ರಾಮನಗರ ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೆಂಗಳೂರು ಸೌಥ್ ಅಂತ ಮಾಡಿದ್ದಾರೆ. ಅದ್ರಲ್ಲಿ‌ ತಪ್ಪೇನು?. ಬೆಂಗಳೂರು ಅಂತ ಬ್ರ್ಯಾಂಡ್ ಇದ್ರೆ ಅಪಾಟ್ಮೆಂಟ್ ಹಾಗೂ ಫ್ಯಾಕ್ಟರಿಗಳಿಗೂ ಅನುಕೂಲ ಆಗುತ್ತೆ. ಬೆಂಗಳೂರು ಹೊರಭಾಗದಲ್ಲಿ ನೀರಿನ‌ ಸಮಸ್ಯೆ ಕೂಡ ಕಡಿಮೆ ಆಗಲಿದೆ. ರಾಮನಗರ ಹೆಸರು ಇರುತ್ತೆ, ರಾಮನೂ ಅಲ್ಲೇ ಇರುತ್ತಾನೆ: ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ 

ಬೆಂಗಳೂರು(ಜು.27): ಎಲ್ಲಾ ಶಾಸಕರು ಗ್ರೇಟರ್ ಬೆಂಗಳೂರು ಬಗ್ಗೆ ಚರ್ಚೆ ಮಾಡಿದ್ದಾರೆ. ನೀರು, ಟ್ರಾಫಿಕ್, ರಸ್ತೆ ಸೇರಿ ಹಲವು ವಿಚಾರವಾಗಿ ಸುದೀರ್ಘ ಸಭೆ ಆಯ್ತು. ಗ್ರೇಟರ್ ಬೆಂಗಳೂರು ಮಾಡೋದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇದಕ್ಕೆ ಎಲ್ಲರ ಬೆಂಬಲ ಇದೆ, ನಮ್ಮ ಬೆಂಬಲ ಕೂಡ ಇದೆ. ಅನುದಾನ ಕೇಳಿದ್ವಿ, ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಿ ಹೇಳುತ್ತೇನೆ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. 

ಇಂದು(ಶನಿವಾರ) ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ. ಸೋಮಶೇಖರ್ ಅವರು, ರಾಮನಗರ ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೆಂಗಳೂರು ಸೌಥ್ ಅಂತ ಮಾಡಿದ್ದಾರೆ. ಅದ್ರಲ್ಲಿ‌ ತಪ್ಪೇನು?. ಬೆಂಗಳೂರು ಅಂತ ಬ್ರ್ಯಾಂಡ್ ಇದ್ರೆ ಅಪಾಟ್ಮೆಂಟ್ ಹಾಗೂ ಫ್ಯಾಕ್ಟರಿಗಳಿಗೂ ಅನುಕೂಲ ಆಗುತ್ತೆ. ಬೆಂಗಳೂರು ಹೊರಭಾಗದಲ್ಲಿ ನೀರಿನ‌ ಸಮಸ್ಯೆ ಕೂಡ ಕಡಿಮೆ ಆಗಲಿದೆ. ರಾಮನಗರ ಹೆಸರು ಇರುತ್ತೆ, ರಾಮನೂ ಅಲ್ಲೇ ಇರುತ್ತಾನೆ ಎಂದು ಹೇಳಿದ್ದಾರೆ. 

ರಾಮನಗರ ಜಿಲ್ಲೆ ಹೆಸರು ಬದಲಾವಣೆ: ಬೆಂಗ್ಳೂರು ಹೆಸರು ಇಟ್ಟರೆ ಅಭಿವೃದ್ಧಿ ಆಗುತ್ತೆ, ಸಚಿವ ಕೃಷ್ಣಭೈರಗೌಡ

ನಾನು ಪಾಲಿಟಿಕ್ಸ್ ಬಗ್ಗೆ ಮಾತನಾಡಲ್ಲ. ಲಿಂಬಾವಳಿ ವಿಚಾರ ನನಗೆ ಗೊತ್ತಿಲ್ಲ. ನೋ ಪಾಲಿಟಿಕ್ಸ್ ಎಂದಷ್ಟೇ ಹೇಳಿದ್ದಾರೆ. 

ಕ್ಷೇತ್ರಕ್ಕೆ ಅನುದಾನ ನೀಡುವ ವಿಚಾರದ ಬಗ್ಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ನೂರು ಕೋಟಿ‌ ಅನುದಾನ ನೀಡಬೇಕು. ಇದರಿಂದ ಕ್ಷೇತ್ರ ಕೂಡ ಅಭಿವೃದ್ಧಿ ಆಗುತ್ತೆ. ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿ ಹೇಳುತ್ತೇನೆ ಅಂತ ಡಿಸಿಎಂ ಹೇಳಿದ್ದಾರೆ ಎಂದು ಹೇಳಿದ್ದಾರೆ.