Asianet Suvarna News Asianet Suvarna News

ಎರಡು ಕೇಸ್‌ಗಳಲ್ಲಿ ಬಿ.ಎಸ್.ಯಡಿಯೂರಪ್ಪ ಖುಲಾಸೆ

ಎರಡು ಪ್ರಕರಣಗಳಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖುಲಾಸೆಗೊಂಡಿದ್ದಾರೆ. ಏನದು ಕೇಸ್? 

BS Yeddyurappa acquitted in 2017 by Poll Code Violation case
Author
Bengaluru, First Published Nov 29, 2018, 9:24 PM IST
  • Facebook
  • Twitter
  • Whatsapp

ಬೆಂಗಳೂರು, [ನ.29]:  ಚುನಾವಣೆ ನೀತಿ ಸಂಹಿತೆ ಪ್ರಕರಣದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖುಲಾಸೆಗೊಂಡಿದ್ದಾರೆ. 

ಈ ಹಿಂದೆ  2017ರಲ್ಲಿ ನಡೆದಿದ್ದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. 

ಇಂದು [ಗುರುವಾರ] ಈ ಪ್ರಕರಣದ ವಿಚಾರಣೆ ನಡೆಸಿದ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ, ಯಡಿಯೂರಪ್ಪ ಅವರನ್ನು ಖುಲಾಸೆಗೊಳಿಸಿದೆ.

ಸಾಕ್ಷ್ಯಧಾರಗಳ ಕೊರತೆ ಹಿನ್ನಲೆಯಲ್ಲಿ ಯಡಿಯೂರಪ್ಪ ಅವರನ್ನ ಖುಲಾಸೆಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. 

ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಹಣ ನೀಡಿದ ಪ್ರಕರಣ ಹಾಗೂ ಬಿಜೆಪಿಗೆ ಮತ ನೀಡುವಂತೆ ಆಣೆ ಪ್ರಮಾಣ ಮಾಡಿಸಿಕೊಂಡಿದ್ದ ಆರೋಪದ ಮೇಲೆ ಯಡಿಯೂರಪ್ಪ ವಿರುದ್ಧ 2 ದೂರು ದಾಖಲಾಗಿದ್ದವು.

Follow Us:
Download App:
  • android
  • ios