ಬೆಂಗಳೂರು ಯಾರ ಸ್ವತ್ತು ಅಲ್ಲ, ಬೆಂಗಳೂರು ಮಕ್ಕಳ ಸ್ವತ್ತು. ಬೆಂಗಳೂರು ಯಾವ ರೀತಿ ಇರಬೇಕೆಂದು ಅವರದೇ ಆದ ಚಿಂತನೆ ಇದೆ. ಬೆಂಗಳೂರು ಬರೀ ಕ್ಯಾಪಿಟಲ್ ಸಿಟಿ ಅಲ್ಲ, ಸಿಲಿಕಾನ್ ಸಿಟಿಯೂ ಅಲ್ಲ. ಬೆಂಗಳೂರು ಈಸ್ ಎ ಸಿಟಿ ಆಪ್ ಹೋಪ್, ಬೆಂಗಳೂರು ಇಸ್ ಎ ಸಿಟಿ ಆಫ್ ಐಡಿಯಾ. ಅದಕ್ಕೋಸ್ಕರ ಬೆಂಗಳೂರಿಗೆ ಶಕ್ತಿ ಬಂದಿದೆ. ಇದನ್ನ ಉಳಿಸಿಕೊಂಡು ಬೆಳೆಸಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಬೆಂಗಳೂರು (ಜ.13) ಬೆಂಗಳೂರು ಯಾರ ಸ್ವತ್ತು ಅಲ್ಲ, ಬೆಂಗಳೂರು ಮಕ್ಕಳ ಸ್ವತ್ತು. ಬೆಂಗಳೂರು ಯಾವ ರೀತಿ ಇರಬೇಕೆಂದು ಅವರದೇ ಆದ ಚಿಂತನೆ ಇದೆ. ಬೆಂಗಳೂರು ಬರೀ ಕ್ಯಾಪಿಟಲ್ ಸಿಟಿ ಅಲ್ಲ, ಸಿಲಿಕಾನ್ ಸಿಟಿಯೂ ಅಲ್ಲ. ಬೆಂಗಳೂರು ಈಸ್ ಎ ಸಿಟಿ ಆಪ್ ಹೋಪ್, ಬೆಂಗಳೂರು ಇಸ್ ಎ ಸಿಟಿ ಆಫ್ ಐಡಿಯಾ. ಅದಕ್ಕೋಸ್ಕರ ಬೆಂಗಳೂರಿಗೆ ಶಕ್ತಿ ಬಂದಿದೆ. ಇದನ್ನ ಉಳಿಸಿಕೊಂಡು ಬೆಳೆಸಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ನಗರದ ಹಲಸೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ಯುವ ನಾಯಕತ್ವ ಸಮ್ಮೇಳನ 2023-24 ಹಾಗೂ ಬ್ರ್ಯಾಂಡ್ ಬೆಂಗಳೂರು ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ದು ಎಲ್ಲಾ ಮುಗೀತು. ಮುಕ್ಕಲು ಆಯಸ್ಸು ಮುಗಿದುಹೋಗಿದೆ. ಆದರೆ ಈಗಿನ ಮಕ್ಕಳಿಗೆ 14, 15 ವರ್ಷ ಇದೆ. ಅವರಿಗಿನ್ನೂ 70 ವರ್ಷ ಅವಕಾಶವಿದೆ. ಭವಿಷ್ಯದಲ್ಲಿ ಬೆಂಗಳೂರು ಹೇಗಿರಬೇಕು ಎಂದು ಅವರದೇ ಆದ ಚಿಂತನೆಗಳಿವೆ ಎಂದರು.
ಇಂದಿನ ಯುವಕ, ಯುವತಿಯರು ತಮ್ಮ ಓದಿನ ಜತೆಗೆ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನಾಂಗ ಚಿಂತನೆ ನಡೆಸುವ ಅವಶ್ಯಕತೆಯಿದ್ದು, ಹೊಸ ಅವಿಷ್ಕಾರಗಳ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಸದೃಢ ನಾಡಿಗಾಗಿ ಸದೃಢ ನಾಯಕತ್ವ ಬೇಕು. ಹಾಗೇ ಯುವಶಕ್ತಿ ಈ ದೇಶದ ಚಾಲಕ ಶಕ್ತಿಯಾಗಬೇಕು. ಆಗ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಬೆಂಗಳೂರನ್ನು ಜಾಗತಿಕ ಮನ್ನಣೆಯ ನಗರವನ್ನಾಗಿಸುವ ಉದ್ದೇಶದಿಂದ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯನ್ನು ರೂಪಿಸಿದ್ದೇವೆ. ಇದು ಕೇವಲ ಒಂದು ಪರಿಕಲ್ಪನೆಯಲ್ಲ, ಸಮಸ್ತ ಬೆಂಗಳೂರಿಗರ ಕನಸು. ಆ ಕನಸನ್ನು ನನಸು ಮಾಡುವುದೇ ನಮ್ಮ ಗುರಿ ಎಂದರು.
ರಾಜ್ಯದ ಎಲ್ಲಾ ಕಡೆ ಈ ಕಾರ್ಯಕ್ರಮ ಇರುತ್ತೆ. ಇನ್ನೂ ಮುಂದಕ್ಕೆ ಮಾಡ್ತೇವೆ. ಬರೀ ನಮ್ಮ ಮನೆ ಕಾಪಾಡಿಕೊಂಡ್ರೆ ಸಾಲದು. ನಗರದ ಬ್ರಿಡ್ಜ್, ಚರಂಡಿ, ಪಾರ್ಕ್ ಎಲ್ಲವನ್ನ ಕಾಪಾಡಬೇಕು. ಇದು ನಾಗರಿಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂದರೆ ನಾಗರಿಕರೇ ನಾಯಕರಾಗಬೇಕು. ಅದಕ್ಕೆ ಶಾಲಾ ಮಕ್ಕಳು ಇಂದು ಬಂದಿದ್ದಾರೆ. ಐಶ್ವರ್ಯ ಲೀಡ್ ತೆಗೆದುಕೊಂಡಿದ್ದಾರೆ. ನಾವೇನು ಸರ್ಕಾರದಿಂದ ಒಂದು ರೂಪಾಯಿ ಕೊಟ್ಟಿಲ್ಲ. ಅವರೇ ಸ್ವಯಂಕೃತವಾಗಿ ಮೂವ್‌ಮೆಂಟ್ ಆಗಲಿ ಎಂದು ಐಶ್ವರ್ಯ ಮುಂದೆ ಬಂದಿದ್ದಾರೆ ಎಂದರು.
ಡಿಕೆಶಿ ಬೆಳೆದ ಅಕ್ಕಿಯಲ್ಲಿ ಬಿಜೆಪಿ ಮಂತ್ರಾಕ್ಷತೆ ಹಂಚ್ತಿದ್ದಾರಾ: ಎಚ್.ಡಿ.ಕುಮಾರಸ್ವಾಮಿ
ಇದು ದೇಶಕ್ಕೆ ಮಾದರಿಯಾಗಬೇಕು. ಸರ್ಕಾರದ ಪರವಾಗಿ ಯಾರು ಶ್ರಮ ಹಾಕಿದ್ದಾರೆ. ಲೀಡರ್ಸ್ ಕಮಿಟಿ ನಡೆದಿದೆ. ನಾನು ಡಿಸಿಎಂ ಆಗಿ ಇಲ್ಲಿಗೆ ಬಂದಿಲ್ಲ. ಒಬ್ಬ ನಾಗರಿಕನಾಗಿ ನಾನು ಬಂದಿದ್ದೇನೆ. ಬೆಂಗಳೂರು ಒಂದು ಪ್ಲಾನ್ ಸಿಟಿ. ಖಂಡಿತಾ ಅವರು 7 ಐಡಿಯಾ ಕೊಟ್ಟಿದ್ದಾರೆ. ಆ ಐಡಿಯಾಗಳನ್ನ ಇಂಪ್ಲಿಮೆಂಟ್ ಮಾಡ್ತೇವೆ. ವಿಶೇಷವಾಗಿ ಒಂದು ಐಡಿಯಾ ಇದೆ. ಅದೇನೆಂದರೆ, ಪೀರಿಯಡ್ಸ್ ಟೈಂನಲ್ಲಿ ಮಾಲ್‌ಗಳಲ್ಲಿ ಕೆಲವು ಕಡೆ ಶೌಚಾಲಯ ನಿರ್ಮಾಣ ಆಗಬೇಕೆಂದಿದ್ದಾರೆ. ಇನ್ನೊಂದು ಐಡಿಯಾ ಎಂದ್ರೆ ಆಂಬುಲೆನ್ಸ್ ಆಂಬುಲೆನ್ಸ್ ಗೆ ಪ್ರತ್ಯೇಕ ಅವಕಾಶ ಕೊಡೋದು. ಇದೆಲ್ಲಾ ಇಂಪ್ಲಿಮೆಂಟ್ ಮಾಡಬಹುದು. ಜಾಸ್ತಿ ಖರ್ಚು ಏನು ಅಲ್ಲ ಎಂದರು.
