ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ರಾಮ, ಪಾಂಡವರಿಗೂ ವನವಾಸ ತಪ್ಪಲಿಲ್ಲ, ನಾನು ಅವರಿಗಿಂತ ದೊಡ್ಡವನಾ? -ಸಿಟಿ ರವಿ!
ಕೇಂದ್ರದ ವಿಚಾರ ಬಂದಾಗ ಜನರು ನರೇಂದ್ರ ಮೋದಿ ಹೆಸರು ಹೇಳ್ತಾರೆ. ನಮ್ಮದು ಒಂದೇ ಗುರಿ. ಮತ್ತೊಮ್ಮೆ ಬಿಜೆಪಿ ಸರಕಾರ, ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಮಾಡೋದು. ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸೊಕ್ಕೆ ಆಗೋದಿಲ್ಲ ಎಂಬುದು ನಮ್ಮ ನಾಯಕರಿಗೆ ಗೊತ್ತು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಹೇಳಿದರು.
ಹಾಸನ (ನ.11): ಬಿವೈ ವಿಜಯೇಂದ್ರ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದಾರೆ ಬಹಳ ಸಂತೋಷವಾಗಿದೆ ಎಂದು ಮಾಜಿ ಸಚಿವ ಸಿಟಿ ರವಿ ಅಭಿನಂದನೆ ಸಲ್ಲಿಸಿದರು.
ಇಂದು ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪಕ್ಷ ಒಂದು ಹಂತಕ್ಕೆ ಬೆಳೆದಿದೆ. ಅದನ್ನ ವಿಸ್ತರಿಸುವ ಸ್ವರ್ಧೆಯೇ ಇಲ್ಲದಿದ್ದಾಗ ರೇಸಿನ ಪ್ರಶ್ನೆಯೇ ಇಲ್ಲ. ರಾಮ, ಪಾಂಡವರಿಗೂ ವನವಾಸ ತಪ್ಪಲಿಲ್ಲ. ಇನ್ನೂ ಸಿಟಿ ರವಿ ಅವರಿಗಿಂತ ದೊಡ್ಡವನಾ ಎಂದ ಪ್ರಶ್ನಿಸಿದರು. ಮುಂದುವರಿದು, ನಾನೀಗ ಸಾಮಾನ್ಯ ಕಾರ್ಯಕರ್ತನಾಗಿ ಕೆಲ್ಸ ಮಾಡುತ್ತಿದ್ದೇನೆ. ಪಕ್ಷವೇ ಜವಾಬ್ದಾರಿ ಕೊಟ್ಟಿರುವಾಗ ಆ ಬಗ್ಗೆ ಏನಾದ್ರು ಮಾತನಾಡಿದ್ರೆ ತಪ್ಪು ಸಂದೇಶ ರವಾನೆ ಆಗುತ್ತೆ. ನಮ್ಮ ಪಕ್ಷ ಗಟ್ಟಿಯಾಗಬೇಕು ಅಂತಾ ಬಯಸುವನು ನಾನು. ಅದು ಯಾರ ಮೂಲಕ ಅಂತಾ ಅಲ್ಲ, ಪಕ್ಷ ಕಾಲಕಾಲಕ್ಕೆ ಅನುಭವ ಇದ್ದವರಿಗೂ, ಇಲ್ಲದವರಿಗೂ ಸ್ಥಾನಮಾನ ಕೊಡುತ್ತ ಬಂದಿದೆ. ಅದನ್ನೀಗ ಚರ್ಚೆ ವಿಷಯ ಮಾಡಲು ನಾನು ಬಯಸುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾಗಿರುವುದರಿಂದ ನನಗಂತೂ ಅಸಮಾಧಾನ ಇಲ್ಲ. ನಾನು ಪಕ್ಷದ ಜವಾಬ್ದಾರಿಯುತ ಸ್ಥಾನವನ್ನು ಕೇಳಿ ಪಡೆದವನಲ್ಲ ಎಂದರು.
ನಾವು ಪದೇಪದೆ ತಿವಿದಿದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆಗಿದೆ.: ಆಯನೂರು ಮಂಜುನಾಥ
ಇನ್ನು ಬಿಜೆಪಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಕಾಂಗ್ರೆಸ್‌ಗೆ ಈಗಿರುವವರನ್ನೇ ಸಮಾಧಾನಪಡಿಸಲು ಆಗುತ್ತಿಲ್ಲ. ಇನ್ನು ಇಲ್ಲಿಂದ ಕರೆದುಕೊಂಡು ಹೋದವರಿಗೆ ಏನ್ ಕೊಡ್ತಾರೆ. ಯಾವಾಗಲೂ ಸರ್ಕಾರ ಬಂದಾಗ ಇನ್ ಕಮಿಂಗ್ ನಂತ್ರ ಔಟ್ ಗೋಯಿಂಗ್ ಇರುತ್ತೆ. ಗೆಲುವಿಗೆ ಹತ್ತಾರು ಕಾರಣಗಳು ಇದ್ದಂಗೆ ಸೋಲಿಗೂ ಹತ್ತಾರು ಕಾರಣಗಳಿವೆ. ಪ್ರತಾಪ್ ಸಿಂಹ ಎರಡು ಬಾರಿ ಸಂಸದರಾಗಿಲ್ವಾ? ಭಗವಂತ್ ಖೂಬಾ ಎಂಪಿ ಆಗಿಲ್ವಾ? ನಾವೆಲ್ಲ ಪ್ರಯೋಗಳಿಂದಲೇ ಬಂದವರು ಎಂದರು.
ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗಿದೆಯಾ?: ಕೆಎಸ್ ಈಶ್ವರಪ್ಪ ಪ್ರಶ್ನೆ
ಕೇಂದ್ರದ ವಿಚಾರ ಬಂದಾಗ ಜನರು ನರೇಂದ್ರ ಮೋದಿ ಹೆಸರು ಹೇಳ್ತಾರೆ. ನಮ್ಮದು ಒಂದೇ ಗುರಿ. ಮತ್ತೊಮ್ಮೆ ಬಿಜೆಪಿ ಸರಕಾರ, ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಮಾಡೋದು. ನನ್ನಂತವರನ್ನ ಬಹಳ ಕಾಲ ಸುಮ್ಮನೇ ಕೂರಿಸೊಕ್ಕೆ ಆಗೋದಿಲ್ಲ ಎಂಬುದು ನಮ್ಮ ನಾಯಕರಿಗೆ ಗೊತ್ತು ಎನ್ನುವ ಮೂಲಕ ಪಕ್ಷ ತನಗೂ ಜವಾಬ್ದಾರಿ ಕೊಡಲಿದೆ ಎಂದು ಸಿಟಿ ರವಿ ಸುಳಿವು ನೀಡಿದರು.