ನಿನಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಹಿಳೆಗೆ ಒತ್ತಿಕೊಂಡೇ ಕುಳಿತ ಬಿಎಂಟಿಸಿ ಕಂಡಕ್ಟರ್
ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಆಸನಕ್ಕೆ ಒತ್ತಿಕೊಂಡು ಕುಳಿತ ಬಿಎಂಟಿಸಿ ಕಂಡಕ್ಟರ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಹಿಳೆಯ ಆಸನಕ್ಕೆ ಒತ್ತಿಕೊಂಡ ಕುಳಿತ ಬಿಎಂಟಿಸಿ ಕಂಡಕ್ಟರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಂಡಕ್ಟರ್ ಹಾಗೂ ಮಹಿಳೆಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಸೇವೆಯನ್ನು ಬಿಎಂಟಿಸಿ ನೀಡುತ್ತದೆ. ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ತನ್ನ ಜನಸ್ನೇಹಿ ಸೇವೆ ಜೊತೆಯಲ್ಲಿ ಕೆಲವೊಮ್ಮೆ ವಿವಾದಕ್ಕೂ ಕಾರಣವಾಗುತ್ತಿರುತ್ತದೆ. ಬಿಎಂಟಿಸಿ ಬಸ್‌ಗಳಲ್ಲಿ ನಿರ್ವಾಹಕರಿಗಾಗಿಯೇ ಒಂದು ಆಸನ ಮೀಸಲಿರುತ್ತದೆ. ಬಸ್ ಪ್ರಯಾಣಿಕರಿಂದ ಎಷ್ಟೇ ತುಂಬಿ ತುಳುಕುತ್ತಿದ್ದರೂ ಯಾರು ಕಂಡಕ್ಟರ್ ಆಸನದಲ್ಲಿ ಕುಳಿತುಕೊಳ್ಳಲ್ಲ. ಒಂದು ವೇಳೆ ಕುಳಿತಿದ್ದರೂ ಕಂಡಕ್ಟರ್ ಬಂದ್ರೆ ಸೀಟ್ ಬಿಟ್ಟು ಕೊಡಲೇಬೇಕು.
ದಿನವಿಡೀ ಚಲಿಸುತ್ತಿರುವ ಬಸ್‌ನಲ್ಲಿಯೇ ಕೆಲಸ ಮಾಡಬೇಕಿರುವ ಕಾರಣ ಬಿಎಂಟಿಸಿ ತನ್ನ ಸಿಬ್ಬಂದಿಗಾಗಿ ಆಸನ ಮೀಸಲಿರಿಸಿದೆ. ಆದ್ರೂ ಈ ನಿರ್ವಾಹಕ ಮಹಿಳೆ ಆಸನಕ್ಕೆ ಕಷ್ಟಪಟ್ಟು ಒರಗಿಕೊಂಡು ಕುಳಿತಿದ್ದಾನೆ. ಈ ವಿಡಿಯೋವನ್ನು @nammabengaluroo ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ಕಂಡಕ್ಟರ್ ಸೀಟ್ ಮುಂದೆ ಇರುತ್ತದೆ. ಆದ್ರೂ ಈತ ಅಲ್ಲಿ ಕುಳಿತಿದ್ದಾನೆ. ಕಂಡಕ್ಟರ್‌ಗಳ ಈ ರೀತಿಯ ವರ್ತನೆಯಿಂದಾಗಿ ಮಹಿಳೆಯರಿಗೆ ಅಗೌರವ ಉಂಟು ಮಾಡುತ್ತದೆ. ದಯವಿಟ್ಟು ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಬಿಎಂಟಿಸಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಇದೇ ಪೋಸ್ಟ್‌ನಲ್ಲಿ ಬಸ್ ಸಂಖ್ಯೆ KA41 D2500 ಎಂದು ಹೇಳಿ ಬಿಎಂಟಿಸಿಗೆ ಟ್ಯಾಗ್ ಮಾಡಲಾಗಿದೆ.
ಈ ವಿಡಿಯೋದಲ್ಲಿ ಕಂಡಕ್ಟರ್ ಈ ರೀತಿ ನಡೆದುಕೊಂಡರೂ ಯಾವುದೇ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ ಆ ಆಸನದಲ್ಲಿ ಕುಳಿತಿದ್ದ ಮಹಿಳೆಯೂ ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
5 ರೂಪಾಯಿ ಚಿಲ್ಲರೆ ಜಗಳಕ್ಕೆ ಬಿಎಂಟಿಸಿ ಕಚೇರಿಗೆ ನುಗ್ಗಿದ ಕನ್ನಡ ಸಂಘಟನೆ ರೂಪೇಶ್ ರಾಜಣ್ಣ ಟೀಂ!
ನಮಾಜ್ ಟೋಪಿ ವೈರಲ್
ಕೆಲ ತಿಂಗಳ ಹಿಂದೆ ಮುಸ್ಲಿಂ ಕಂಡಕ್ಟರ್ ಕೆಲಸದ ಅವಧಿಯಲ್ಲಿ ನಮಾಜ್ ಟೋಪಿ ಧರಿಸಿದ್ದಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ತೀವ್ರವಾಗಿ ಖಂಡಿಸಿದ್ದರು. ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಧರ್ಮವನ್ನು ಪ್ರತಿನಿಧಿಸುವ ಟೋಪಿ ಧರಿಸೋದು ತಪ್ಪು ಎಂದು ಮಹಿಳೆ ವಾದಿಸಿದ್ದರು. ಕಂಡಕ್ಟರ್ ಮಾತ್ರ ಏನೂ ಮಾತನಾಡದೇ ಟೋಪಿಯನ್ನು ತೆಗೆದು ಜೇಬಿನಲ್ಲಿರಿಸಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು.
ಇತ್ತೀಚೆಗೆ ಯುವತಿಯೋರ್ವಳು ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದು ನಿಲ್ದಾಣಕ್ಕಿಂತ ಮುಂಚೆಯೇ ಇಳಿಯಲು ಮುಂದಾಗಿದ್ದಕ್ಕೆ ಕಂಡಕ್ಟರ್ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಕಂಡಕ್ಟರ್ ಓರ್ವ ಕಮಿಷನ್ ಆಸೆಗಾಗಿ ಶಕ್ತಿ ಯೋಜನೆ ಟಿಕೆಟ್ ತೆಗೆದು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಆ ಕಂಡಕ್ಟರ್ ನನ್ನು ಅಮಾನತುಗೊಳಿಸಲಾಗಿತ್ತು.
ಬೆಂಗಳೂರು ಏರ್‌ಪೋರ್ಟ್‌ಗೆ ದಿನಕ್ಕಿದೆ 6 ಟ್ರೇನ್, ಆದ್ರೆ ಪ್ರಯಾಣ ಮಾಡೋರು ಬರೀ 30 ಜನ!