ಕುಂದಾಪುರ (ಅ.08): ಕನ್ನಡ.. ರೋಮಾಂಚನ  ಈ ಕನ್ನಡ ..  ಇಂತಹ ಕನ್ನಡದ ಹಾಡು ಕೇಳಿದರೆ ಕನ್ನಡಿಗರ ಮನ ಕುಣಿದಾಡುತ್ತದೆ. 

ಕನ್ನಡ ಎಂದ ತಕ್ಷಣ ಮೂಗು ಮುರಿಯುವವರೆ ಹೆಚ್ಚು ಮಂದಿ ಇರುವ ಈ ಕಾಲದಲ್ಲಿ ಇಲ್ಲೊಬ್ಬರು ತಮ್ಮ ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ. 

ಮೂಲತಃ ಕುಂದಾಪುರ ತಾಲೂಕಿನ ನೆಂಪು ನಿವಾಸಿ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿ ತಮ್ಮ ಮುದ್ದಾದ ಮಗುವಿಗೆ ಕೇಳಿದರೆ ವಿಶಿಷ್ಟವಾಗಿದೆ ಎನ್ನಿಸುವ ಕನ್ನಡ ಎಂದು ಹೆಸರಿಟ್ಟಿದ್ದಾರೆ. 

ಸರಳ ದಸರಾನಾ? ಅದ್ದೂರಿ ದಸರಾನಾ? ಸರ್ಕಾರದ ಈ ನಡೆ ವಿವಾದಕ್ಕೆ ಎಡೆ ...

ಮಗು ಹುಟ್ಟಿದ ಕೂಡಲೇ ಗೂಗಲ್ ಹಾಗೂ ಜಾಲತಾಣಗಳಲ್ಲಿ ವಿಶಿಷ್ಟ ವಿಭಿನ್ನ ಹೆಸರುಗಳನನ್ನು ಹುಡುಕಾಡುವ ಪೋಷಕರ ಮಧ್ಯೆ ನೆಂಪುವಿನ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿ ಒಂದು ಹೆಜ್ಜೆ ಮುಂದಿದ್ದಾರೆ. 

ಪ್ರಸ್ತುತ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನೆಲೆಸಿರುವ ಪ್ರತಾಪ್ ಶೆಟ್ಟಿ ಒಳಾಂಗಣ ವಿನ್ಯಾಸ ಗುತ್ತಿಗೆ ವೃತ್ತಿಯಲ್ಲಿ ದುಡಿಯುತ್ತಿದ್ದಾರೆ. 

ಪ್ರತಾಪ್ ಕೆಲಸದ ನಿಮಿತ್ತ ತಮಿಳುನಾಡಿಗೆ ತೆರಳಿದಾದ ಅಲ್ಲಿ ಹಲವಾರು ಮಂದಿಯ ಹೆಸರುಗಳು ತಮಿಳು ಹೆಸರಲ್ಲಿರುವುದು ಗಮನಿಸಿದ್ದಾರೆ. 

ತಮಿಳರಸನ್, ತಮಿಳುದೊರೈ ಮುಂತಾದ ಹೆಸರು ಕೇಳಿದ ಪ್ರತಾಪ್ ತಮ್ಮ ಮಗುವಿಗೂ ಇದೇ ರೀತಿಯಾಗಿ ಭಾಷೆಯ ಹೆಸರಿಡಬೇಕು ಎಂದು ಯೋಚಿಸಿದ್ದಾರೆ. 

ಹೀಗಾಗಿಯೇ ತನ್ನ ಮಗಳಿಗೆ ಕನ್ನಡ ಎಂದು ನಾಮಕರಣ ಮಾಡಿದ್ದಾರೆ. ಮಗಳನ್ನು ಕರೆಯುವಾಗೆಲ್ಲಾ ಪ್ರೀತಿಯಿಂದ ಕನ್ನಡ ಬಾ ಮಗಳೆ ಎನ್ನುತ್ತಾರೆ. 

ವರದಿ : ಶ್ರೀಕಾಂತ್ ಹೆಮ್ಮಾಡಿ