ಕಲಬುರಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು?
ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆಯಿಂದಾಗಿ ಒಳರೋಗಿ ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಈ ಘಟನೆ ಕುರಿತಂತೆ ರೋಗಿಯ ಬಂಧುಗಳ ಆಸ್ಪತ್ರೆಯ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದಾರೆ.
ಕಲಬುರಗಿ (ಮೇ.28) : ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆಯಿಂದಾಗಿ ಒಳರೋಗಿ ಸಾವನ್ನಪ್ಪಿರುವ ದುರಂತ ಘಟನೆ ಸಂಭವಿಸಿದೆ. ಈ ಘಟನೆ ಕುರಿತಂತೆ ರೋಗಿಯ ಬಂಧುಗಳ ಆಸ್ಪತ್ರೆಯ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿರುವ ರೋಗಿಯನ್ನು ಬೀದರ್ ಮೂಲದ ಝಕೀರಾ ಬೇಗಂ (50) ಎಂದು ಗುರುತಿಸಲಾಗಿದೆ. ಇಲ್ಲಿನ ಕಿದ್ವಾಯಿ ಆಸ್ಪತ್ರೆಯ ಐಸಿಯುನಲ್ಲಿ ಮೂವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈ ಮೂವರು ರೋಗಿಗಳಲ್ಲಿಯೇ ಬೇಗಂ ಎಂಬುವವರು ಆಕ್ಸಿಜನ್ ಕೊರತೆ ಕಾಡಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಆಕ್ಸಿಜನ್ ಕೊರತೆ ಕಾಡುತ್ತಿದ್ದಂತೆಯೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ತಕ್ಷಣ ಇನ್ನುಳಿದ ರೋಗಿಗಳನ್ನು ಜಿಮ್ಸ್ ಐಸಿಯೂಗೆ ಸ್ಥಳಾಂತರಿಸಿದ್ದಾರೆಂದು ಗೊತ್ತಾಗಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬೆಳಗ್ಗೆ ಎರಡು ಗಂಟೆಗಳ ಕಾಲ ಆಕ್ಸಿಜನ್ ಕೊರತೆ ಕಾಡಿತ್ತು ಎಂದು ಹೇಳಲಾಗುತ್ತಿದೆ.
ಡೇಂಜರಸ್ ಬ್ಲಡ್ ಕ್ಯಾನ್ಸರ್‌ನಲ್ಲಿದೆ ಹಲವು ವಿಧ, ರೋಗಲಕ್ಷಣಗಳ ಬಗ್ಗೆ ಗೊತ್ತಿರ್ಲಿ
ಆಕ್ಸಿಜನ್ ಖಾಲಿಯಾಗಿದ್ದರಿಂದ ಝಕೀರಾ ಬೇಗಂ ಅನ್ನೋ ರೋಗಿ ಸಾವಿನ ಶಂಕೆ, ಆಕ್ಸಿಜನ್ ಖಾಲಿಯಾಗಿದ್ದರಿಂದ ಇನ್ನೋರ್ವ ರೋಗಿ ಕನ್ಯಾಕುಮಾರಿ ಬೇರೆಡೆ ಶಿಫ್ಟ… ಮಾಡಿದ್ದು ಆಕೆ ಜೀವನ್ಮರಣ ಹೋರಾಟದಲ್ಲಿ ಸಿಲುಕಿದ್ದಾರೆಂದು ಬಂಧುಗಳು ಹೇಳುತ್ತಿದ್ದಾರೆ.
ಆಕ್ಸಿಜನ್ ಖಾಲಿಯಾಗಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಬೆರೆಯದ್ದೇ ಸಮಜಾಯಿಷಿ ನೀಡುತ್ತ ಸಬೂಬು ಹೇಳುತ್ತಿದ್ದಾರೆ. 15ರಿಂದ 20 ನಿಮಿಷದಲ್ಲಿ ಆಕ್ಸಿಜನ್ ಬರ್ತಾ ಇತ್ತು. ಆದರೆ ಝಕೀರಾ ಬೇಗಂ ಸಾವನ್ನಪ್ಪಿರೋದು ಬೇರೆಯೆ ಕಾರಣದಿಂದ ಎಂದು ಆಸ್ಪತ್ರೆ ವೈದ್ಯ ನವೀನ್ ಹೇಳಿದ್ದಾರೆ.
ಗರ್ಭಕೋಶದಲ್ಲಿ 2.5 ಕೆಜಿ ಗಡ್ಡೆ ಪತ್ತೆ; ಶಸ್ತ್ರ ಚಿಕಿತ್ಸೆ ಯಶಸ್ವಿ
ಈ ಘಟನೆ ಕುರಿತಂತೆ ಹೇಳಿರುವ ಅವರು ಆಕ್ಸಿಜನ್ ಕೊರತೆ ಕಾರಣವಲ್ಲ ಎಂದಿದ್ದಾರೆ. ಝಕೀರಾ ಬೇಹಗಂ ಅವರು ಕ್ಯಾನ್ಸರ್‌ನ ತೀವ್ರತೆಯಿಂದ ಬಳಲಿ ಸಾವನ್ನಪ್ಪಿರೋದಾಗಿ ಆಸ್ಪತ್ರೆ ವೈದ್ಯ ಡಾ. ನವೀನ್ ಹೇಳಿದ್ದಾರೆ. ಆದರೆ ರೋಗಿ ಬಧುಗಳು ಈ ಬಗ್ಗೆ ವೈದ್ಯರ ಹೇಳಿಕೆ ನಂಬುತ್ತಿಲ್ಲ. ರೋಗಿಯ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣವೆಂದು ದೂರುತ್ತಿದ್ದಾರೆ. ಈ ಕುರಿತಂತೆ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡುತ್ತಿಲ್ಲ.