ಮೋದಿಯನ್ನ ಟೀಕಿಸೋದು ಆಕಾಶಕ್ಕೆ ಉಗಿದಂತೆ, ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಆಕಾಶಕ್ಕೆ ಉಗಿದರೆ ಅದು ಆಕಾಶ ಮುಟ್ಟೊಲ್ಲ, ಸೂರ್ಯನಿಗೆ ತಟೊಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು (ನ.2): ಆಕಾಶಕ್ಕೆ ಉಗಿದರೆ ಅದು ಆಕಾಶ ಮುಟ್ಟೊಲ್ಲ, ಸೂರ್ಯನಿಗೆ ತಟೊಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರಿಂದ ಪ್ರಧಾನಿ ಮೋದಿ ವಿರುದ್ಧ ಟೀಕೆ ವಿಚಾರ ಸಂಬಂಧ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತೆ. ಅದು ನಿಮ್ಮ ಮುಖಕ್ಕೆ ಮೆತ್ತಿಕೊಳ್ಳೋದು, ನೀವೇ ಮುಖ ತೊಳೆದುಕೊಳ್ಳಬೇಕು ಹರಿಹಾಯ್ದರು.
ಸಿದ್ದರಾಮಯ್ಯ ಮೋದಿಯನ್ನು ಬೈದರೆ ದೊಡ್ಡವರಾಗಬಹುದು ಎಂದು ಭಾವಿಸಿದ್ದಾರೆ. ಸಿದ್ದರಾಮಯ್ಯ ಮೋದಿಗೆ ಚಾಲೆಂಜ್ ಕೂಡ ಮಾಡಿದ್ದಾರೆ. 2014, 2019, 2024 ರಲ್ಲಿ ಚಾಲೆಂಜ್ ಮಾಡಿದ್ರಿ, ನಿಮ್ಮ ನಾಯಕತ್ವಕ್ಕೆ ಜನ ಮತ ನೀಡ್ಲಿಲ್ಲ. ಮೂರು ಬಾರಿ ಪ್ರಧಾನಿಯಾಗಿರುವ ಮೋದಿ ಬೆನ್ನಿಗೆ ದೇಶದ ಜನ ಇದ್ದಾರೆ.
ಹರ್ಯಾಣ ಚುನಾವಣೆ 2024: ಕೇಂದ್ರ ಚುನಾವಣಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಗರಂ
ಮೋದಿ ವಿರುದ್ಧ ಸಿಎಂ ವಾಗ್ದಾಳಿ:
ಕನ್ನಡ ರಾಜ್ಯೋತ್ಸವ ದಿನದಂದು ಪ್ರಧಾನಿ ಮೋದಿ ವಿರುದ್ಧ ತೆರಿಗೆ ವಿಚಾರದಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿರುದ್ಧ ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದರು.