ಬೆಂಗಳೂರು(ಸೆ.06): ಕೋವಿಡ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಹವಾನಿಯಂತ್ರಿತ ಸಾರಿಗೆ ಬಸ್‌ ಸೇವೆಗಳನ್ನು ಬಿಎಂಟಿಸಿ ನಾಳೆಯಿಂದ(ಸೋಮವಾರ) ಪುನರಾರಂಭಿಸಲಿದೆ.

ಹವಾನಿಯಂತ್ರಣ ಪ್ರದೇಶದಲ್ಲಿ ಕೊರೋನಾ ವೈರಸ್‌ ಹೆಚ್ಚು ಪ್ರಭಾವಗೊಳ್ಳಲಿದೆ. ಜೊತೆಗೆ, ವೇಗವಾಗಿ ಹರಡಲಿದೆ ಎಂಬ ಕಾರಣದಿಂದ ಈ ಬಸ್‌ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಾರಿಗೆ ಸೇವೆ ಆರಂಭಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ

ಸೆ.7ರಿಂದ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹೊಸಕೋಟೆ, ಅತ್ತಿಬೆಲೆ, ಕಾಡುಗೋಡಿ. ಬನಶಂಕರಿ ಮತ್ತು ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳ, ಬನಶಂಕರಿಯಿಂದ ಐಟಿಪಿಎಲ್‌ ಮಾರ್ಗಗಳಲ್ಲಿ ಈ ಬಸ್‌ಗಳ ಸೇವೆ ಪ್ರಾರಂಭವಾಲಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.