ದೂರದ ಬಿಹಾರದಿಂದ ಖೋಟಾ ನೋಟು ತಂದು ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಅಂತರ್‌ ರಾಜ್ಯದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.1) :  ದೂರದ ಬಿಹಾರದಿಂದ ಖೋಟಾ ನೋಟು ತಂದು ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಅಂತರ್‌ ರಾಜ್ಯದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಸರವಣನ್‌ (34) ಮತ್ತು ಕೇರಳ ಮೂಲದ ದೇವನ್‌ (20) ಹಾಗೂ ನಿತಿನ್‌(19) ಬಂಧಿತರು. ಆರೋಪಿಗಳಿಂದ .500 ಮುಖಬೆಲೆಯ .6.53 ಲಕ್ಷ ಮೌಲ್ಯದ 1,307 ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ಸ್ಕೈವಾಕ್‌ ಬಳಿ ಅಪರಿಚಿತರು ನಕಲಿ ನೋಟು ಚಲಾವಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

7ನೇ ಕ್ಲಾಸ್‌ಗೆ ಶಾಲೆ ಬಿಟ್ಟು, ಯೂಟ್ಯೂಬ್‌ನಲ್ಲಿ ಖೋಟಾ ನೋಟು ಮಾಡೋದು ಕಲಿತ ಖದೀಮ..

ಬಂಧಿತ ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಈ ಖೋಟಾ ನೋಟು ದಂಧೆಗೆ ಇಳಿದಿದ್ದರು. ‘ಫೇಕ್‌ ಕರೆನ್ಸಿ ತಮಿಳುನಾಡು’ ಹಾಗೂ ‘ಮೋಟೋ ಹ್ಯಾಕರ್‌.93’ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಖೋಟಾ ನೋಟು ದಂಧೆಕೋರರ ಸ್ನೇಹ ಬೆಳೆಸಿದ್ದರು. ಬಳಿಕ ಅವರನ್ನು ಸಂಪರ್ಕಿಸಿ ಅಸಲಿ ನೋಟು ಕೊಟ್ಟು ಖೋಟಾ ನೋಟು ಪಡೆದು ದಂಧೆ ನಡೆಸುತ್ತಿದ್ದರು. ಈ ಖೋಟಾ ನೋಟು ದಂಧೆಯ ಕಿಂಗ್‌ಪಿನ್‌ ಬಿಹಾರದ ಪಾಟ್ನಾದಲ್ಲಿದ್ದಾನೆ.

ಆರೋಪಿ ಸರವಣನ್‌ ಬಿಹಾರಕ್ಕೆ ತೆರಳಿ ಈ ಕಿಂಗ್‌ಪಿನ್‌ನನ್ನು ಸಂಪರ್ಕಿಸಿ .25 ಸಾವಿರ ಅಸಲಿ ನೋಟಿಗೆ .1 ಲಕ್ಷ ಖೋಟಾ ನೋಟಿನಂತೆ ಒಟ್ಟು .10 ಲಕ್ಷ ಖೋಟಾ ನೋಟು ಪಡೆದುಕೊಂಡಿದ್ದ. ಬಳಿಕ ಆರೋಪಿಗಳು ಸೇರಿಕೊಂಡು ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದರು. ಈ ಹಿಂದೆಯೂ ಸುಮಾರು .4 ಲಕ್ಷ ಖೋಟಾ ನೋಟು ತಂದು ಯಶಸ್ವಿಯಾಗಿ ಚಲಾವಣೆ ಮಾಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

.10 ಲಕ್ಷ ಚಲಾವಣೆಗೆ ಯತ್ನ

ಆರೋಪಿಗಳು .10 ಲಕ್ಷ ಖೋಟಾ ನೋಟು ತಂದು ನಗರದ ಮೆಜೆಸ್ಟಿಕ್‌, ಕೆಎಸ್‌ಆರ್‌ ರೈಲು ನಿಲ್ದಾಣ, ಕೆ.ಆರ್‌.ಮಾರ್ಕೆಟ್‌ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿನ ಅಂಗಡಿಗಳು, ವಾಣಿಜ್ಯ ಮಳಿಗೆಗಳಲ್ಲಿ ಗ್ರಾಹಕರ ಸೋಗಿನಲ್ಲಿ ಚಲಾವಣೆಗೆ ಮುಂದಾಗಿದ್ದರು. ಆರೋಪಿಗಳಿಗೆ ಖೋಟಾ ನೋಟು ಪೂರೈಸುತ್ತಿದ್ದ ಬಿಹಾರದ ಕಿಂಗ್‌ಪಿನ್‌ ಬಗ್ಗೆ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ!

₹100 ವಸ್ತು ಖರೀದಿಸಿ .400 ಚಿಲ್ಲರೆ ಪಡೆಯುತ್ತಿದ್ದ ಗ್ಯಾಂಗ್‌

ಆರೋಪಿಗಳು ಅಂಗಡಿಗಳು, ವಾಣಿಜ್ಯ ಮಳಿಗೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದರು. .100 ವಸ್ತು ಖರೀದಿಸಿ .500 ಮುಖಬೆಲೆ ಖೋಟಾ ನೋಟು ನೀಡುತ್ತಿದ್ದರು. ಬಳಿಕ ಚಿಲ್ಲರೆ ರೂಪದಲ್ಲಿ .400 ಅಸಲಿ ನೋಟು ಪಡೆಯುತ್ತಿದ್ದರು. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಇದೇ ಮಾದರಿ ಅನುಸರಿಸಿ ಸುಲಭವಾಗಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.