ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪತ್ರ ಬರೆದಿದ್ದಾರೆ. ವಿವಾದ ಒಂದರ ವಿಚಾರವಾಗಿ ಪತ್ರ ಬರೆಯಲಾಗಿದೆ.
ನವದೆಹಲಿ (ಅ.15): ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಕ್ಯಾತೆಗೆ ಮಣಿಯಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆಂಧ್ರ ವಿಭಜನೆ ಬಳಿಕ ಕೃಷ್ಣಾ ನೀರಿನ ಹಂಚಿಕೆಗೆ ಸಂಬಂಧಿಸಿ ಸೃಷ್ಟಿಯಾಗಿರುವ ಗೊಂದಲವನ್ನು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಪರಸ್ಪರ ಬಗೆಹರಿಸಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಈಗಾಗಲೇ ಹಂಚಿಕೆಯಾಗಿರುವ ನೀರಿನ ವಿಚಾರವನ್ನು ಮರುಪರಿಶೀಲಿಸುವ ಪ್ರಸ್ತಾಪವೇ ಇಲ್ಲಿ ಉದ್ಭವಿಸುವುದಿಲ್ಲ.
ಅಡಕೆ ರೈತರಿಗೆ ಗುಡ್ ನ್ಯೂಸ್ : ಸಿಎಂ ಯಡಿಯೂರಪ್ಪ ...
ಮಾಧ್ಯಮಗಳಲ್ಲಿ ವರದಿಯಾದಂತೆ ಮತ್ತೆ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವನ್ನು ಸ್ಥಾಪಿಸುವುದು ಅಪ್ರಸ್ತುತ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಜಲ ವಿವಾದ ಸಾಕಷ್ಟು ಸದ್ದಾಗುತ್ತಿದ್ದು ಮಹದಾಯಿ ವಿಚಾರವಾಗಿಯೂ ಕೂಡ ವಿವಾದಗಳು ಭುಗಿಲೇಳುತ್ತಿದೆ.
