ಪೇಜಾವರ ಶ್ರೀಗಳನ್ನು ಭೇಟಿಯಾದ ಮುಸ್ಲಿಂ ನಿಯೋಗ: ಶ್ರೀಗಳ ನಿಲುವು ಬೆಂಬಲಿಸಿದ ಸಂಸದ ಹೆಗಡೆ!
* ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಹಿಂದೂ, ಮುಸ್ಲಿಂ ವಿಚಾರ
* ವಿವಾದಗಳ ಮಧ್ಯೆ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದ ಮುಸ್ಲಿಂ ನಿಯೋಗ
* ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀಗಳು ಕೊಟ್ಟ ತಿರುಗೇಟಿಗೆ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲ
ಉಡುಪಿ(ಮಾ.31): ಕರ್ನಾಟಕದಲ್ಲಿ ಚುನಾವಣೆಗೆ ಇನ್ನು ಕೇವಲ ಒಂದು ವರ್ಷವಿದೆ. ಹೀಗಿರುವಾಗ ಇತ್ತ ಹಿಂದೂ, ಮುಸ್ಲಿಂ ಜಾತಿ ಸಂಬಂಧಿತ ವಿಚಾರಗಳು ಭಾರೀ ಸದ್ದು ಮಾಡುತ್ತಿವೆ. ಹಿಜಾಬ್ ವರ್ಸಸ್ ಕೇಸರಿ ಶಾಲಿನಿಂದ ಆರಂಬವಾದ ವಿವಾದಗಳ ಸರಮಾಲೆ ಬಳಿಕ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವ ಬಿರ್ಧಾರ ಸದ್ದು ಮಾಡಿತ್ತು. ಇದು ಕೊಂಚ ತಗ್ಗಿದ ಬೆನ್ನಲ್ಲೇ ಹಲಾಲ್ ಮಾಂಸ ನಿಷೇಧ ವಿಚಾರ ಸದ್ದು ಮಾಡಲಾರಂಭಿಸಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಮುಸ್ಲಿಂ ನಿಯೋಗವೊಂದು ಇದೇ ವಿಚಾರವಾಗಿ ಉಡುಪಿಯ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದು, ಏನಾದರೊಂದು ಪರಿಹಾರ ಸೂಚಿಸಲು ಮನವಿ ಮಾಡಿತ್ತು. ಆದರೆ ಶ್ರೀಗಳು ಈ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಹೀಗಿರುವಾಗಲೇ ಇತ್ತ ಉತ್ತರ ಕ್ನನಡ ಲೋಕಸಭಾ ಕ್ಷೇತ್ರದ ಸಂಸದ ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆ ಶ್ರೀಗಳ ಈ ನಿಲುವನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಸಂಸದರ ಈ ಫೇಸ್‌ಬುಕ್ ಪೋದಸ್ಟ್‌ನಲ್ಲೇನಿದೆ? ನೀವೇ ಓದಿ
ಮುಸಲ್ಮಾನರ ವ್ಯಾಪಾರ ಬಹಿಷ್ಕಾರಕ್ಕೆ ಹಿಂದುಗಳ ನೋವಿನ ಸ್ಫೋಟವೇ ಕಾರಣ: ಪೇಜಾವರ ಶ್ರೀ
ಇಸ್ಲಾಂನ ಅತ್ಯಂತ ಅಸಹಿಷ್ಣುತೆ, ಮತೀಯತೆ ಖಂಡಿಸಿ ಮುಸ್ಲಿಮರ ನಿಯೋಗವನ್ನು ವಾಪಸ್ ಕಳುಹಿಸಿದ ಪರಮಪೂಜ್ಯ ಪೇಜಾವರ ಶ್ರೀಗಳಲ್ಲಿ ನನ್ನ ಶಿರಸಾಷ್ಟಾಂಗ ಪ್ರಣಾಮಗಳು ಹಾಗೂ ಧನ್ಯವಾದಗಳು.
ಈ ಜಗತ್ತಿಗೆ ಅಂಟಿದ ಅತೀ ದೊಡ್ಡ ಶಾಪ ಇಸ್ಲಾಂ! ಮನುಷ್ಯನ ಊಹೆಗೂ ನಿಲುಕದ ಬರ್ಬರತೆ, ಹಿಂಸೆ, ಕ್ರೌರ್ಯ, ಭಯೋತ್ಪಾದನೆಯೇ ಅವರ ಘನ ಇತಿಹಾಸ.ಇಂದಿನ ವಿಶ್ವದ ಶಾಂತಿಗೆ ಅಪಾಯ, ಶಿಕ್ಷಣದ ಕೊರತೆಯಲ್ಲ, ನಿರುದ್ಯೋಗವೂ ಅಲ್ಲ, ಬಡತನವಂತೂ ಅಲ್ಲವೇ ಅಲ್ಲ..... ಇಡೀ ಜಗತ್ತಿನ ಅಪಾಯ, ಇಸ್ಲಾಂನ ಪೈಶಾಚಿಕತೆ!
ಆದರೆ ಎಡಬಿಡಂಗಿಗಳಿಗೆ ಮಾತ್ರ ಹಾಗೆನಿಸುವುದೇ ಇಲ್ಲ. ಅದನ್ನು ಅವರ ನಿರ್ವೀರ್ಯತೆ ಅಂತ ಕರೆಯಬೇಕೊ? ಹೇಡಿತನ ಅಂತ ಕರೆಯಬೇಕೊ? ಅಥವಾ ಅವರಿಗೆ ಬಡಿದ ಮಹಾ ಮೂರ್ಖತನದ ರೋಗ ಅಂತ ಹೇಳಬೇಕೊ? ಗೊತ್ತಿಲ್ಲ
ಸಂಸ್ಕೃತಿಯ ಅರಿವೇ ಇಲ್ಲದ ಸೋಗಲಾಡಿ ಶಿಕ್ಷಣದ ಪರಿಣಾಮವೋ ಏನೋ ಗೊತ್ತಿಲ್ಲ, ಅವರು ಯಾರೂ ಸಹ ಇಸ್ಲಾಂನ ಹೇಯ ಕೃತ್ಯಗಳನ್ನ ಖಂಡಿಸುವುದು ಹಾಗಿರಲಿ, ಅದರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಅಂಥವರೂ ಯಾರೇ ಇರಲಿ ಅವರಿಗೆ ನನ್ನ ಧಿಕ್ಕಾರವಿರಲಿ!!!
ಇವುಗಳ ಮಧ್ಯದಲ್ಲಿ ಅದೇನೋ ಒಂದು ಆತ್ಮಾಭಿಮಾನದ ಕೋಲ್ಮಿಂಚು ಶ್ರೀ ಪೇಜಾವರ ಶ್ರೀಗಳ ನುಡಿ ಹಾಗೂ ನಡೆ ಅದಕ್ಕಾಗಿಯೇ ಪರಮಪೂಜ್ಯರು ನಮಗೆ ಆದರ್ಶರಾಗಿ ನಿಲ್ಲುತ್ತಾರೆ. ಹಿಂದೂ ಸಮಾಜದ ಧ್ವನಿಯಾಗಿ ನಿಂತು, ಇಸ್ಲಾಂನ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿದ್ದಾರೆ ಯಾವ ಮುಲಾಜೂ ಇಲ್ಲದೆ ಸತ್ಯವನ್ನು ಚಾಟಿಯಿಂದ ಹೊಡೆದ ಹಾಗೆ ಹೇಳಿದ್ದಾರೆ.
ಇತ್ತೀಚೆಗೆ ಪೇಜಾವರ ಶ್ರೀಗಳನ್ನು ಭೇಟಿ ಮಾಡಲು ಹೋಗಿದ್ದ ಮುಸ್ಲಿಂ ನಿಯೋಗದ ಸದಸ್ಯರು ಹಿಂದೂ- ಮುಸ್ಲಿಂ ಸಮುದಾಯದ ನಡುವೆ ಉಂಟಾಗಿರುವ ಕಂದಕದ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಾಗ ಶ್ರೀಗಳು ಮುಸ್ಲಿಂ ನಿಯೋಗದ ಸದಸ್ಯರಿಗೆ ಚಾಟಿ ಏಟು ನೀಡಿದ್ದಾರೆ. ಮುಸ್ಲಿಂ ಸಮುದಾಯ, ಹಿಂದೆ ಅವರಿಂದಾದ ಆ ಎಲ್ಲಾ ಹಿಂಸಾಚಾರ, ದೇವಾಲಯಗಳ ಲೂಟಿ, ಹಿಂದೂ ಹೆಂಗಸರ, ಮಕ್ಕಳ ಮೇಲೆ ಎಸಗಿದ ದೌರ್ಜನ್ಯಗಳ ಆತ್ಮಾವಲೋಕನ, ಪರಾಮರ್ಶೆ ಆಗಬೇಕು ಎಂದು ಹೇಳಿದ್ದಾರೆ.
ಈಗ ಉಂಟಾದ ಸಮಸ್ಯೆ ನೂರಾರು ವರ್ಷಗಳ ದೌರ್ಜನ್ಯದ ಪ್ರತಿಫಲ, ಇದಕ್ಕೆ ಮೂಲ ಕಾರಣ ಯಾರು? ಎಂದು ಶ್ರೀಗಳು ಮುಸ್ಲಿಮರಿಗೆ ಪ್ರಶ್ನೆ ಮಾಡಿದ್ದಾರೆ. ಇಂದಿಗೂ ಸಹ ಗೋಹತ್ಯೆ, ಗೋ ಸಾಗಾಣಿಕೆ ನಿಂತಿಲ್ಲ, ಮೇಲಿಂದ ಮೇಲೆ ಹಿಂದೂಗಳ ಭಾವನೆಗಳನ್ನು ಘಾಸಿ ಮಾಡಲಾಗುತ್ತಿದೆ, ಇದರಿಂದ ಇಡೀ ಹಿಂದೂ ಸಮಾಜ ನೊಂದಿದೆ. ಈಗ ಬಂದು ಸಮಸ್ಯೆ ಬಗೆಹರಿಸಿ ಎಂದರೆ ಅದು ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮೊದಲು ಇಸ್ಲಾಂ ಸಮಾಜ ಅದು ಮಾಡಿದ ತಪ್ಪನ್ನು ಒಪ್ಪಿ, ಆತ್ಮವಿಮರ್ಶೆ ಮಾಡಿಕೊಳ್ಳಲಿ, ನಂತರ ನೀವು ಮಾತುಕತೆಗೆ ಬನ್ನಿ ಎಂದು ಖಚಿತವಾಗಿ ತಿಳಿಸಿ ಮುಸ್ಲಿಂ ನಿಯೋಗವನ್ನು ವಾಪಸ್ ಕಳಿಸಿದ್ದಾರೆ.
ಶ್ರೀಗಳ ಈ ದಿಟ್ಟ ನಡೆಯೇ ಹಿಂದೂ ಹೃದಯಗಳಿಗೆ ಮತ್ತಷ್ಟು ಮನೋಬಲವನ್ನು ನೀಡಿದೆ, ಶ್ರೀಗಳ ಬಗ್ಗೆ ಇರುವ ಗೌರವ ನೂರ್ಮಡಿಯಾಗಿದೆ. ಹಿರಿಯ ಶ್ರೀಗಳು ಕೊಟ್ಟ “ಮಮದೀಕ್ಷಾ ಹಿಂದುರಕ್ಷಾ” ಕರೆ ಮತ್ತೊಮ್ಮೆ ಮಾರ್ದನಿಗೊಂಡಿದೆ. ಸಂನ್ಯಾಸದ ನಿಜವಾದ ಅಂತರ್ಧ್ವನಿಗೆ ಮತ್ತೊಮ್ಮೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.ಕೃಷ್ಣಭೂಮಿಯಲ್ಲಿ ಮೊಳಗಿದ ಪಾಂಚಚನ್ಯ ನಾಡಿನೆಲ್ಲಡೆ ಪ್ರತಿಧ್ವನಿಗೊಳ್ಳಲಿ ಎಂದು ಆಶಿಸುತ್ತೇನೆ. ವೀರಶ್ರೀಗಳ ಪಾದಗಳಲ್ಲಿ ನನ್ನ ಭೈರವ ನಮನಗಳು.
ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀಗಳು ಹೇಳಿದ್ದಿಷ್ಟು
ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಸಮಾಜದಲ್ಲಿ ಕಾನೂನು ಶಾಂತಿ ನೆಮ್ಮದಿಗೆ ವಿರುದ್ಧವಾಗಿ ವರ್ತಿಸುತ್ತಿರುವ ರೀತಿಯನ್ನು ಸರಿಪಡಿಸಿಕೊಂಡು ಬನ್ನಿ ಮತ್ತೊಮ್ಮೆ ಮಾತನಾಡೋಣ. ಗೋಹತ್ಯೆ ಯಾಕೆ ನಿಂತಿಲ್ಲ? ಜೀವನೋಪಾಯಕ್ಕೆ ಗೋವುಗಳನ್ನು ಸಾಕುತ್ತಿರುವವರ ಮನೆಗೆ ನುಗ್ಗಿ ಬೆದರಿಕೆ ಹಾಕಿ ಗೋವುಗಳನ್ನು ಹೊತ್ತೊಯ್ಯುತ್ತಿದ್ದೀರಿ, ಇಂತಹ ಅನೇಕ ಕಾನೂನು ಬಾಹಿರ ಕೆಲಸದಿಂದ ಹಿಂದೂ ಸಮಾಜ ನೋವು ಎದುರಿಸುತ್ತಿದೆ. ನೊಂದಿರುವ ಸಮಾಜವನ್ನು ಬಿಟ್ಟು ಪರಿಹಾರ ನನ್ನ ಒಬ್ಬನಿಂದ ಸಾಧ್ಯವಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.'
ಹಿಜಾಬ್ ಧರಿಸುವ ಬಗ್ಗೆ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಹೇಳಿದ್ದೇನು ?
ಸದ್ಯ ಸಂಸದರ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಮತ್ತೆ ಎರಡು ಕೋಮುಗಳ ನಡುವೆ ಅಸಮಾಧಾನಕ್ಕೆ ಕಾರಣ ಉಂಟು ಮಾಡುವ ಸಾಧ್ಯತೆಗಳಿವೆ. ಮುಂದೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುವುದನ್ನು ಕಾದು ನೋಡಬೇಕಷ್ಟೇ.