ ಆಧಾರ್ ಕಾರ್ಡ್‌ಗಳು, ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ರಾಜ್ಯದ ಬಡ ಜನರಿಗೆ ಸರ್ಕಾರ ಕಾಯ್ದಿರಿಸಿದ ಸವಲತ್ತುಗಳನ್ನು ಇವರು ಪಡೆಯುತ್ತಿದ್ದಾರೆ. ಅವರನ್ನು ನಮ್ಮ ದೇಶಕ್ಕೆ ಕರೆತರುವವರನ್ನು ಮೊದಲು ಬಂಧಿಸಿ ಕಟ್ಟುನಿಟ್ಟಿನ  ಕ್ರಮ ಕೈಗೊಳ್ಳುತ್ತೇವೆ ಎಂದರು.

1971 War victory: ಇಂಡಿಯಾ ಗೇಟ್‌ನಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಭಾರತ ಸಿದ್ಧತೆ

ಒಟ್ಟಿನಲ್ಲಿ ದೇಶದ ವಿವಿಧ ನಗರಗಳಲ್ಲಿ ಇವರು ದೇಶದ ನಾಗರಿಕರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ಆರಾಮವಾಗಿ ಪಡೆದು ಇಲ್ಲಿನ ನಿವಾಸಿಗಳಂತೆ ಬದುಕುತ್ತಿದ್ದಾರೆ. 2020ರ ಮಾರ್ಚ್‌ನಲ್ಲಿಯೂ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ದೊಡ್ಡ ಬೆಳವಂಗಲ ಹೋಬಳಿಯ ತಣ್ಣೀರಿನಹಳ್ಳಿ ಬಳಿಯಿರುವ ಕಸ ಸಂಸ್ಕರಣ ಘಟಕದಲ್ಲಿ  ಬಾಂಗ್ಲಾ ಅಕ್ರಮ ವಲಸಿಗರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತದಿಂದ ಯಾವುದೇ ಅನುಮತಿ ಪಡೆಯದೆ ನೂರಾರು ಕಾರ್ಮಿಕರನ್ನು ತ್ಯಾಜ್ಯ ವಿಂಗಡಣೆ ಮಾಡುವ ಕೆಲಸದಲ್ಲಿ ಬಳಕೆ ಮಾಡಿಸಿಕೊಳ್ಳಲಾಗುತ್ತಿದೆ. ವಾರದಲ್ಲಿ ಒಂದಿಷ್ಟು ಜನ ಬರುತ್ತಾರೆ, ಹೋಗುತ್ತಾರೆ. ಇವರು ಯಾರೆಂದೇ ಗೊತ್ತಿಲ್ಲ. ಇಲ್ಲಿರುವ ಕಾರ್ಮಿಕರು ಬಾಂಗ್ಲಾ ನುಸುಳುಕೋರರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. 
 

Follow Us:
Download App:
  • android
  • ios