ಸಿ.ಟಿ. ರವಿ ಬಿಡುಗಡೆ ಆದೇಶ ಸಿಕ್ಕ ನಂತರ ಮೊದಲ ರಿಯಾಕ್ಷನ್; ಹೆಂಡ್ತಿ ನೆನಪಿಸಿಕೊಂಡ ನಾಯಕ!

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇರೆಗೆ ಬಂಧಿತರಾಗಿದ್ದ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ರವಿ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಅವರ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.

C T Ravi First reaction after release order and he remembers wife sat

ದಾವಣಗೆರೆ (ಡಿ.20): ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇರೆಗೆ ಬಂಧಿತರಾಗಿದ್ದ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ರವಿ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಅವರ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂಬ ಆರೋಪದ ಬೆನ್ನಲ್ಲಿಯೇ ಸಚಿವೆ ಕೊಟ್ಟ ದೂರಿನ ಅನ್ವಯ ಯಾವುದೇ ನೋಟೀಸ್ ನೀಡಿದೇ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಸುವರ್ಣ ಸೌಧದೊಳಗೆ ನುಗ್ಗಿ ಪೊಲೀಸರು ಬಂಧನ ಮಾಡುತ್ತಾರೆ. ಈ ಪ್ರಕ್ರಿಯೆ ಸರಿಯಾಗಿಲ್ಲವೆಂದು ನಿರ್ಧರಿಸಿ ಹೈಕೋರ್ಟ್‌ನಿಂದ ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗುತ್ತದೆ. ಇದರ ಬೆನ್ನಲ್ಲಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಕರೆ ತರಲಾಗುತ್ತಿದ್ದ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಆದೇಶ ಪೊಲೀಸರಿಗೆ ಸಿಕ್ಕಿದ ಬೆನ್ನಲ್ಲಿಯೇ ದಾವಣಗೆರೆಯಲ್ಲಿ ಅವರಿಗೆ ಬಿಡುಗಡೆ ಮಾಡಲು ಮುಂದಾಗುತ್ತಾರೆ. ಪೊಲೀಸರು ಬಿಡುಗಡೆಗೂ ಮೊದಲೇ ಮೊಬೈಲ್‌ನಲ್ಲಿ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಬಿಡುಗಡೆ ಆದೇಶ ಸಿಕ್ಕಿದ ನಂತರ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮೊದಲ ಬಾರಿಗೆ ಮಾತನಾಡಿದ ಸಿ.ಟಿ. ರವಿ ಅವರು, ಇಲ್ಲಿ ನಾನು ಮಾಡದ ತಪ್ಪಿಗೆ ಸುಳ್ಳು ಆರೋಪಕ್ಕೆ ನನ್ನ ಮೇಲೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ನಾನು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದೇನೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲದೇ, ನೋಟೀಸ್ ನೀಡಿದೇ ಬಂಧಿಸಿದ್ದಾರೆ, ಇಲ್ಲಿ ಸಚಿವೆ ಕೊಟ್ಟ ದೂರನ್ನು ದಾಖಲಿಸಿ ಎಫ್‌ಐಆರ್ ದಾಖಲಿಸಿಕೊಂಡಿರುವ ಸರ್ಕಾರ ನನ್ನನ್ನು ಬಂಧಿಸಿದೆ. ಸಚಿವೆ ಕೊಟ್ಟ ದೂರು ಎಫ್‌ಐಆರ್ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಬಂದು ಅರೆಸ್ಟ್ ಮಾಡಿದ್ದಾರೆ. ನಿನ್ನೆ ನನ್ನನ್ನು ಬಂಧಿಸಿದ ನಂತರ ಪೊಲೀಸರ ಅಸಹಾಯಕತೆ ಮತ್ತು ಮೇಲಿನ ಒತ್ತಡದ ಬಗ್ಗೆ ನನಗೆ ಸ್ಪಷ್ಟವಾಗಿ ಅರಿವಾಗಿದೆ.

ಇದನ್ನೂ ಓದಿ: ಸಿಟಿ ರವಿಗೆ ರಿಲೀಫ್; ಪೊಲೀಸರಿಗೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ

ಸುವರ್ಣ ಸೌಧದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದ್ದು, ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ನಾನು ಕೊಟ್ಟ ದೂರನ್ನು ಈವರೆಗೆ ಎಫ್‌ಐಆರ್ ಕೂಡ ಮಾಡಿಕೊಂಡಿಲ್ಲ. ನಾನು ದೂರು ಕೊಟ್ಟರೂ ಅದನ್ನು ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಲಾಗಿದೆ. ನಾನು ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಯಾವ ರೀತಿಯಾಗಿ ಹೋರಾಟ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ರಾಜ್ಯದಾದ್ಯಂತ ನನ್ನ ಬಂಧನವಾದ ನಂತರ ಬಿಜೆಪಿ ಕಾರ್ಯಕರ್ತರಿಂದ ಹಿಡಿದು ದೊಡ್ಡ ನಾಯಕರೂ ಕೂಡ ಬೆಂಬಲಿಸಿದ್ದಾರೆ, ಅವರೆಲ್ಲರಿಗೂ ಧನ್ಯವಾದಗಳು. ಜೊತೆಗೆ, ಕಾನೂನು ತಜ್ಞರು ಹಾಗೂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಹೆಂಡತಿಯನ್ನು ನೆನಪಿಸಿಕೊಂಡ ಸಿ.ಟಿ. ರವಿ: 
ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಟಿ. ರವಿ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಭಾಗಿಯಾಗಲು ಹೋದವರು ಏಕಾಏಕಿ ಪೊಲೀಸರಿಂದ ಬಂಧನವಾಗಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ಸಂಪಾದಕರು ಇದೀಗ ಹೈಕೋರ್ಟ್‌ನಿಂದ ಬಿಡುಗಡೆ ಆದೇಶ ಬಂದಿದೆ. ನೀವು ಮನೆಯವರನ್ನು ಸಂಪರ್ಕ ಮಾಡಿದ್ದೀರಾ? ಮನೆಯಲ್ಲಿ ಎಂತಹ ಪರಿಸ್ಥಿತಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ನನ್ನನ್ನು ಮದುವೆ ಆಗುವ ಮುಂಚೆಯೇ ನನ್ನ ಹೋರಾಟದ ಹಿನ್ನೆಲೆಯ ಬಗ್ಗೆ ಗೊತ್ತಿದೆ. ಈ ಕಾರಣಕ್ಕೆ ಅವರು ನಾನು ಬಂಧನ ಆಗಿರುವುದರಿಂದ ಹೆದರಿಕೊಂಡು ಕೂರುವವರಲ್ಲ. ಅಳುತ್ತಾ ಮೂಲೆಯಲ್ಲಿ ಕೂರುವವರಲ್ಲ. ನನ್ನ ಪತ್ನಿಗೆ ಎಲ್ಲವನ್ನು ಎದುರಿಸುವ ಶಕ್ತಿಯಿದೆ. ಆದರೂ ಸ್ವಲ್ಪ ಆತಂಕಕ್ಕೆ ಒಳಗಾಗಿರುತ್ತಾರೆ ಎಂದು ಸಿ.ಟಿ. ರವಿ ಅವರು ಹೇಳಿದರು.

ಇದನ್ನೂ ಓದಿ: ಲಕ್ಷ್ಮೀಗೆ ವೇ* ಎಂದ ಸಿ.ಟಿ. ರವಿಗೆ ಪರಿಷತ್ ಹೊರಗೆ ಹಲ್ಲೆ, ಒಳಗಡೆ ತಾಯಿ, ಮಗಳು, ಹೆಂಡ್ತಿ ಬಗ್ಗೆ ಬೈಗುಳ!

Latest Videos
Follow Us:
Download App:
  • android
  • ios