ನಾಗಮಂಗಲ ಕೋಮುಗಲಭೆ ಪ್ರಕರಣ: ಗೃಹಸಚಿವರ ಉಡಾಫೆ ಹೇಳಿಕೆಗೆ ಬಿಕೆ ಹರಿಪ್ರಸಾದ್ ಆಕ್ಷೇಪ
ಕೋಮು ಗಲಭೆಗೆ ಮಂಡ್ಯ ಜನರು ಆಸ್ಪದ ನೀಡುತ್ತಿರಲಿಲ್ಲ. ಮಂಡ್ಯ ಜಿಲ್ಲೆಗೆ ಬಿಜೆಪಿ ಕಾಲಿಟ್ಟ ಬಳಿಕ ಕೋಮುಗಲಭೆ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಈಗ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಆರೋಪಿಸಿದರು.
ಬೆಂಗಳೂರು (ಸೆ.12): ಕೋಮು ಗಲಭೆಗೆ ಮಂಡ್ಯ ಜನರು ಆಸ್ಪದ ನೀಡುತ್ತಿರಲಿಲ್ಲ. ಮಂಡ್ಯ ಜಿಲ್ಲೆಗೆ ಬಿಜೆಪಿ ಕಾಲಿಟ್ಟ ಬಳಿಕ ಕೋಮುಗಲಭೆ ಸೃಷ್ಟಿ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಈಗ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಆರೋಪಿಸಿದರು.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಆಗಿದ್ದರೂ, ಯಾವುದೇ ಪಕ್ಷದವರಾಗಿದ್ದರು ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ. ಕಾನೂನು ಚೌಕಟ್ಟು ಮೀರಿ ಹೋದವರಿಗೆ ಕಾನೂನು ಬುದ್ಧಿ ಕಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ, ಸಿಎಂಗೆ ಒತ್ತಾಯ ಮಾಡುತ್ತೇನೆ ಎಂದರು.
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ; ಇದೊಂದು ಆಕಸ್ಮಿಕ ಘಟನೆ ಎಂದ ಗೃಹ ಸಚಿವ!
ಸರ್ಕಾರಕ್ಕೂ ತುಷ್ಟೀಕರಣಕ್ಕೂ ಸಂಬಂಧವಿಲ್ಲ. ಈ ಘಟನೆ ಸರ್ಕಾರದ ವೈಫಲ್ಯ ಅಲ್ಲ, ಕೆಲ ಸಂಘಟನೆಗಳು ಕೋಮುಗಲಭೆ ಮಾಡಲು ಹುಟ್ಟಿಕೊಂಡಿವೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿವೆ. ಯಾವ ಕಾಲಕ್ಕೆ ಯಾವ ರೀತಿ ಬಣ್ಣ ಬದಲಾಯಿಸಬೇಕೆಂದು ಗೋಸುಂಬೆ ರೀತಿ ಬಣ್ಣ ಬದಲಾಯಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಟ್ವಿಟ್ ಉಲ್ಲೇಖಿಸಿ ತಿರುಗೇಟು ನೀಡಿದರು.
ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಪೊಲೀಸ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡ!
ಗೃಹ ಸಚಿವ ಹೇಳಿಕೆಗೆ ಹೇಳಿಕೆ ಬಿಕೆ ಹರಿಪ್ರಸಾದ್ ಆಕ್ಷೇಪ
ಯಾವುದೇ ಕೋಮು ಗಲಭೆಯನ್ನ ಸಣ್ಣದು ಎಂದು ತೆಗೆದುಕೊಳ್ಳಬಾರದು. ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಬೇಕು. ಈ ಘಟನೆಯಲ್ಲಿ ಕಲ್ಲು ತೂರಿದವರು, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗೃಹಸಚಿವರಿಗೆ ಮನವಿ ಮಾಡುತ್ತೇನೆ. ಬಿಜೆಪಿ ಅವರಿಗೆ ರೋಟಿ, ಕಪಡಾ, ಮಕಾನ್, ಅನ್ನ, ಬಟ್ಟೆ, ಇರೋಕೆ ಸೂರು ಕೋಮು ಗಲಭೆಗಳೇ ಬೇಕು ಎಂದು ಹರಿಹಾಯ್ದರು.