ಸುಮ್ಮನಿದ್ದ ಅನಂತ್ ಕುಮಾರ್ ಹೆಗಡೆ ಮತ್ತೆ ಗುಡುಗಿದಾಗ..| 'ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮೋದಿ ಪ್ರಧಾನಿ ಮಾಡಿ'| ಬಾಗಲಕೋಟೆಯಲ್ಲಿ ಮತ್ತೆ ರಕ್ತದ ಮಾತನಾಡಿದ ಬಿಜೆಪಿ ನಾಯಕ| ಮೋದಿ ಪ್ರಧಾನಿಯಾಗಲಿ ಎಂಬುದು ಜಗತ್ತಿನ ಬಯಕೆ ಎಂದ ಹೆಗಡೆ| ಅಟಲ್ ಬಿಹಾರಿ ವಾಜಪೇಯಿ ನೆನೆದ ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕ

ಬಾಗಲಕೋಟೆ(ಡಿ.25): ಕಳೆದ ಕೆಲವು ದಿನಗಳಿಂದ ಸುಮ್ಮನಿದ್ದ ಕೇಂದ್ರ ಸಚಿವ, ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕ ಅನಂತ್ ಕುಮಾರ್ ಹೆಗಡೆ, ಇದೀಗ ಮತ್ತೆ ಗುಡುಗಲು ಶುರು ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶತಮಾನಗಳ ಕಾಲ ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕೆಂದು ಅನಂತ್ ಕುಮಾರ್ ಹೆಗಡೆ ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ್ದಾರೆ.

ನಗರದ ಬಸವೇಶ್ವರ ಮಿನಿ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು.

ಈ ದೇಶದ ಸಂಸ್ಕೃತಿ ಬೇರುಗಳು ಗಟ್ಟಿಯಾಗಬೇಕು, ಈ ದೇಶದ ಮಣ್ಣಿಗೆ ಗೌರವ ಕೊಡುವ ಸರ್ಕಾರ ಬರಬೇಕು.ಮೋದಿ ಮತ್ತೊಮ್ಮೆ ಪ್ರದಾನಮಂತ್ರಿ ಆಗಬೇಕೇನ್ನುವದು ಇಡೀ ಜಗತ್ತೀನ ಅಪೇಕ್ಷೆ. ಅದು ನಮಗಿಂತಲೂ ಜಗತ್ತಿಗೆ ಬೇಕಾಗಿದೆ ಎಂದು ಹೆಗಡೆ ಹೇಳಿದರು.

"

ನಮ್ಮ ದೇಶದಲ್ಲಿ ನಮಗೆ ಬೇಕಾದಂತ ಸರ್ಕಾರ ರಚನೆಯಾಗಬೇಕು. ವಿರೋಧ ಪಕ್ಷ ,-ಆಡಳಿತ ಪಕ್ಷ ಇರೋದು ಸಹಜ. ಈ ದೇಶದಲ್ಲಿ ಕೆಲವೇ ಕೆಲವು ಮಹಿನೀಯರನ್ನು ನೆನಪಿಸಿಕೊಳ್ಳಬೇಕು.ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿ ನಮ್ಮ ಸಿದ್ದಾಂತ ಗೌರವಿಸಿದ ಮಹಿನೀಯರನ್ನು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ಸೇತರ ಮಹಿನೀಯರನ್ನು ನೆನಪಿಸಿಕೊಳ್ಳಬೇಕು ಎಂದು ಹೆಗಡೆ ನುಡಿದಿದ್ದಾರೆ.

ಅಟಲ್ ದೇಶ ಕಂಡ ಮಹಾನ್ ನಾಯಕ. ದೇಶಕ್ಕಾಗಿ ಸ್ವಂತ ಬದುಕಿಗೆ ಮಿಡಿಯದೇ ದುಡಿದವರು ಅವರು. ಅವರಿಗೆ ಕಪಟ, ಕಲ್ಮಶ ಇರಲಿಲ್ಲ.ಬಾಲ್ಯದಲ್ಲಿರೋ ಮಗುವಿನಂತೆ ವಾಜಪೇಯಿ ಇದ್ದರು ಎಂದು ಹೆಗಡೆ ತಮ್ಮ ನಾಯಕನನ್ನು ನೆನೆದರು.

ಟಿಪ್ಪು ಜಯಂತಿ ಆಮಂತ್ರ​ಣ​ದಲ್ಲಿ ನನ್ನ ಹೆಸರು ಬೇಡ: ಅನಂತ್‌ ಹೆಗ​ಡೆ

ನೆಹರು ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ

ರಾಹುಲ್ ಗಾಂಧಿ ಅಪ್ರಬುದ್ಧತೆಯ ಪ್ರತೀಕ : ಅನಂತ್ ಕುಮಾರ್ ಹೆಗಡೆ