Bengaluru: ರಾಜ್ಯದಲ್ಲಿ ಪೊಲೀಸರಿಗೆ ಇಲ್ಲ ರಕ್ಷಣೆ, ನಡುರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!
ನೋ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಕಿರಿಕ್‌ಗೆ ಬಾಣಸವಾಡಿ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಉಮೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಈ ಕುರಿತಂತೆ ಕಮ್ರಾನ್ ಶಾಹಿದ್ ಎನ್ನುವ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ಜು.20): ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ. ಬಾಣಸವಾಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನ ಕಾನ್ಸ್‌ಟೇಬಲ್ ಉಮೇಶ್ ಹಲ್ಲೆಗೊಳಗಾದ ವ್ಯಕ್ತಿ. ಕಮ್ರಾನ್ ಶಾಹಿದ್ ಎನ್ನುವ ವ್ಯಕ್ತಿ ತಾನು ಸೇರಿದಂತೆ ಇತರ ಕೆಲವರೊಂದಿಗೆ ಸೇರಿಕೊಂಡು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಜುಲೈ 19ರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದೇ ಎಫ್‌ಐಆರ್ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ತಿಳಿಸಿದೆ. ಐಪಿಸಿ ಸೆಕ್ಷನ್ 360/23 u/s 353 ,332, 504 ,506 ಹಾಗೂ R/w 34 ಅಡಿಯಲ್ಲಿ ಕಮ್ರಾನ್ ಶಾಹೀದ್ ಎನ್ನುವವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಮ್ಮನಹಳ್ಳಿಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಮ್ರಾನ್ ಶಾಹಿದ್ ತಮ್ಮ ಕಾರ್‌ಅನ್ನು ಪಾರ್ಕ್ ಮಾಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಲು ಉಮೇಶ್ ಮುಂದಾಗಿದ್ದಲ್ಲದೆ, ಫೈನ್ ಕಟ್ಟುವಂತೆ ಹೇಳಿದ್ದರು. ಆದರೆ, ಇದರಿಂದ ಸಿಟ್ಟಿಗೆದ್ದ ಕಮ್ರಾನ್ ಶಾಹಿದ್ ನಡು ರಸ್ತೆಯಲ್ಲಿಯೇ ಕರ್ತ್ಯವ್ಯ ನಿರತ ಪೊಲೀಸ್ ಪೇದೆಯ ಮೇಲೆ ತಮ್ಮ ಸಹಚರರ ಜೊತೆಗೂಡಿ ಹಲ್ಲೆ ಮಾಡಿದ್ದಾರೆ.
ಅದರೊಂದಿಗೆ ಉಮೇಶ್‌ಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ರಾಜ್ಯದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಪೆಟ್ರೋಲ್ ಟ್ಯಾಂಕ್ ಮೇಲೆ ಕೂತ ಯುವತಿಯಿಂದ ಬೈಕ್ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್
'ಜನರಿಗೆ ಮುಸ್ಲಿಂ ಸಮುದಾಯದ ಎಂಥ ಭಾವನೆ ಬರುತ್ತೆ ಇದನ್ನ ನೋಡ್ಬೇಕು... ಪೊಲೀಸ್ ವ್ಯವಸ್ಥೆ ನ್ಯಾಯಾಂಗ ಬಗ್ಗೆ ಎಷ್ಟು ಗೌರವ ಇದೆ.. Wrong msg passs ಆಗುತ್ತೆ and ಒಬ್ಬರಿಗೆ ಹೊಡೆಯುವ ಅಧಿಕಾರ ಯಾರು ಕೊಟ್ಟಿದ್ದು and ಡ್ಯೂಟಿ ಪೊಲೀಸ್ ಮೇಲೆ ಕೈ ಮಾಡಿದಕ್ಕೆ ಸೆಕ್ಷನ್ 504 3 ವರ್ಷ ಜೈಲು ಶಿಕ್ಷೆ ಆಗುತ್ತೆ.. ಪೊಲೀಸ್ ಮೇಲೆ easy ಆಗಿ ಕೈ ಮಾಡೋ ಜನ..ಹಾಗಾದ್ರೆ ಜನ ಸಾಮಾನ್ಯರ ಕಥೆ ಏನು' ಎಂದು ಅಜಿತ್ ಗೌಡ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಮೊಬೈಲ್ ಕಳ್ಳನನ್ನು ಬೆನ್ನಟ್ಟಿ ಹಿಡಿದ ಟ್ರಾಫಿಕ್ ಪೊಲೀಸ್; ಸಾರ್ವಜನಿಕರಿಂದ ಮೆಚ್ಚುಗೆ