ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗಿದೆಯಾ?: ಕೆಎಸ್ ಈಶ್ವರಪ್ಪ ಪ್ರಶ್ನೆ
ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರರನನ್ನು ನಮ್ಮ ನಾಯಕರು ನೇಮಕ ಮಾಡಿದ್ದಾರೆ. ಕೊಟ್ಟಿರುವ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಲಿ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಭಿನಂದನೆಗಳನ್ನ ತಿಳಿಸಿದರು.
ಶಿವಮೊಗ್ಗ (ನ.11): ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರರನನ್ನು ನಮ್ಮ ನಾಯಕರು ನೇಮಕ ಮಾಡಿದ್ದಾರೆ. ಕೊಟ್ಟಿರುವ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಲಿ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಭಿನಂದನೆಗಳನ್ನ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಆಯ್ಕೆ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡೀ ಪ್ರಪಂಚ ಭಾರತದ ಲೋಕಸಭಾ ಚುನಾವಣೆ ನೋಡ್ತಿದೆ. ಈಗಾಗಲೇ ದೇಶದ ಪ್ರಧಾನಮಂತ್ರಿ ವಿಶ್ವ ನಾಯಕ ಎನ್ನುವ ಹೆಸರು ಪಡೆದಿದ್ದಾರೆ. ನಮ್ಮ ದೇಶದ ಪ್ರತಿ ಹಳ್ಳಿ ಜನ ಮೋದಿ ಮೋದಿ ಎಂತಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನ ಗೆದ್ದಿದ್ದೆವು. ಆಗ ಕಾಂಗ್ರೆಸ್ ಸರಕಾರ ಇತ್ತು. ಈ ಬಾರಿ 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಹೊಸ ಬಾಟಲಿಯಲ್ಲಿ ಹಳೇ ವೈನ್ ನೋ ರಿಯಾಕ್ಷನ್'; ಬಿವೈ ವಿಜಯೇಂದ್ರ ನೇಮಕ ಬಗ್ಗೆ ಸಚಿವ ಸುಧಾಕರ್ ವ್ಯಂಗ್ಯ
ದೇಶದಲ್ಲಿ ಬಿಜೆಪಿ ಒಡೆದ ಮನೆ ಅಂತಿದ್ದಾರೆ ಕಾಂಗ್ರೆಸ್ ನವರು. ಆದರೆ ದೇಶದಲ್ಲಿ ಒಂದೇ ಕಾಂಗ್ರೆಸ್ ಇಲ್ಲ, ಹಲವು ಕಾಂಗ್ರೆಸ್ ಪಕ್ಷಗಳಿವೆ. ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಒಡೆದು ಚೂರು ಚೂರಾಗಿರುವ ಪಕ್ಷ. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇದೆಯಾ? ಎಂದು ಪ್ರಶ್ನಿಸಿದರು. ಮುಂದುವರಿದು, ಯಡಿಯೂರಪ್ಪ ಅವರ ಮಕ್ಕಳು ಆಗುತ್ತಾರಾ ಅಂತಾ ಕಾಯ್ತಿದ್ದರು. ಕಾಂಗ್ರೆಸ್ ನಲ್ಲಿ ನೆಹರು, ಇಂದಿರಾಗಾಂಧಿ ಕುಟುಂಬದವರೇ ಆಳಿದ್ದಾರೆ. ಕಾಂಗ್ರೆಸ್ ಪಕ್ಷ ಇರುವುದೇ ಒಂದು ಕುಟುಂಬದ ಹಿಡಿತದಲ್ಲಿ. ಬಿಜೆಪಿ ಕುಟುಂಬ ರಾಜಕಾರಣಕ್ಕೆ ವಿರೋಧವೇ. ಬಿಜೆಪಿ ಪಕ್ಷ ವ್ಯಕ್ತಿ ಮೇಲೆ ನಿಂತಿಲ್ಲ. ಪಕ್ಷ ಉಳಿಸಬೇಕು ಅಂತಾ ಇರುವ ಪಕ್ಷ. ಎಲ್ಲಾ ನಾಯಕರು ಒಟ್ಟಿಗೆ ಇರುತ್ತೇವೆ. ಬಿಜೆಪಿಯಲ್ಲಿ ಸ್ಥಾನಮಾನದ ಪ್ರಶ್ನೆ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ. ಪ್ರಧಾನಮಂತ್ರಿ ಮೋದಿ ಅವರು ಕಾರ್ಯಕರ್ತರೇ ಎಂದರು.
ವಿರೋಧ ಪಕ್ಷದ ಸ್ಥಾನಕ್ಕೆ ನಾನೂ ಆಕಾಂಕ್ಷಿ, ನಮ್ಮ ನಾಯಕರು ಸೂಕ್ತ ವ್ಯಕ್ತಿಗೆ ಕೊಡುತ್ತಾರೆ: ಶಾಸಕ ಅಶ್ವತ್ಥ ನಾರಾಯಣ
ಮುಂದಿನ ಚುನಾವಣೆ ವೇಳೆ 28 ಸ್ಥಾನಗಳನ್ನು ಗೆಲ್ಲುತ್ತೇವೆ. ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಹೋಗಲ್ಲ. ಬಿಜೆಪಿ ಸಂಘಟನೆ, ಹಿಂದುತ್ವದ ಮೇಲೆ ನಡೆಯುತ್ತಿರೋದು. ಸ್ವತಂತ್ರ ಬಂದಾಗಿನಿಂದಲೂ ಒಂದೇ ಕುಟುಂಬದ ಕೈಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ಪಕ್ಷ ಏನು ಜವಾಬ್ದಾರಿ ಕೊಡುತ್ತದಾ ಅದನ್ನು ನಿರ್ವಹಿಸುತ್ತೇನೆ. ನಮ್ಮದು ಸಾಮೂಹಿಕ ನೇತೃತ್ವ. ಲೋಕಸಭೆ ಟೀಕೆಟ್ ಹಂಚಿಕೆ, ಲೋಕಸಭೆ ಚುನಾವಣಾ ಪ್ರಚಾರ ಎಲ್ಲಾ ಸಾಮೂಹಿಕ ನೇತೃತ್ವದಲ್ಲೇ ನಡೆಯುತ್ತದೆ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಶಪಥಗೈದರು.