ಲವ್ ಜಿಹಾದ್ ಆಯ್ತು ಈಗ ಲ್ಯಾಂಡ್‌ ಜಿಹಾದ್, ಭಾರತವೇನು ಬಿಟ್ಟಿ ಬಿದ್ದಿದೆಯೇ? ಜಮೀರ್ ವಿರುದ್ಧ ಬಿಜೆಪಿ ಶಾಸಕ ಕಿಡಿ

ರೈತರ, ಸರ್ಕಾರಿ ಜಮೀನು, ಸಾಮಾನ್ಯ ಜನರ ಆಸ್ತಿಗಳನ್ನು  ವಕ್ಫ್ ಬೋರ್ಡ್ ಗೆ ಸೇರಿಸಿ ಕೊಳ್ಳಲಾಗುತ್ತದೆ. ಕೈಲಾಗದ ಕಾಂಗ್ರೆಸ್ ಸರ್ಕಾರ ಈ ಕೃತ್ಯಕ್ಕೆ ಹೆಚ್ಚು ಶಕ್ತಿ ನೀಡಿದೆ  ಎಂದು ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ರಾಜ್ಯಸರ್ಕಾರದ ವಾಗ್ದಾಳಿ ನಡೆಸಿದರು.

BJP MLA Channabasappa outraged against zameer ahmed khan about waqf property dispute rav

ಶಿವಮೊಗ್ಗ (ನ.2): ರೈತರ, ಸರ್ಕಾರಿ ಜಮೀನು, ಸಾಮಾನ್ಯ ಜನರ ಆಸ್ತಿಗಳನ್ನು  ವಕ್ಫ್ ಬೋರ್ಡ್ ಗೆ ಸೇರಿಸಿ ಕೊಳ್ಳಲಾಗುತ್ತದೆ. ಕೈಲಾಗದ ಕಾಂಗ್ರೆಸ್ ಸರ್ಕಾರ ಈ ಕೃತ್ಯಕ್ಕೆ ಹೆಚ್ಚು ಶಕ್ತಿ ನೀಡಿದೆ  ಎಂದು ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಚನ್ನಬಸಪ್ಪ ರಾಜ್ಯಸರ್ಕಾರದ ವಾಗ್ದಾಳಿ ನಡೆಸಿದರು.

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ವಕ್ಫ್ ನೋಟಿಸ್ ನೀಡುತ್ತಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಕಾರ್ಯ ಮಾಡುತ್ತಿದೆ. ಲವ್ ಜಿಹಾದ್ ನಂತರ ಲ್ಯಾಂಡ್ ಜಿಹಾದ್ ಶುರುವಾಗಿದೆ. ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ವಕ್ಫ್ ಗೆ ಶಕ್ತಿ ಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಲ್ಯಾಂಡ್ ಜಿಹಾದ್ ಗೆ ವಕ್ಫ್ ಮಂಡಳಿ ಕೈ ಹಾಕಿದೆ. ವಕ್ಫ್ ಬೋರ್ಡ್ ಗೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಕೈಹಾಕಿದ್ದಾರೆ. ತಲಾಕ್ ತಲಾಕ್ ತಲಾಕ್ ಎಂದು ಮದುವೆಯಾದ ಹೆಣ್ಣನ್ನು ಕೈ ಬಿಡುತ್ತಿದ್ದರು.  ಈಗ  ವಕ್ಫ್ ಎಂದು ಆಸ್ತಿಯನ್ನು ಕಬಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ತಯಾರಾದ ಉತ್ಪನ್ನಕ್ಕೆ ಕನ್ನಡ ಹೆಸರು: ಸಿಎಂ ಸಿದ್ದರಾಮಯ್ಯ

ಭಾರತ ಬಿಟ್ಟಿಬಿದ್ದಿಲ್ಲ:

ಕಂಡ ಕಂಡವರ ಭೂಮಿ ತಮ್ಮದೆನ್ನಲು ಭಾರತ ಬಿಟ್ಟಿ ಬಿದ್ದಿಲ್ಲ. 1850 ರಿಂದ ಈ ರೀತಿ ನಡೆಯುತ್ತಿದೆ. ವಕ್ಫ್ ಲ್ಯಾಂಡ್ ಜಿಹಾದ್ ಗೆ ಹಿಂದೂ ಸಮಾಜ ತುಂಡಾಗಲಿದೆ. ದೇವಸ್ಥಾನಗಳೇ  ಇಂದು ವಕ್ಫ್ ಆಸ್ತಿಯಾಗಿದೆ. ಅಲ್ಲಾ ಬಗ್ಗೆ ನಿನಗೆ ಪ್ರೀತಿ ಇದ್ದರೆ ನಿನ್ನ  ಬಂಗಲೆಯನ್ನು ಬರೆದುಕೊಡು ಎಂದು ಸಚಿವ ಜಮೀರ್ ಗೆ ಹೇಳಿದೆ. ಜಮೀರ್ ಅಂಥವರನ್ನು ಹುಡುಕಿ ಹುಡುಕಿ ಹೊಡೆಯುವ ಕೆಲಸ ಪ್ರಾರಂಭ ಆಗುತ್ತೆ. ಓಡಾಡಿಸಿ ಹೊಡಿಯೋ ಕೆಲಸ ಪ್ರಾರಂಭ ಆಗುತ್ತೆ ಎಂಬ ಎಚ್ಚರಿಕೆ ಸಂದೇಶ ನೀಡಿದರು.

ಬಡವನ ಆಸ್ತಿಯನ್ನು ವಕ್ಫ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ. ಇದೇ ರೀತಿ ನೀವು ಮುಂದುವರಿದರೆ ಬಡವನ ಸಿಟ್ಟು ರಟ್ಟೆಗೆ ಬರುತ್ತದೆ ಎಂಬ ಎಚ್ಚರಿಕೆ  ನೀಡುತ್ತೇನೆ.  ಶಿವಮೊಗ್ಗ ಜಿಲ್ಲೆಯ 44 ಎಕರೆ 20 ಗುಂಟೆ ಜಮೀನು ಸೇರಿದೆ ಎನ್ನಲಾಗಿದೆ. ಶಿವಮೊಗ್ಗದ ಡಿಸಿ ಕಚೇರಿಯ ಎದುರು ಈದ್ಗಾ  ಮೈದಾನವಿದೆ ಅದು ನಗರಸಭೆ ಆಸ್ತಿ ಆದರೆ ವಕ್ಫ್ ಬೋರ್ಡ್ ನಮ್ಮದು ಎಂದು ಹೊರಟಿದ್ದರು. ಮಂಡ್ಲಿ ಯಲ್ಲಿ ಶಿವಪ್ಪ ನಾಯಕ ವಂಶಸ್ಥರ ಸಮಾಧಿ ಇದೆ ಅದು ಕೂಡ ನಮ್ಮದೆಂದು ಹೇಳಿದರು. ಆಯಕಟ್ಟಿನ ಪ್ರದೇಶದ ಎಕರೆಗಟ್ಟಲೆ ಜಾಗವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ. ವಿನಾಯಕ ಟಾಕೀಸ್ ಪಕ್ಕದ ಜಾಗ ನಗರಸಭೆ ಆಸ್ತಿ ಎಂದು ಇವತ್ತಿಗೂ ನಮಗೆ ವಾಣಿಜ್ಯ ಸಂಕೀರ್ಣ ಕಟ್ಟಲು ಆಗಲಿಲ್ಲ.

ಮೋದಿಯನ್ನ ಟೀಕಿಸೋದು ಆಕಾಶಕ್ಕೆ ಉಗಿದಂತೆ, ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ

ಇದೇ ರೀತಿ ಮನಸ್ಥಿತಿ ಮುಂದುವರೆಸಿಕೊಂಡು ಹೋಗುವುದಾದರೆ ಜಮೀರ್ ಅಹ್ಮದ್ ನೀವು ಶಿವಮೊಗ್ಗಕ್ಕೆ ಬರುವ ಧೈರ್ಯ ಮಾಡಬೇಡಿ. ನೀವು ಬಂದರೆ ಶಿವಮೊಗ್ಗದ ಆಸ್ತಿಗಳನ್ನು ವಕ್ಫ್  ಬೋರ್ಡ್ ಗೆ ಸೇರಿದ್ದು ಎಂದು ಬರೆದು ಹೋಗುತ್ತೀರಾ? ಈ ಕಾಂಗ್ರೆಸ್ ನವರನ್ನು ಭಗವಂತ ಕ್ಷಮಿಸುವುದಿಲ್ಲ. ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ದೇಗುಲಗಳಿಗೆ ಕೊಡಲು ಹಣ ಇಲ್ಲ ಎನ್ನುತ್ತಾರೆ. ವಕ್ಫ್ ಆಸ್ತಿಗಳಿಗೆ ಬೇಲಿ ಹಾಕಲು  31 ಕೋಟಿ 84 ಲಕ್ಷ 56 ಸಾವಿರ ರೂ. ಹಣ ಬಿಡುಗಡೆ ಮಾಡಿದ್ದೀರಾ?  ಹಿಂದೂಗಳು ಎಂದರೆ ಏನು ಬೇಕಾದರೂ ಮಾಡಿಕೊಂಡು ಹೋಗಬಹುದು ಅಂತನಾ? ಈ ರಾಜ್ಯಕ್ಕೆ ಬೆಂಕಿ ಹೆಚ್ಚು ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ರೆ ಈ ಜಮೀರ್ ಗೆ ಯಾರಾದರೂ ಬೆಂಕಿ ಹಚ್ಚುತ್ತಾರೆ ಎಂದು ಎಚ್ಚರಿಸಿದರು.

Latest Videos
Follow Us:
Download App:
  • android
  • ios