ಉದ್ದಿಮೆ ಪರವಾನಗಿಗಾಗಿ ಇನ್ನು ಕಚೇರಿಗೆ ಅಲೆಯಬೇಕಿಲ್ಲ..!

ಉದ್ದಿಮೆಗಳಿಗೆ ಪರವಾನಗಿ ಮಾಡಿಸುವುದು ಬಹಳ ಕಷ್ಟದ ಕೆಲಸ. ಡಾಕ್ಯುಮೆಂಟ್ಸ್ ಹಿಡಿದು ಕಚೇರಿಗಳಿಗೆ ಅಲೆದಾಡಲೇ ಬೇಕು. ಇದೇ ಮೊದಲ ಬಾರಿಗೆ ನಗರದ ಎಲ್ಲ ಉದ್ದಿಮೆಗಳಿಗೆ ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗ ಮುಂದಾಗಿದೆ.

Business license to be given online in bangalore

ಬೆಂಗಳೂರು(ಜ.26): ಇದೇ ಮೊದಲ ಬಾರಿಗೆ ನಗರದ ಎಲ್ಲ ಉದ್ದಿಮೆಗಳಿಗೆ ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗ ಮುಂದಾಗಿದೆ.

2015ರಲ್ಲಿಯೇ ಆನ್‌ಲೈನ್‌ ಮೂಲಕ ಉದ್ದಿಮೆ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಆದೇಶಿಸಲಾಗಿತ್ತು. ಆದರೆ, ಜಾರಿ ಮಾಡಿರಲಿಲ್ಲ. ಈ ಬಾರಿ ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಉದ್ದಿಮೆ ಪರವಾನಗಿ ನೀಡುವ ವ್ಯವಸ್ಥೆ ಜಾರಿ ಮಾಡುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಉದ್ದಿಮೆ ಪರವಾನಗಿಯನ್ನು ಆನ್‌ಲೈನ್‌ ಮೂಲಕ ನೀಡಲು ಪಾಲಿಕೆಯ ಸಾರ್ವಜನಿಕ ಆರೋಗ್ಯ ವಿಭಾಗದ ಸಿದ್ಧತೆ ಮಾಡಿಕೊಂಡಿದೆ.

ಮುಸ್ಲಿಮರ ಅಭಿವೃದ್ಧಿ ಮಾಡಲ್ಲ ಎಂದ ರೇಣುಕಾಚಾರ್ಯಗೆ ಸಂಕಷ್ಟ

ಪಾಲಿಕೆಯ ವೆಬ್‌ಸೈಟ್‌ನಲ್ಲಿಯೇ ಅರ್ಜಿ ಭರ್ತಿ ಮಾಡಿ ಶುಲ್ಕವನ್ನೂ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ಉದ್ದಿಮೆದಾರ ಅರ್ಜಿ ಸಲ್ಲಿಸಿದ ಕೂಡಲೇ ಸ್ವೀಕೃತ ಪತ್ರ ದೊರೆಯಲಿದೆ. ತದ ನಂತರ ಸಂಬಂಧ ಪಟ್ಟವಲಯ ಹಾಗೂ ವಾರ್ಡ್‌ನ ಆರೋಗ್ಯ ಅಧಿಕಾರಿಗಳು ಉದ್ದಿಮೆ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಬಳಿಕ ವಲಯದ ಜಂಟಿ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿಗಳು ಅನುಮೋದನೆ ನೀಡಲಿದ್ದಾರೆ. ಉದ್ದಿಮೆದಾರ ಆನ್‌ಲೈನ್‌ನಲ್ಲಿಯೇ ಉದ್ದಿಮೆ ಪರವಾನಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಆರೋಗ್ಯಾಧಿಕಾರಿ ವಿಜಯೇಂದ್ರ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸಿಎಂಗೆ ವಚನಭ್ರಷ್ಟ ಕಳಂಕ ಅಂಟಿಸಲು ಸೋತವರ ಪ್ರಯತ್ನ?

ಈ ಬಾರಿ ಒಂದು ವರ್ಷದಿಂದ ಐದು ವರ್ಷದವರೆಗೆ ಒಂದೇ ಬಾರಿಯೇ ಶುಲ್ಕ ಪಾವತಿ ಮಾಡಿ ಪರವಾನಗಿ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಬರುವ ಆರ್ಥಿಕ ವರ್ಷ ಏಪ್ರಿಲ್‌ನಿಂದ ಮಾಚ್‌ರ್‍ವರೆಗೆ ಉದ್ದಿಮೆ ಪರವಾನಗಿ ನೀಡಲಾಗುವುದು. ಹೊಸ ಉದ್ದಿಮೆಗಳು ವರ್ಷದ ಮಧ್ಯೆ ಉದ್ದಿಮೆ ಪರವಾನಗಿ ಪಡೆದರೂ ಮಾಚ್‌ರ್‍ಗೆ ಅಂತ್ಯವಾಗಲಿದೆ. ತದ ನಂತರ ಮತ್ತೆ ಉದ್ದಿಮೆ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

ಫೆ.1ರಿಂದ ಫೆ.29ರ ಒಳಗೆ ಶುಲ್ಕ ಪಾವತಿಸಿ ಉದ್ದಿಮೆ ಪರಿವಾನಗೆ ಅರ್ಜಿ ಸಲ್ಲಿಕೆ ಮಾಡಿದರೆ ಯಾವುದೇ ದಂಡ ಇರುವುದಿಲ್ಲ. ಮಾ.1ರಿಂದ ಮಾ.31ರ ವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡುವವರಿಗೆ ಶೇ.25ರಷ್ಟುದಂಡ ವಿಧಿಸಲಾಗುವುದು. ಏ.1ರ ನಂತರ ಉದ್ದಿಮೆ ಪರವಾನಗಿಗೆ ಅರ್ಜಿ ಸಲ್ಲಿಸುವವರು ದುಪ್ಪಟ್ಟು (ಶೇ.100ರಷ್ಟು)ದಂಡ ಪಾವತಿಸಬೇಕಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios