Asianet Suvarna News Asianet Suvarna News

ದೇಶಾದ್ಯಂತ ಸುದ್ದಿಯಾಗಿದ್ದ ಮಂಗಳೂರು ಹೋಂಸ್ಟೇ ದಾಳಿ, 12 ವರ್ಷಗಳ ಬಳಿಕ ಎಲ್ಲಾ ಆರೋಪಿಗಳ ಖುಲಾಸೆ!

ದೇಶಾದ್ಯಂತ ಸುದ್ದಿ ಮಾಡಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. 

Mangaluru Homestay attack case all accused are acquitted after  twelve years gow
Author
First Published Aug 6, 2024, 5:53 PM IST | Last Updated Aug 6, 2024, 5:53 PM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.6): ದೇಶಾದ್ಯಂತ ಸುದ್ದಿ ಮಾಡಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಆದೇಶ ಹೊರಡಿಸಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷ ಮುಕ್ತವಾಗಿದ್ದು, ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದರು. ಓರ್ವ ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಈ ಘಟನೆಯನ್ನು ವರದಿ ಮಾಡಲು ಟಿವಿ ವರದಿಗಾರರಾಗಿ ಸೂರಿಂಜೆ ತೆರಳಿದ್ದರು. ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿದ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು. 12 ವರ್ಷಗಳ ಬಳಿಕ ಮಂಗಳೂರು ಕೋರ್ಟ್‌ ನಿಂದ ಅಂತಿಮ ತೀರ್ಪು ಪ್ರಕಟವಾಗಿದೆ.

ತಮಿಳಿನ ಹಂಟರ್ ಸಿನೆಮಾದಲ್ಲಿ ಚಾನ್ಸ್ ಕೊಡೋದಾಗಿ ಕನ್ನಡ ರೂಪದರ್ಶಿಗೆ ಆನ್‌ಲೈನ್‌ ವಂಚನೆ!

2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಹೋಂಸ್ಟೇಗೆ ದಾಳಿ ನಡೆದಿತ್ತು. ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಮೇಲೆ ದಾಳಿ ನಡೆಸಿದ್ದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ಹಲ್ಲೆ ನಡೆಸಿದ್ದರು. ಹೋಂಸ್ಟೇನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನೂ ಬಂಧಿಸಿದ್ದರು.‌ ಇದರಲ್ಲಿ ಓರ್ವ ಪತ್ರಕರ್ತನ ಕೇಸ್  ಸಿದ್ದರಾಮಯ್ಯ ಸರ್ಕಾರ ವಾಪಾಸ್ ಪಡೆದಿತ್ತು. ಹೀಗಾಗಿ 2018ರಲ್ಲಿ ಮಂಗಳೂರು ಕೋರ್ಟ್ ಪತ್ರಕರ್ತನ ಖುಲಾಸೆ ಮಾಡಿತ್ತು.

49ರಲ್ಲೂ ಕುಗ್ಗದ ಸೌಂದರ್ಯ, ಇನ್ನೂ ಒಂಟಿಯಾಗಿರುವುದಕ್ಕೆ ಆ ಸ್ಟಾರ್ ನಟನ ಜತೆಗಿನ ಬ್ರೇಕ್‌ ಅಪ್‌ ಕಾರಣವೇ!?

ಇನ್ನು ಪ್ರಕರಣ ಸಂಬಂಧ ಅಂದು ರಾಜ್ಯ ಮಹಿಳಾ ಆರೋಗದಿಂದಲೂ ತನಿಖೆ ನಡೆದು ಅಂದಿನ ಗೃಹ ಸಚಿವ ಆರ್.ಅಶೋಕ್ ಗೆ  ಅಯೋಗ ವರದಿ ಸಲ್ಲಿಸಿತ್ತು . ಪೊಲೀಸ್ ವೈಫಲ್ಯ ಹಾಗೂ ದಾಳಿಯ ಬಗ್ಗೆ ಡಿಐಜಿ ಗ್ರೇಡ್ ಅಧಿಕಾರಿ ತನಿಖೆಗೆ ಮಹಿಳಾ ಆಯೋಗ ಶಿಫಾರಸ್ಸು ಮಾಡಿತ್ತು. ಹಿಂಜಾವೇ ಮುಖಂಡ ಸುಭಾಷ್ ಪಡೀಲ್ ನೇತೃತ್ವದಲ್ಲಿ ದಾಳಿ ನಡೆದು, ಯುವತಿಯರ ಮೇಲೂ ಯದ್ವಾತದ್ವಾ ಹಲ್ಲೆ ನಡೆಸಿದ್ದ ಅರೋಪ ಕಾರ್ಯಕರ್ತರ ಮೇಲಿತ್ತು. 5 ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಜನರನ್ನು ವಿವಸ್ತ್ರಗೊಳಿಸಿ ಥಳಿಸಿದ ಗಂಭೀರ ಆರೋಪ ಇತ್ತು. ಮದ್ಯ ಸೇವಿಸಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದಾಳಿ ನಡೆಸಲಾಗಿತ್ತು.

Latest Videos
Follow Us:
Download App:
  • android
  • ios