ಬೆಂಗಳೂರು (ಅ.11): ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2019ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ‘ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ವಿಮರ್ಶಕ ಹಾಗೂ ವಿದ್ವಾಂಸ ಡಾ.ಬಸವರಾಜ ಕಲ್ಗುಡಿ ಆಯ್ಕೆಯಾಗಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್‌.ನಂದೀಶ್‌ ಹಂಚೆ ಅವರು ಪ್ರಶಸ್ತಿಗಳನ್ನು ಘೋಷಿಸಿದ್ದು ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ 75 ಸಾವಿರ ಮೊತ್ತದ ಬಹುಮಾನ ಹೊಂದಿದೆ ಎಂದು ತಿಳಿಸಿದ್ದಾರೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಐಬಿಎಚ್‌ ಪ್ರಕಾಶನ ಆಯ್ಕೆಯಾಗಿದ್ದು, ಈ ಪ್ರಶಸ್ತಿಯು ಒಂದು ಲಕ್ಷ ರು.ನಗದು ಬಹುಮಾನ ಹೊಂದಿದೆ. ಡಾ.ಜೆ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಸಿಂದಗಿಯ ಎಂ.ಎಸ್‌.ಪಡಶೆಟ್ಟಿಹಾಗೂ ಬೆಂಗಳೂರಿನ ಕೆ. ರಾಜಕುಮಾರ್‌ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 50 ಸಾವಿರ ರು.ನಗದು ಬಹುಮಾನ ಒಳಗೊಂಡಿದೆ.

ಈ ಪುಟ್ಟ ಕಂದ ಕರುನಾಡಿಗೆ ಅತ್ಯಂತ ವಿಶೇಷ ! ..

ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಡಾ.ಬಿ.ಎಂ.ಹೆಗಡೆ ಆಯ್ಕೆಯಾಗಿದ್ದು, ಪ್ರಶಸ್ತಿಯು 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ.

ಪುಸ್ತಕ ಮತ್ತು ಮುದ್ರಣ ಸೊಗಸು ಬಹುಮಾನ

ಬಹುಮಾನ ನಗದು ಮೊತ್ತ (.) ಪುರಸ್ಕೃತರು ಕೃತಿ ಲೇಖಕರು

1ನೇ ಬಹುಮಾನ 25 ಸಾವಿರ ಸಪ್ನ ಬುಕ್‌ಹೌಸ್‌ ಬೆಂಗಳೂರು ಡಾ. ಬಿ.ಆರ್‌.ಅಂಬೇಡ್ಕರ್‌ ಮಹಾಮಾನವನ ಮಹಾಯಾನ ಡಾ.ಸಿ.ಚಂದ್ರಪ್ಪ

2ನೇ ಬಹುಮಾನ 20 ಸಾವಿರ ರು. ನಮ್ಮ ಪ್ರಕಾಶನ ತುಮಕೂರು ಭೂಮಿಯೊಂದು ಮಹಾಬೀಜ ಕೃಷ್ಣಮೂರ್ತಿ ಬಿಳಿಗೆರೆ

3ನೇ ಬಹುಮಾನ 10 ಸಾವಿರ ರು. ಅಭಿರುಚಿ ಪ್ರಕಾಶನ ಮೈಸೂರು ಬಂಗಾರದ ಮನುಷ್ಯರು ಭಾಗ-1 ಬೆಳಕಿನ ಬೇಸಾಯದ ಕಥಾನಕ ಚಿನ್ನಸ್ವಾಮಿ ವಡ್ಡಗೆರೆ

ಮಕ್ಕಳ ಪುಸ್ತಕ ಸೊಗಸು ಬಹುಮಾನ 8 ಸಾವಿರ ರು. ಚೈತ್ರೋದಯ ಪ್ರಕಾಶನ ಹಾಸನ ಅರಳುವ ಹೂಗಳು ಸುಶೀಲಾ ಸೋಮಶೇಖರ್‌

ಮುಖಪುಟ ಚಿತ್ರ ವಿನ್ಯಾಸ ಬಹುಮಾನ 10ಸಾವಿರ ರು. ಕಿರಣ್‌ ಮಾಡಾಲು ಬೆಂಗಳೂರು ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ ಎಸ್‌.ದಿವಾಕರ್‌

ಮುಖಪುಟ ಚಿತ್ರ ಕಲೆಯ ಬಹುಮಾನ 8 ಸಾವಿರ ರು. ಪುಂಡಲೀಕ ಕಲ್ಲಿಗನೂರು ಮಹಾವೃಕ್ಷ ಬಿ.ಆರ್‌.ಪೊಲೀಸ್‌ ಪಾಟೀಲ

ಪುಸ್ತಕ ಮುದ್ರಣ ಸೊಗಸು ಬಹುಮಾನ 5 ಸಾವಿರ ರು. ಆಕೃತಿ ಪ್ರಿಂಟ್ಸ್‌ ಮಂಗಳೂರು ವನ್ಯವರ್ಣ ಗಣೇಶ್‌ ಅಮೀನಗಡ
 
ಪುಸ್ತಕ ಮತ್ತು ಮುದ್ರಣ ಸೊಗಸು ಬಹುಮಾನ

25 ಸಾವಿರ ರು.ನ 1ನೇ ಬಹುಮಾನ ಸಪ್ನ ಬುಕ್‌ಹೌಸ್‌ ಬೆಂಗಳೂರು ಪ್ರಕಟಿಸಿದ ಡಾ.ಸಿ.ಚಂದ್ರಪ್ಪ ಅವರ ಡಾ. ಬಿ.ಆರ್‌.ಅಂಬೇಡ್ಕರ್‌ ಮಹಾಮಾನವನ ಮಹಾಯಾನಕ್ಕೆ, 20 ಸಾವಿರು ರು.ನ 2ನೇ ಬಹುಮಾನ ನಮ್ಮ ಪ್ರಕಾಶನ ತುಮಕೂರು ಪ್ರಕಟಿಸಿದ ಕೃಷ್ಣಮೂರ್ತಿ ಬೆಳಿಗೆರೆ ಅವರ ಭೂಮಿಯೊಂದು ಮಹಾಬೀಜ, 10 ಸಾವಿರ ರು.ನ 3ನೇ ಬಹುಮಾನ ಅಭಿರುಚಿ ಪ್ರಕಾಶನ ಮೈಸೂರು ಪ್ರಕಟಿಸಿದ ಚಿನ್ನಸ್ವಾಮಿ ವಡ್ಡಗೆರೆ ಅವರ ಬಂಗಾರದ ಮನುಷ್ಯರು ಭಾಗ-1 ಬೆಳಕಿನ ಬೇಸಾಯದ ಕಥಾನಕಕ್ಕೆ ನೀಡಲಾಗಿದೆ. ಉಳಿದಂತೆ ಮಕ್ಕಳ ಪುಸ್ತಕ ಸೊಗಸು ಬಹುಮಾನ ಚೈತ್ರೋದಯ ಪ್ರಕಾಶನ ಹಾಸನ ಪ್ರಕಟಿಸಿದ ಸುಶೀಲಾ ಸೋಮಶೇಖರ್‌ ಅವರ ಅರಳುವ ಹೂಗಳು ಪುಸ್ತಕಕ್ಕೆ ನೀಡಲಾಗಿದೆ. ಮುಖಪುಟ ಚಿತ್ರ ವಿನ್ಯಾಸ ಬಹುಮಾನ ಕಿರಣ್‌ ಮಾಡಾಲು ವಿನ್ಯಾಸಗೊಳಿಸಿದ ಎಸ್‌.ದಿವಾಕರ್‌ ಅವರ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ ಪುಸ್ತಕಕ್ಕೆ, ಮುಖಪುಟ ಚಿತ್ರ ಕಲೆಯ ಬಹುಮಾನ ಬಿ.ಆರ್‌.ಪೊಲೀಸ್‌ ಪಾಟೀಲ ಅವರ ಪುಂಡಲೀಕ ಕಲ್ಲಿಗನೂರು ಮಹಾವೃಕ್ಷಕ್ಕೂ, ಪುಸ್ತಕ ಮುದ್ರಣ ಸೊಗಸು ಬಹುಮಾನ ಆಕೃತಿ ಪ್ರಿಂಟ್ಸ್‌ ಮಂಗಳೂರು ಪ್ರಕಟಿಸಿದ ಗಣೇಶ್‌ ಅಮೀನಗಢ ಅವರ ವನ್ಯವರ್ಣಕ್ಕೆ ಸಂದಿದೆ.