Asianet Suvarna News Asianet Suvarna News

BMTC ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು; ಜಸ್ಟ್ ಮಿಸ್ 45 ಪ್ರಯಾಣಿಕರು!

ಬಸ್ ರನ್ನಿಂಗ್‌ ಇರುವಾಗಲೇ BMTC ಬಸ್ ಚಾಲಕನಿಗೆ ಎದೆನೋವು ಕಾಣಿಸಿಕೊಂಡ ಘಟನೆ ನಡೆದಿದ್ದು, ಹಲಸೂರು ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಚಾಲಕ ಸೇರಿ ಬಸ್‌ನಲ್ಲಿ 45 ಪ್ರಯಾಣಿಕರು ಅನಾಹುತದಿಂದ ಬಚಾವ್ ಆಗಿದ್ದಾರೆ.

bmtc driver heart attack while the bus was running rav
Author
First Published Sep 20, 2024, 10:49 AM IST | Last Updated Sep 20, 2024, 10:56 AM IST

ಬೆಂಗಳೂರು (ಸೆ.20): ಡ್ರೈವರ್ ಮೇಲೆ ನಂಬಿಕೆ ಇಟ್ಟು ನಿಶ್ಚಿಂತೆಯಿಂದ ಪ್ರಯಾಣಿಸುತ್ತಿರುವಾಗ ಏಕಾಏಕಿ ಚಾಲಕನಿಗೆ ಹೃದಯಾಘಾತವಾದರೆ? ಫ್ಲೈಓವರ್ ಮೇಲೆ ಬಸ್ ಓಡುತ್ತಿರುವಾಗ ಚಾಲಕನಿಗೆ ಏನೋ ಆದರೆ..  ಹೀಗೆಲ್ಲ ಯೋಚಿಸಿ ಬೆಚ್ಚಿಬಿದ್ದಿರ್ತೀರಿ ಅಲ್ಲವೇ?  ಹೌದು ಪ್ರತಿಯೊಬ್ಬ ಪ್ರಯಾಣಕನಿಗೂ ಹಿಂಗೊಂದು ಯೋಚನೆ ಸಣ್ಣಗೆ ಬೆವರಿರುತ್ತಾರೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂತದ್ದೊಂದು ಘಟನೆ ನಡೆದುಹೋಗಿದೆ ಅದೃಷ್ಟವಶಾತ್ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ  ಅನಾಹುತವೊಂದು ತಪ್ಪಿದೆ.

ಬಿಎಂಟಿಸಿ ಬಸ್ ಡ್ರೈವರ್ ವಿರೇಶ್ ನಿನ್ನೆ ಎಂದಿನಂತೆ KA51AJ6905 ನಂಬರಿನ  ಬಸ್ ಚಲಾಯಿಸಿಕೊಂಡು ಹೊರಟಿದ್ದಾನೆ. ಬಸ್‌ನಲ್ಲಿ ಸುಮಾರು 45 ಜನರು ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ ಶಾಂತಿನಗರದ ಡಬಲ್ ರೋಡ್ ಬಳಿ ಬಸ್ ರನ್ನಿಂಗ್‌ನಲ್ಲಿದ್ದ ವೇಳೆ ಏಕಾಏಕಿ ಚಾಲಕ ವಿರೇಶ್‌ಗೆ ಎದೆನೋವು ಕಾಣಿಸಿಕೊಂಡಿದೆ.d ಬಳಿಕ ವೇಗವಾಗಿ ಓಡುತ್ತಿದ್ದ ಬಸ್ ನಿಧಾನವಾಗಿ ಚಲಿಸಿದೆ.

ನಿನಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಹಿಳೆಗೆ ಒತ್ತಿಕೊಂಡೇ ಕುಳಿತ ಬಿಎಂಟಿಸಿ ಕಂಡಕ್ಟರ್

ಅನುಮಾನಗೊಂಡು ಬಸ್ಸಿನತ್ತ ಓಡಿ ಬಂದಿರುವ ಹಲಸೂರು ಟ್ರಾಫಿಕ್ ಎಎಸ್‌ಐ ಆರ್ ರಘುಕುಮಾರ್. ಬಸ್ ಬಳಿ ಬಂದು ನೋಡಿದಾಗ ಎದೆಗೆ ಕೈ ಹಿಡಿದು ಒಂದು ಕಡೆಗೆ ವಾಲಿದ್ದ ಚಾಲಕ ವೀರೇಶ್. ಹಾರ್ಟ್ ಅಟ್ಯಾಕ್ ಆಗಿರುವುದನ್ನ ಗಮನಿಸಿದ ಟ್ರಾಫಿಕ್ ಎಎಸ್‌ಐ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಚಾಲಕನನ್ನು ಕೆಳಗೆ ಇಳಿಸಿದ್ದಾರೆ. ನಂತರ ಆಂಬುಲೆನ್ಸ್ ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಬಸ್ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ ಪೊಲೀಸರು. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಚಾಲಕ ವೀರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Latest Videos
Follow Us:
Download App:
  • android
  • ios