ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿಡಲಾಗಿದೆ: ಕಾಂಗ್ರೆಸ್‌ ವಿರುದ್ಧ ಕಟೀಲ್‌ ವಾಗ್ದಾಳಿ

ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದು, ಬರ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಇಲ್ಲದೆ ರೈತರು ತತ್ತರಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ 

BJP State President Nalin Kumar Kateel Talks Over Electricity grg

ಮಂಗಳೂರು(ಸೆ.01):  ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ನೀರು ಕೊಡದೆ ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದೆ. ರಾಜ್ಯದ ರೈತರ ಇಚ್ಛೆ ಪೂರೈಸದೆ, ನ್ಯಾಯ ಕೊಡದೆ ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು. 

ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದು, ಬರ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಇಲ್ಲದೆ ರೈತರು ತತ್ತರಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು. 

ಘರ್‌ ವಾಪಸಿ ತಡೆಗೆ ಇಂದು ಬಿಜೆಪಿ ಕೋರ್‌ ಕಮಿಟಿ ಸಭೆ

ಚುನಾವಣಾ ಪೂರ್ವ ಕಾಂಗ್ರೆಸ್‌ ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಮಾನದಂಡ ಇರಲಿಲ್ಲ. ಈವರೆಗೆ ಘೋಷಿಸಿದ ನಾಲ್ಕು ಗ್ಯಾರಂಟಿಗಳಿಗೆ ಮಾನದಂಡ ಹಾಕಲಾಗಿದೆ. ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿಡಲಾಗಿದೆ. ಝೀರೋ ಬಿಲ್‌ ಜೊತೆಗೆ ವಿದ್ಯುತ್‌ ಕಡಿತದಿಂದಾಗಿ ಈಗ ಝೀರೋ ಕರೆಂಟ್‌ ಎಂಬಂತಾಗಿದೆ ಎಂದು ಟೀಕಿಸಿದರು.

ಇಂದಿರಾ ಗಾಂಧಿ ಕಾಲದ ಗತವೈಭವ ಮರುಕಳಿಸುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆ ಗತವೈಭವದಲ್ಲಿ ತುರ್ತು ಪರಿಸ್ಥಿತಿಯನ್ನೂ ಹೇರಲಾಗಿತ್ತು ಎಂಬುದನ್ನು ಮರೆಯಬಾರದು ಎಂದರು.

Latest Videos
Follow Us:
Download App:
  • android
  • ios