ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ; ಇದೊಂದು ಆಕಸ್ಮಿಕ ಘಟನೆ ಎಂದ ಗೃಹ ಸಚಿವ!

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ ಇದೊಂದು ಆಕಸ್ಮಿಕ ಘಟನೆ ಎಂದ ಗೃಹ ಸಚಿವ ಪರಮೇಶ್ವರ, ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್‌ಗಳಿಗೆ ಬೆಂಕಿ, 13 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಮುಗಲಭೆ ಗೃಹ ಸಚಿವರಿಗೆ ಸಣ್ಣ ಘಟನೆ ಆಗೋಯ್ತಾ?

karnataka home minister paramesh's statas about muslim group stone pelting during ganeshotsav at nagamangala mandya rav

ಬೆಂಗಳೂರು (ಸೆ.12): ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ ನಡೆದಿದೆ. ಘಟನೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡರ ನಿವಾಸ ಸೇರಿದಂತೆ ಹಿಂದೂಗಳ ಮನೆಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ 10ಕ್ಕೆ ಹೆಚ್ಚು ಬೈಕ್ ಸುಟ್ಟು ಕರಕಲಾಗಿವೆ, 13ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಇಡಲಾಗಿದೆ. ಆದರೆ ಇದೊಂದು ಆಕಸ್ಮಿಕ ಘಟನೆ ಎಂದು ಉಡಾಫೆ ಹೇಳಿಕೆ ನೀಡಿರುವ ಗೃಹ ಸಚಿವ. ಕೋಮುಗಲಭೆ ಗೃಹಸಚಿವರಿಗೆ ಸಣ್ಣ ಘಟನೆ ಆಗೋಯ್ತಾ? ಈ ಹಿಂದೆ ಘಟನೆ ಆದಾಗ ಉಡಾಫೆ ಉತ್ತರ ನೀಡಿದ್ದ ಗೃಹ ಸಚಿವ.

ಘಟನೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಘಟನೆ ಬಳಿಕ ಎಡಿಜಿಪಿ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ. ಇದು ಕೋಮುಗಲಭೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಒಬ್ಬರಿಗೊಬ್ಬರು ಘರ್ಷಣೆ ಮಾಡಿಕೊಂಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಪೊಲೀಸ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡ!

ಇಂತಹ ಸಣ್ಣ ಘಟನೆಗಳಿಗೆ ಪ್ರಚಾರ ಕೊಡೋದಕ್ಕೆ ಹೋಗಬೇಡಿ. ಈಗಾಗಲೇ ಪರಿಸ್ಥಿತಿ ಕಂಟ್ರೋಲ್‌ಗೆ ತೆಗೆದುಕೊಂಡಿದ್ದೇವೆ. ಪೊಲೀಸರು ಎಲ್ಲ ಭದ್ರತೆ ಇಟ್ಟುಕೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಪ್ಲಟೋನ್ ಕೂಡ ಇಟ್ಟುಕೊಂಡಿದ್ದರು. ಇಲ್ಲದಿದ್ರೆ ಇನ್ನು ಹೆಚ್ಚಿನ ಗಲಾಟೆ ಆಗುತ್ತಿತ್ತು. ಈಗಾಗಲೇ ಘಟನೆ ಸಂಬಂಧ 52 ಜನರನ್ನು ಅರೆಸ್ಟ್ ಮಾಡಿದ್ದೇವೆ. ಸಿಸಿಟಿವಿ ಕ್ಯಾಮೆರಾ ವಿಡಿಯೋಗಳನ್ನು ಗಮನಿಸಿ ಇನ್ನಷ್ಟು ಜನರನ್ನು ವಶಕ್ಕೆ ಪಡೆಯುತ್ತೇವೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ಅಂತಾ ಕಾಣುತ್ತಿಲ್ಲ. ಹೀಗಾಗಿ ರಾಜಕೀಯ ಟೀಕೆ ಆರೋಪಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಈ ಹಿಂದೆ ಕುಮಾರಸ್ವಾಮಿ ಯಾವ ರೀತಿ ಓಲೈಕೆ ಮಾಡ್ತಿದ್ರೋ ಗೊತ್ತಿಲ್ಲ. ಅದರ ಬಗ್ಗೆ ಈಗ ಮಾತನಾಡೋದಿಲ್ಲ ಎಂದ ಸಚಿವರು.

ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ 144 ಸೆಕ್ಷನ್ ಜಾರಿ!

ನಾಗಮಂಗಲಕ್ಕೆ ಬಿಜೆಪಿ ನಿಯೋಗ ಬೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ನಾನು ಮನವಿ ಮಾಡ್ತೇನೆ. ಪೊಲೀಸರು ಇದ್ದಾರೆ ಅವರಿಗೆ ವಿಚಾರಣೆ ಮಾಡಲು ಬಿಡಿ. ಘಟನೆ ಹೆಚ್ಚಾಗದ ರೀತಿಯಲ್ಲಿ ಏನಾದರೂ ಸಲಹೆ ಇದ್ದರೆ ಕೊಡಲಿ. ಅದನ್ನು ಬಿಟ್ಟು ರಾಜಕೀಯ ಮಾಡಬಾರದು. ಈಗಾಗಲೇ ಎಡಿಜಿಪಿ ಹೋಗಿದ್ದಾರೆ. ಅವಶ್ಯ ಬಿದ್ದರೆ ನಾನು ಹೋಗುತ್ತೇನೆ ಎಂದ ಸಚಿವರು, 

Latest Videos
Follow Us:
Download App:
  • android
  • ios