ಪಿಡಿಒ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎನ್ನಲಾದ ವಿಡಿಯೋ ಹಂಚಿಕೊಂಡ ಅಭ್ಯರ್ಥಿಗಳು

8ನೇ ಡಿಸೆಂಬರ್ 2024 ರಂದು ನಡೆದ ಪಿಡಿಒ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸುಳಿವು ನೀಡಲಾಗಿದೆ.

Candidates share video of alleged PDO question paper leak mrq

ಬೆಂಗಳೂರು: 8ನೇ ಡಿಸೆಂಬರ್ 2024ರಂದು ರಾಜ್ಯದಲ್ಲಿ ಪಿಡಿಒ ನೇಮಕಾತಿ ಪರೀಕ್ಷೆಗಳು ನಡೆದಿದ್ದವು. ತುಮಕೂರಿನ  ಕೇಂದ್ರದಲ್ಲಿ ಬ್ಲ್ಯೂಟೂತ್ ಬಳಸಿ  ಎಕ್ಸಾಂ ಬರೆಯುತ್ತಿದ್ದ ಅಭ್ಯರ್ಥಿಯನ್ನು  ಪೊಲೀಸರು ಬಂಧಿಸಿದ್ದರು.  ಈ ಪ್ರಕರಣದ  ಬೆನ್ನಲ್ಲೇ  ಪಿಡಿಒ  ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ  ಆರೋಪಗಳು ಸಹ ಕೇಳಿ  ಬಂದಿದ್ದವು. ಈ  ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ  ಸ್ಪಷ್ಟನೆ ನೀಡಿದ್ದರು. ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೇರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ, ಪ್ರತಿಭಟನೆ ಮಾಡಿದ 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಸಹ ಆಗಿಲ್ಲ. ಉಪಸಮಿತಿ ಸಲ್ಲಿಸಲಿರುವ ವರದಿಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು.

ಇದೀಗ ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.   ಈ ವಿಡಿಯೋವನ್ನು ಸಿಎಂ, ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಟ್ಯಾಗ್ ಮಾಡಿ, ಅಭ್ಯರ್ಥಿಗಳು ನ್ಯಾಯಕ್ಕಾಗಿ  ಆಗ್ರಹಿಸುತ್ತಿದ್ದಾರೆ. ಈ  ವಿಡಿಯೋಗೆ ಕಮೆಂಟ್ ಮಾಡಿದ  ನೆಟ್ಟಿಗರು, ಈ ಪರೀಕ್ಷಾ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಗಮನಿಸಿದರೆ ಪರೀಕ್ಷೆಯು ಪಾರದರ್ಶಕವಾಗಿ, ಸುಸೂತ್ರವಾಗಿ ನಡೆದಿದೆ ಎನಿಸುವುದಿಲ್ಲ. ಹಲವು ಸಂಶಯ, ಊಹಾಪೋಹಗಳಿಗೆ ಎಡೆಮಾಡಿಕೊಡುತ್ತದೆ. ಅಂದ ಹಾಗೇ ಪರೀಕ್ಷಾ ಕೇಂದ್ರದ ವಾತಾವರಣ ಈ ರೀತಿ ಇರಲೇಬಾರದು. ತ್ರಿಸದಸ್ಯ ಉಪಸಮಿತಿಯು ಈ ಬಗ್ಗೆ ತ್ವರಿತವಾಗಿ ವಿಚಾರಣೆ ನಡೆಸಿ ಸತ್ಯವನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಿಡಿಒ ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗೇ ತಪ್ಪು ಮಾಹಿತಿ ನೀಡಿತೇ ಕೆಪಿಎಸ್‌ಸಿ?

ವೈರಲ್ ವಿಡಿಯೋ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿರುವ ಕಾಂತಕುಮಾರ್ ಆರ್, PDO ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂಬ ಮಾನ್ಯ ಮುಖ್ಯಮಂತ್ರಿಗಳ ಸುಳ್ಳು ಉತ್ತರಕ್ಕೆ ಅಭ್ಯರ್ಥಿಗಳು ಸೆರೆ ಹಿಡಿದಿರುವ ಸಾಕ್ಷಿ.  ನಿಜ ಕಣ್ಣು ಮುಂದೆ ಇದ್ದರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳುಗಳ ಸರಮಾಲೆಯನ್ನು ಹೆಣೆದಿರುವ KPSC, PDO ಮರು ಪರೀಕ್ಷೆ ಆಗಲೇ ಬೇಕು ಹಾಗೂ 12 ವಿದ್ಯಾರ್ಥಿಗಳ ಮೇಲೆ ಹಾಕಿರುವ FIR ಹಿಂಪಡೆಯಬೇಕು ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬನಿಯನ್ ಒಳಗೆ ಕೆಮೆರಾ, ಡಾಂಗಲ್ ಒಯ್ದಿದ್ದ ಪಿಡಿಒ ಅಭ್ಯರ್ಥಿ! ಮೆಟಲ್ ಡಿಟೆಕ್ಟರ್‌ನಲ್ಲೂ ಪತ್ತೆಯಾಗಲಿಲ್ಲ ಅಕ್ರಮ

Latest Videos
Follow Us:
Download App:
  • android
  • ios