Asianet Suvarna News Asianet Suvarna News

ಟ್ರಾಫಿಕ್‌ಜಾಂ, ಆಕ್ಸಿಡೆಂಟ್‌ ಆ​ದರೆ 112ಕ್ಕೆ ಕರೆ ಮಾಡಿ; ತಕ್ಷಣವೇ ಸ್ಥಳಕ್ಕೆ ಕೋಬ್ರಾ ಸಿಬ್ಬಂದಿ ಹಾಜರ್!

ಟ್ರಾಫಿಕ್‌ ಜಾಮ್‌, ನಿಷೇಧಿತ ಪ್ರದೇಶದಲ್ಲಿ (ನೋ ಪಾರ್ಕಿಂಗ್‌) ವಾಹನ ನಿಲುಗಡೆ, ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಕಿರಿಕಿರಿ ಹೀಗೆ ಸಂಚಾರ ಸಮಸ್ಯೆಗಳ ಬಗ್ಗೆ ಇನ್ನು ಮುಂದೆ ನಮ್ಮ-112ಕ್ಕೆ (ಪೊಲೀಸ್‌ ನಿಯಂತ್ರಣ ಕೊಠಡಿ) ನಾಗರಿಕರು ಕರೆ ಮಾಡಿ ಪೊಲೀಸರ ನೆರವು ಪಡೆಯಬಹುದು.

Call 112 in case of traffic jam, accident bengaluru city commissioner tweets rav
Author
First Published Jul 22, 2023, 12:37 PM IST

ಬೆಂಗಳೂರು (ಜು.22) :  ಟ್ರಾಫಿಕ್‌ ಜಾಮ್‌, ನಿಷೇಧಿತ ಪ್ರದೇಶದಲ್ಲಿ (ನೋ ಪಾರ್ಕಿಂಗ್‌) ವಾಹನ ನಿಲುಗಡೆ, ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಕಿರಿಕಿರಿ ಹೀಗೆ ಸಂಚಾರ ಸಮಸ್ಯೆಗಳ ಬಗ್ಗೆ ಇನ್ನು ಮುಂದೆ ನಮ್ಮ-112ಕ್ಕೆ (ಪೊಲೀಸ್‌ ನಿಯಂತ್ರಣ ಕೊಠಡಿ) ನಾಗರಿಕರು ಕರೆ ಮಾಡಿ ಪೊಲೀಸರ ನೆರವು ಪಡೆಯಬಹುದು.

ಇದುವರೆಗೆ ಕಳ್ಳತನ, ಕೊಲೆ, ಕಿರುಕುಳ ಹಾಗೂ ರೋಡ್‌ ರೋಮಿಯೋಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್‌ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಅವಕಾಶ ಇತ್ತು. ಇನ್ಮೇಲೆ ಸಂಚಾರ ಸಮಸ್ಯೆಗಳಿಗೂ ಸಹ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾಗಿದೆ.

Bengaluru: ರಾಜ್ಯದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ, ನಡುರಸ್ತೆಯಲ್ಲೇ ಟ್ರಾಫಿಕ್‌ ಪೊಲೀಸ್ ಮೇಲೆ ಹಲ್ಲೆ!

ಇತ್ತೀಚಿಗೆ ಮಲ್ಲೇಶ್ವರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾಗರಿಕರೊಬ್ಬರು ಸೂಚಿಸಿದಂತೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ 112 ಸೌಲಭ್ಯ ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರ ವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿ (ಕೋಬ್ರಾ) ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌(Bengaluru city Police Commissioner B. Dayanand) ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಹಲವು ಜನರಿಂದ ಪ್ರತಿಕ್ರಿಯೆ ಸಹ ಬಂದಿದೆ.

Follow Us:
Download App:
  • android
  • ios