ಮುಡಾ ಹಗರಣ: ಸೈಟ್ ಕೊಟ್ಟಿದ್ದೇ ಬಿಜೆಪಿ ಸರ್ಕಾರ, ಸಿಎಂ ಪರ ಕಮಲ ಶಾಸಕನ ಬ್ಯಾಟಿಂಗ್!
ಬಿಜೆಪಿಯವರಿಗೆ ಇನ್ನೇನು ಕೆಲಸ ಇದೆ ಹೇಳಿ?. ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ. ಸಿದ್ದರಾಮಯ್ಯ ಅವರ ನಲವತ್ತು ವರ್ಷದ ರಾಜಕೀಯಸಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಯಾಕೆ ಅವರ ರಾಜೀನಾಮೆ ಕೇಳಬೇಕು. ಬಿಜೆಪಿಯವರು ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದ ಎಸ್.ಟಿ. ಸೋಮಶೇಖರ್
ಬೆಂಗಳೂರು(ಅ.01): 50:50 ಅನುಪಾತದಲ್ಲಿ ಸೈಟುಗಳನ್ನು ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಒಬ್ಬರಿಗೇ ಕೊಟ್ಟಿಲ್ಲ. ಅದನ್ನು ನೂರಾರು ಜನಕ್ಕೆ ಆಥರ ಕೊಟ್ಟಿದ್ದಾರೆ. ಮುಡಾದಲ್ಲಿ ಸಾವಿರಾರು ಸೈಟುಗಳನ್ನು ಕೊಟ್ಟಿದ್ದಾರೆ. ಕಾನೂನು ವಿರುದ್ಧವಾಗಿ ಇವರೊಬ್ಬರಿಗೇ ಕೊಟ್ಟಿದ್ದಿದ್ರೆ ಟಾರ್ಗೆಟ್ ಮಾಡಬಹುದಿತ್ತು. ಪ್ರತಿ ಬೋರ್ಡ್ ಸಭೆಯಲ್ಲಿ ಸರ್ಕಾರ ಆದೇಶ ಆಗಿದೆ ಕೊಟ್ಟಿದ್ದಾರೆ. ಈ ಸೈಟುಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಪರ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್. ಟಿ. ಸೋಮಶೇಖರ್, ತಮ್ಮ ಯಜಮಾನರಿಗೆ ಕಿರಿಕಿರಿ ಆಗ್ತಿದೆ ಅಂತ ಈ ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ. ಇದು ತಡವಾಗಿರಬಹುದು, ಆದರೂ ಪರವಾಗಿಲ್ಲ ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಸೌಥ್ ಅಂತ ಮಾಡಿದ್ದಾರೆ, ಅದ್ರಲ್ಲಿ ತಪ್ಪೇನು?: ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್
ಬಿಜೆಪಿ ವಿರುದ್ಧ ಸೋಮಶೇಖರ್ ವಾಗ್ದಾಳಿ
ಬಿಜೆಪಿಯವರಿಗೆ ಇನ್ನೇನು ಕೆಲಸ ಇದೆ ಹೇಳಿ?. ರಾಜೀನಾಮೆ ಕೇಳೋದು ಬಿಟ್ಟು ಬಿಜೆಪಿಯವರಿಗೆ ಬೇರೇನೂ ಕೆಲಸ ಇಲ್ಲ. ಸಿದ್ದರಾಮಯ್ಯ ಅವರ ನಲವತ್ತು ವರ್ಷದ ರಾಜಕೀಯಸಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಯಾಕೆ ಅವರ ರಾಜೀನಾಮೆ ಕೇಳಬೇಕು. ಬಿಜೆಪಿಯವರು ಮೊದಲು ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಉತ್ತರ ಕೊಡಲಿ ಎಂದು ಬಿಜೆಪಿಗರ ವಿರುದ್ಧ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.