ಕೃಷಿ ಸಚಿವರ ವಿರುದ್ಧ ಲಂಚಾರೋಪ: ಅಧಿಕಾರಿಗಳಿಬ್ಬರು ಸಿಐಡಿ ವಶಕ್ಕೆ

ಕೃಷಿ ಸ​ಚಿವ ಎ​ನ್‌.​ಚ​ಲು​ವ​ರಾ​ಯ​ಸ್ವಾಮಿ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾ​ಜ್ಯ​ಪಾ​ಲ​ರಿಗೆ ಪತ್ರ ಬರೆದಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮೈ​ಸೂರಿನ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಸ​ಹಾ​ಯಕ ನಿರ್ದೇಶಕ ಗು​ರು​ಪ್ರ​ಸಾದ್‌ ಹಾಗೂ ಕೃಷಿ ಅಧಿಕಾರಿ ಸು​ದ​ರ್ಶನ್‌ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

Bribery against Agriculture minister chaluvarayaswamy case: two officials taken into custody by CID at bengaluru rav

ಮಂಡ್ಯ/ಮೈಸೂರು (ಆ.21)  ಕೃಷಿ ಸ​ಚಿವ ಎ​ನ್‌.​ಚ​ಲು​ವ​ರಾ​ಯ​ಸ್ವಾಮಿ ಅವರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾ​ಜ್ಯ​ಪಾ​ಲ​ರಿಗೆ ಪತ್ರ ಬರೆದಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮೈ​ಸೂರಿನ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಸ​ಹಾ​ಯಕ ನಿರ್ದೇಶಕ ಗು​ರು​ಪ್ರ​ಸಾದ್‌ ಹಾಗೂ ಕೃಷಿ ಅಧಿಕಾರಿ ಸು​ದ​ರ್ಶನ್‌ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಕೃಷಿ ಸ​ಚಿವ ಎ​ನ್‌.​ಚ​ಲು​ವ​ರಾ​ಯ​ಸ್ವಾಮಿ ಅವರು ಜಂಟಿ ಕೃಷಿ ನಿ​ರ್ದೇ​ಶ​ಕರ ಮೂ​ಲಕ 6ರಿಂದ 8 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ 7 ತಾಲೂಕುಗಳ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರದ ಬರೆದು, ದೂರು ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ, ಇದು ವಿವಾದವಾಗುತ್ತಿದ್ದಂತೆ, ತಾವು ಈ ರೀತಿಯ ಪತ್ರ ಬರೆದಿಲ್ಲ, ತಮ್ಮ ಹೆಸರಿನಲ್ಲಿ, ನಕಲಿ ಸಹಿ ಮಾಡಿ ಪತ್ರ ಬರೆಯಲಾಗಿದೆ ಎಂದು ಪತ್ರ ಬರೆದಿದ್ದಾರೆ ಎನ್ನಲಾದ ಸಹಾಯಕ ಕೃಷಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದರು. ಬಳಿಕ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಕೃಷಿ ಸಚಿವರ ಲಂಚ ಬೇಡಿಕೆ ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಸಿಐಡಿ: ಮಂಡ್ಯ ಮಾತ್ರವಲ್ಲ, ಮೈಸೂರಿನವರ ಕೈವಾಡವೂ ಇದೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೂ​ರಿನ ಪ​ತ್ರ​ದ​ಲ್ಲಿ​ರುವ ಸ​ಹಿ​ಗ​ಳೆ​ಲ್ಲವೂ ನ​ಕಲಿ ಎ​ನ್ನು​ವುದು ತಿ​ಳಿ​ದು ಬಂದಿತ್ತು. ಅಲ್ಲದೆ, ಪ​ತ್ರ​ವನ್ನು ಮೈ​ಸೂ​ರಿನ ಸ​ರ​ಸ್ವ​ತಿ​ಪು​ರಂನ ಪ್ರ​ಧಾನ ಅಂಚೆ ಕ​ಚೇ​ರಿ​ಯಿಂದ ರಾ​ಜ್ಯ​ಪಾ​ಲ​ರಿಗೆ ಕ​ಳು​ಹಿ​ಸಿರುವುದು ಪತ್ತೆಯಾಗಿತ್ತು. ಆದರೆ, ಅ​ಲ್ಲಿನ ಸಿಸಿಟಿವಿ ದೃ​ಶ್ಯ​ಗ​ಳನ್ನು ಪ​ರಿ​ಶೀಲಿಸಿದಾಗ ಪತ್ರ ಕ​ಳು​ಹಿ​ಸಿದ ವ್ಯ​ಕ್ತಿಯ ಗು​ರುತು ಪ​ತ್ತೆ​ಯಾ​ಗಿ​ರ​ಲಿಲ್ಲ. ಈಗ ಪತ್ರ ಬ​ರೆ​ದ​ವರು ಮೈಸೂರಿನ ಕೃಷಿ ಇಲಾಖೆಯ ಈ ಇಬ್ಬರು ಅ​ಧಿ​ಕಾ​ರಿಗಳು ಎಂಬ ಮಾ​ಹಿತಿ ದೊ​ರ​ಕಿದ್ದು, ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೆ.ಆರ್‌.ನಗರ ಮೂಲದ ಇವರು ಪ್ರಸ್ತುತ ಮೈಸೂರಿನ ಕೃಷಿ ಇಲಾಖೆಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರು ಮಂಡ್ಯದ ಅಧಿಕಾರಿಗಳ ಹೆಸರಿನಲ್ಲಿ ಪತ್ರ ಬರೆದಿದ್ದು ಏಕೆ? ಇದರ ಹಿಂದೆ ರಾಜಕೀಯ ಷಡ್ಯಂತ್ರವೇನಾದರೂ ಇದೆಯಾ ಎಂಬುದೂ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಫಸ್ಟ್‌: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ

Latest Videos
Follow Us:
Download App:
  • android
  • ios