ಸರಿಯಾಗಿ 5 ಕೆಜಿ ಅಕ್ಕಿ ಕೊಡೋಕಾಗ್ದವ್ರು ರಾಮಮಂದಿರ ಮಂತ್ರಾಕ್ಷತೆ ಬಗ್ಗೆ ಮಾತಾಡ್ತೀರಾ? ಡಿಕೆಶಿ ವಿರುದ್ಧ ಶಾಸಕ ಮುನಿರಾಜು ಗರಂ!
ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಸಂಪೂರ್ಣ ವಿಫಲವಾಗಿದೆ ಎಂದು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜ.12): ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಸಂಪೂರ್ಣ ವಿಫಲವಾಗಿದೆ ಎಂದು ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ನಗರದಲ್ಲಿ ರಾಮಮಂದಿರ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆಗಳನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಅದೊಂದೇ ಇಟ್ಟುಕೊಂಡು ಕೆಲಸ ಮಾಡ್ತಾ ಇದ್ದಾರೆ. ನಾವು ಮಂತ್ರಾಕ್ಷತೆ, ಗಂಗಾಜಲ ಕೊಟ್ಟರೆ ಅವ್ರು ಅದಕ್ಕೂ ಟೀಕೆ ಮಾಡ್ತಿದಾರೆ. ಇನ್ನೊಂದೆಡೆ ಡಿಸಿಎಂ ಶಿವಕುಮಾರ್ ಹೇಳಿದ್ರು ಅನ್ನ ಭಾಗ್ಯದ ಅಕ್ಕಿಗೆ ಅರಿಸಿನ ಬೆರೆಸಿದ್ರೆ ಅದು ಮಂತ್ರಾಕ್ಷತೆ ಆಗುತ್ತೆ ಅಂತಾ. ರೀ ಸ್ವಾಮಿ ದೇಶದ ಜನರಿಗೆ ಐದು ಕೇಜಿ ಅಕ್ಕಿ ಕೊಡ್ತಿರೋದು ನರೇಂದ್ರ ಮೋದಿ ಸರ್ಕಾರವೇ ಹೊರತು ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ತಿರುಗೇಟು ನೀಡಿದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು ನಿರ್ಧಾರ ಬೆನ್ನಲ್ಲೇ ಇತ್ತ 'ನಾನು ರಾಮಭಕ್ತ' ಎಂದ ಸಚಿವ ಮುನಿಯಪ್ಪ!
ಕಾಂಗ್ರೆಸ್ ಅವರು ಚುನಾವಣೆ ವೇಳೆ ಘೊಷಿಸಿದಂತೆ 10ಕೆಜಿ ಅಕ್ಕಿ ಕೊಡದಕ್ಕೆ ಇನ್ನೂವರೆಗೂ ಆಗ್ತಿಲ್ಲಾ, ಹಣ ಸರಿಯಾಗಿ ಹಾಕೋಕೂ ಆಗ್ತಿಲ್ಲಾ. ಸರಿಯಾಗಿ ಐದು ಕೆಜಿ ಅಕ್ಕಿ ಕೊಡೋದಕ್ಕೆ ಆಗದವರು ಮಂತ್ರಾಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ. ತಾರತಮ್ಯ ಬಿಟ್ಟು ಸಮಾನತೆಯಿಂದ ಕಾಂಗ್ರೆಸ್ ಕೆಲಸ ಮಾಡ್ತಿಲ್ಲ, ಬರೀ ಟೀಕೆ ಮಾಡೋದ್ರಲ್ಲಿ ಮುಂದಿದೆ ಅಭಿವೃದ್ಧಿಯಲ್ಲಿ ಹಿಂದಿದೆ ಎಂದು ಟೀಕಿಸಿದರು.
ರಾಮಮಂದಿರ ವಿರುದ್ಧ ಅಪಸ್ವರವೂ ಜೋರು: ಕಾಂಗ್ರೆಸ್ ಗೈರಿಗೆ ಸಿದ್ದು, ಸಂಪುಟ ಸಚಿವರ ಬೆಂಬಲ
ಕಾಂಗ್ರೆಸ್‌ನವ್ರು ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಅವರ ಹುಳುಕುಗಳನ್ನ ಅವರು ಮೊದ್ಲು ಮುಚ್ಚಿಕೊಳ್ಳಬೇಕು. ಊರು ಅಂದ್ರೇ ಹೊಲಗೆರೆ ಇರುತ್ತೆ, ಈ ತರ ಜನ ಇದ್ದೆ ಇರ್ತಾರೆ. ಕಾಂಗ್ರೆಸ್ ಅವರ ಟೀಕೆ ಟಿಪ್ಪಣಿಗಳಿಗೆ ನಾವು ತಲೆ ಕೊಡಲ್ಲ. ಅವರ ವಿರೋಧ ಇದ್ರೆ ನಾವು ಏನು ಮಾಡಲ್ಲ, ಅವ್ರು ವಿರೋಧ ಮಾಡ್ತಾನೆ ಇರ್ಲಿ ಎಂದು ತಿವಿದರು.