Asianet Suvarna News Asianet Suvarna News

ಉತ್ತರ ಕನ್ನಡ: ಮಧ್ಯರಾತ್ರಿ ಕುಸಿದು ಕಾಳಿ ನದಿ ಪಾಲಾದ 1 ಕಿಮೀ ಉದ್ದದ ಸೇತುವೆ, ಟ್ರಕ್‌ ಡ್ರೈವರ್ ಬಚಾವ್!

ಉತ್ತರ ಕನ್ನಡದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ಮಧ್ಯರಾತ್ರಿ ಸೇತುವೆ ದುರಂತವಾಗಿದ್ದು, ತಮಿಳುನಾಡು ಮೂಲದ ಟ್ರಕ್ ಡ್ರೈವರ್ ಗಾಯಗೊಂಡಿದ್ದಾರೆ.

bridge on the kali river collapsed in karwar at  Uttara Kannada gow
Author
First Published Aug 7, 2024, 11:06 AM IST | Last Updated Aug 7, 2024, 12:47 PM IST

ಕಾರವಾರ (ಆ.7): ರಾಜ್ಯದ ಹಲವು ಕಡೆ ಮಳೆಯ ಅರ್ಭಟ ಕಡಿಮೆಯಾಗಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಶನಿವಾರವೂ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಕದ್ರಾ ಜಲಾಶಯದಿಂದ ನೀರು ಹೊರಬಿಡಲಾಗಿದೆ. ಇದರಿಂದಾಗಿ ಕಾಳಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. 

ಪರಿಣಾಮವಾಗಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಏಕಾಏಕಿ ಕುಸಿದು ಬಿತ್ತು. ಮಧ್ಯರಾತ್ರಿ  ರಾತ್ರಿ 1 ಗಂಟೆ ಅಂದಾಜಿಗೆ   ಸೇತುವೆ ಕುಸಿದ್ದಿದ್ದು, ಇದು ಕಾರವಾರ ನಗರದ ಕೋಡಿಬಾಗ್  ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ಗೋವಾ -ಕಾರವಾರ ಸಂಪರ್ಕ ಸೇತುವೆಯಾಗಿದೆ. ಈ ಸೇತುವೆಯನ್ನು 39 ವರ್ಷದ ಹಿಂದೆ ಖಾಸಗಿ ಕಂಪೆನಿ ನಿರ್ಮಾಣ ಮಾಡಿತ್ತು.

ದೇಶಾದ್ಯಂತ ಸುದ್ದಿಯಾಗಿದ್ದ ಮಂಗಳೂರು ಹೋಂಸ್ಟೇ ದಾಳಿ, 12 ವರ್ಷಗಳ ಬಳಿಕ ಎಲ್ಲಾ ಆರೋಪಿಗಳ ಖುಲಾಸೆ!

ದುರ್ಘಟನೆ ನಡೆದ ವೇಲೆ ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತ್ತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಚಾಲಕ ಮುರುಗನ್‌ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ತಮಿಳುನಾಡು ಮೂಲದ  SSM ಟ್ರಾನ್ಸಪೋರ್ಟ್ ಕಂಪನಿಯ TN-36 B -9997 ನೊಂದಣಿಯ ರಾಧಾಕೃಷ್ಣನ್ ಮಾಲಕತ್ವದ ಟ್ರಕ್ ಕೋಲ್ ಲೋಡ್ ಮಾಡಿ ಹಿಂತಿರುಗುತ್ತಿತ್ತು.

ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ (37)  ರಕ್ಷಣೆಗೆ ಕೂಗಿದ್ದಾರೆ. ರಾತ್ರಿ ಪ್ಯಾಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ದೃಶ್ಯ ಕಂಡು ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಧರ್ಮಾಪುರಿ ಜಿಲ್ಲೆಯ ಆರೂರು ತಾಲೂಕಿನ ಯಶಪಟ್ಟಿ ಗ್ರಾಮ ನಿವಾಸಿ ಬಾಲ ಮುರುಗನ್ ನನ್ನು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ, ಕರಾವಳಿ ಕಾವಲು ಪಡೆ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದರು. ಟ್ರಕ್ ಸೇತುವೆ ಮೇಲೆ ತೆರಳುತ್ತಿದ್ದಂತೆಯೇ ಮೊದಲ ಭಾಗ  ಕುಸಿತ ನಂತರ ಮತ್ತೆರಡು ಕಡೆ ಕುಸಿದಿದೆ. ಸ್ಥಳದಲ್ಲೇ ಕಾರವಾರ ಹಾಗೂ ಚಿತ್ತಾಕುಲ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಕಾರವಾರ ನಗರ ಠಾಣೆಯಲ್ಲಿ NHAI ಹಾಗೂ IRB ಕಂಪೆನಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿಸಿ ಲಕ್ಷ್ಮೀ ಪ್ರಿಯಾ, ಎಸ್ಪಿ ನಾರಾಯಣ್, ಎಎಸ್ಪಿ ಜಯಕುಮಾರ್ ಹಾಗೂ ಡಿವೈಎಸ್‌ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೆನ್ನೈ ನಂಟಿರುವ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅಪ್ಪ-ಅಮ್ಮ ವಿಚ್ಚೇದನ ಪಡೆದಿದ್ದೇಕೆ?

ಮುಂದುವರಿದ ಶೋಧ, ಟ್ರಾಫಿಕ್ ಜಾಂ:
ಕಾರವಾರದಲ್ಲಿ‌ ಕಾಳಿ‌‌ ನದಿ‌ ಮೇಲೆ‌ ನಿರ್ಮಾಣವಾಗಿದ್ದ ಸೇತುವೆ‌ ಕುಸಿದ ಹಿನ್ನೆಲೆ ನದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಎನ್‌ಡಿ‌ಆರ್‌ಎಫ್, ಎಸ್‌ಡಿಆರ್‌ಎಫ್, ಕೋಸ್ಟಲ್‌ ಪೊಲೀಸ್, ಸ್ಥಳೀಯ‌ ಮೀನುಗಾರರಿಂದ ಶೋಧ‌ ಕಾರ್ಯಾಚರಣೆ ನಡೆಯುತ್ತಿದ್ದು, ಸೇತುವೆ‌ ಕುಸಿದ ವೇಳೆ ಯಾವುದಾದ್ರೂ ವಾಹನ ಬಿದ್ದಿದ್ಯಾ, ಸ್ಥಳೀಯರು ಕೊಚ್ಚಿ ಹೋಗಿದ್ದಾರಾ‌ ಎಂಬ ಶಂಕೆ‌ ಹಿನ್ನೆಲೆ‌ ಕಾರ್ಯಾಚರಣೆ ನಡೆಸಲಾಗಿದೆ.

ಸೇತುವೆ ಮೂರು‌ ಕಡೆ ತುಂಡಾಗಿ ಬಿದ್ದು, ರಾಷ್ಟ್ರೀಯ ಹೆದ್ದಾರಿ‌ 66ರ ಸಂಪರ್ಕ ಕಡಿತಗೊಂಡಿದೆ. ಗೋವಾ ಹಾಗೂ ಕಾರವಾರ ಸಂಪರ್ಕ ಮಾಡುವ 39 ವರ್ಷಗಳ‌ ಹಳೆಯ ಸೇತುವೆ ಇದಾಗಿದ್ದು ಸದ್ಯ ಒಂದು‌ ಕಡೆ ಸಂಪರ್ಕ‌ ಕಡಿತವಾಗಿದ್ದರಿಂದ ಕೆಲಸಕ್ಕೆ ತೆರಳುವ ಜನರು ಸೇತುವೆ ಬಳಿಯೇ  ಬಾಕಿಯಾಗಿದ್ದಾರೆ. ಗೋವಾಕ್ಕೆ ಕೆಲಸಕ್ಕೆ ಹೋಗುವ ಜನರು ಸೇತುವೆ ಬಳಿಯೇ ಬಾಕಿಯಾಗಿದ್ದು,  ಟ್ರಾಫಿಕ್ ಜಾಂ ಆಗಿದೆ.

ಬೇರೆ ವಾಹನ ಇತ್ತಾ ಎಂದು ಪೊಲೀಸರ ವಿಚಾರಣೆ
ಸೇತುವೆ ಕುಸಿತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದೆಯೇ..?  ಎಂಬ ಬಗ್ಗೆ ಪರಿಶೀಲನೆ ಮುಂದುವರಿದಿದೆ. ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿರುವ ಚಾಲಕನಿಂದ ಮಾಹಿತಿ ಪಡೆದ ಪೊಲೀಸರು ಸೇತುವೆ ಕುಸಿದ ಸಂದರ್ಭ ವಾಹನದ ಹಿಂದೆ ಮುಂದೆ ವಾಹನ ಇತ್ತಾ ಎಂಬ ಬಗ್ಗೆ  ವಿಚಾರಿಸಿದ್ದಾರೆ. 

ಈ ವೇಳೆ ಲಾರಿ ಚಾಲನೆ ಮಾಡುವ ಸಂದರ್ಭ ಯಾವುದೇ ವಾಹನಗಳು ಸೇತುವೆ ಮೇಲಿರಲಿಲ್ಲ. ನಾನೊಬ್ಬನೇ ಸೇತುವೆ ಮೇಲೆ ಸಂಚಾರ ಮಾಡುವಾಗ ಅವಘಡ ಸಂಭವಿಸಿದೆ ಎಂದು  ಲಾರಿ ಚಾಲಕ ಬಾಲಮುರುಗನ್ ಮಾಹಿತಿ ನೀಡಿದ್ದಾರೆ. ಅವಘಡ ಸಂಭವಿಸಿದಕ್ಕೆ ಐಆರ್ ಬಿ ವಿರುದ್ಧ ಲಾರಿ ಚಾಲಕ ಬಾಲ ಮುರುಗನ್ ಕೇಸ್ ದಾಖಲು ಮಾಡಿದ್ದಾರೆ. ಈಗಾಗಲೇ ಪೊಲೀಸರು ಸುವೋಮೋಟೊ ಕೇಸ್ ದಾಖಲಾಗಿತ್ತು.

Latest Videos
Follow Us:
Download App:
  • android
  • ios