Tumakuru | ದೇಶದ ಶಕ್ತಿ 400 ಸೀಟ್ ಇರುವ ಬಿಜೆಪಿ ಸರ್ಕಾರವನ್ನು ಯೂಟರ್ನ್ ಮಾಡಿದೆ -DKS
- ತುಮಕೂರಿನ ಗಾಜಿನ ಮನೆಯಲ್ಲಿಂದು ನಡೆದ ಕಾಂಗ್ರೆಸ್ ಜನ ಜಾಗೃತಿ ಸಮಾವೇಶ
- ಕಾಂಗ್ರೆಸ್ ಜನಜಾಗೃತಿ ಸಮಾವೇಶ ನಡೆಯುತ್ತಿರುವುದು ಒಂದು ಶುಭ ದಿನ. ಇದು ಐತಿಹಾಸಿಕ ದಿನ - ಡಿಕೆಶಿ
ತುಮಕೂರು (ನ.21): ಕಾಂಗ್ರೆಸ್ (Congress) ಜನಜಾಗೃತಿ ಸಮಾವೇಶ ನಡೆಯುತ್ತಿರುವುದು ಒಂದು ಶುಭ ದಿನ. ಇದು ಐತಿಹಾಸಿಕ ದಿನ. ನಾವೆಲ್ಲ ಕಾಂಗ್ರೆಸಿಗರು ತ್ರಿವರ್ಣ ಧ್ವಜದ (flag) ಹಕ್ಕುದಾರರು. ನಿಮಗೆ ದೊಡ್ಡ ಸವಾಲು, ನಿಮ್ಮ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆ ಎಂದು ತುಮಕೂರಿನ (Tumakur) ಗಾಜಿನ ಮನೆಯಲ್ಲಿಂದು ನಡೆದ ಕಾಂಗ್ರೆಸ್ ಜನ ಜಾಗೃತಿ ಸಮಾವೇಶದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಕೃಷಿ ಕಾಯ್ದೆ ದೇಶದಲ್ಲಿ ರದ್ದು ಮಾಡುವ ಆದೇಶವನ್ನು ಪ್ರಧಾನಿ ನರೇಂದ್ರ ಮೋದಿ (Prime minister Narendra modi) ಹೊರಡಿಸಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ರಾಜ್ಯದ ವಿವಿಧೆಡೆ ಜನಜಾಗೃತಿ ಸಮಾವೇಶ ನಡೆಸುತ್ತಿದೆ.
ದೇಶದ ಜನರ ಶಕ್ತಿ, ರೈತರ (farmers) ಶಕ್ತಿ , 400 ಸೀಟ್ ಇರುವ ಬಿಜೆಪಿ (BJP) ಸರ್ಕಾರವನ್ನು ಯೂಟರ್ನ್ ಮಾಡಿದೆ. ಈ ದೇಶದ ಯುವಕ, ಮಹಿಳೆ, ಕಾರ್ಯಕರ್ತರ ಮೇಲೆ ನಂಬಿಕೆಯಿದೆ. ಇವರೆಲ್ಲಾ ಹೋರಾಟ ಪ್ರಾರಂಭ ಮಾಡಿದರೆ ಯಾವ ಸರ್ಕಾರಕ್ಕೂ ತಡೆದುಕೊಳ್ಳುವ ಶಕ್ತಿಯಿಲ್ಲ. ರೈತರ ಹೋರಾಟ ಲಕ್ಷಾಂತರ ಜನ ರೈತರು ಬೀದಿಗಳಿದು ಸತ್ಯಾಗ್ರಹ ಮಾಡಿ ಹೋರಾಟ ಮಾಡಿದ್ದಾರೆ. ಎಲ್ಲಾ ರೈತರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಡಿಕೆಶಿ ಹೇಳಿದರು.
ರೈತರ ವ್ಯಾಪಾರ ವಹಿವಾಟನ್ನು ಡಬ್ಬಲ್ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಈವರೆಗೂ ಯಾವುದೂ ಡಬ್ಬಲ್ ಆಗಿಲ್ಲ. 352 ರೂಪಾಯಿ ಗ್ಯಾಸ್ (Gas) ಕಾಂಗ್ರೆಸ್ ಅಧಿಕಾರ ನಡೆಸುವಾಗ ಇತ್ತು. ಅದೀಗ ಸಾವಿರ ಮುಟ್ಟಿದೆ. ದಿನಾಲೂ ಈಗ ಪಿಕ್ ಪಾಕೇಟ್ ನಡೆಯುತ್ತಿದೆ. ನಿಮ್ಮ ಪಿಕ್ ಪಾಕೇಟ್ ಮಾಡಲಾಗುತ್ತಿದೆ ಎಂದರು. ಬೈ ಎಲೆಕ್ಷನ್ (By Election) ರಿಸಲ್ಟ್ ಬಂದ ರಾತ್ರಿಗೆ ತೈಲ ಬೆಲೆ ಕಡಿಮೆ ಆಯ್ತು. ನಮ್ಮ ಹೋರಾಟ ನಿಲ್ಲಲು ಸಾಧ್ಯವಿಲ್ಲ. ವಿಧಾನ ಸೌಧದಲ್ಲಿ ಹೊರಗೆ, ಒಳಗೆ ಪ್ರತಿಭಟನೆ ಮಾಡಿದ್ದೇವೆ. ಕೊರೋನಾ (Corona) ಕಾಲದಲ್ಲಿ ಉಂಟಾದ ನಷ್ಟಕ್ಕೆ ಪರಿಹಾರ ನೀಡಲಿಲ್ಲ. 15 ಲಕ್ಷ ರೂಪಾಯಿ ಏನಾದರೂ ಅಕೌಂಟ್ ಗೆ ಬಂತಾ ಎಂದು ಪ್ರಶ್ನೆ ಮಾಡಿದರು.
20 ಲಕ್ಷ ಕೋಟಿ ಹಣ ಅನೌನ್ಸ್ ಮಾಡಿದ್ದರು. ಯಾರಿಗೂ ಹಣ ಸಿಗಲಿಲ್ಲ, ಕೊರೋನಾ ಕಾಲದ ಭ್ರಷ್ಟಚಾರನ್ನು ಜನರು ಅರಿತಿದ್ದಾರೆ. ಇದು ಅತಿದೊಡ್ಡ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಕಾಲದಲ್ಲಿ ಮಾಡಿದ ಕಾರ್ಖಾನೆಗಳನ್ನು ಬಿಜೆಪಿ ಮಾರುತ್ತಿದೆ. ರೈಲು (Train), ವಿಮಾನಗಳನ್ನು ಮಾರಾಟ ಮಾಡುತ್ತಿದ್ದಾರೆ. ಖಾಸಗೀಕರಣಕ್ಕೆ ಕಾಂಗ್ರೆಸ್ ವಿರೋಧ ಮಾಡಿತ್ತು. ಸರ್ಕಾರಿಕರಣ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಸೋಲುವ ಭಯ ಬಿಜೆಪಿಗೆ (BJP) ಬಂದಿದೆ . ಈ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ರಾಹುಲ್ ಗಾಂಧಿ ಹೇಳಿದ್ದರು ಈಗ ಸೋಲುವ ಭಯದಿಂದ ಘೋಷಣೆ ಮಾಡಿದ್ದಾರೆ.
ಕೃಷಿ ಕಾಯ್ದೆ ರದ್ದತಿಗಾಗಿ 700 ಜನ ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರೆಲ್ಲಾ ಈ ದೇಶದ ಹುತಾತ್ಮರು ಎಂದು ಘೋಷಣೆ ಮಾಡಬೇಕು. ಸತ್ತವರಿಗೆ 5 ಎಕರೆ ಜಮೀನು (farm Land) ಕೊಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಬೆಲೆ ಹೆಚ್ಚಳ ತಡೆಗಟ್ಟಲು ಕಾಂಗ್ರೆಸ್ ಬೆನ್ನಿಗೆ ನೀವು ನಿಲ್ಲಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗ ಅಧಿಕಾರಕ್ಕೆ ಬಂದಂತೆ. ನಿನ್ನೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದೆ. ಜನಜಾಗೃತಿ ಸಮಾವೇಶ ಹೇಗೆ ನಡೆಯುತ್ತಿದೆ ಎಂದು ಕೇಳಿದ್ದರು. ಅವರಿಗೆ ಈ ಬಗ್ಗೆ ವಿವರಣೆ ನೀಡಿದ್ದೇನೆ ಎಂದರು.
ಹೆಣದ ಮೇಲೆ, ಔಷಧಿ ಮೇಲೆ ಲಂಚ ವಸೂಲಿ ಮಾಡಿದ ಭ್ರಷ್ಟ ಸರ್ಕಾರ ಇದು. ಮಳೆ ಹಾನಿ ಬಗ್ಗೆ ಸದ್ಯದಲ್ಲೇ ಸರ್ಕಾರವನ್ನು ಭೇಟಿ ಮಾಡುತ್ತೇವೆ ಪರಿಹಾರದ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದು ತುಮಕೂರಿನಲ್ಲಿ ಡಿಕೆ ಶಿವಕುಮಾರ್ ಹೇಳಿದರು.
ಇತಿಹಾಸ ಚರಿತೆಯನ್ನು ಬಿಜೆಪಿ ಮುಖಂಡರು ಓದಿಕೊಳ್ಳಲಿ : ದೇಶದಲ್ಲಿ ಕೃಷಿ ಕಾಯ್ದೆ ರದ್ದು ಮಾಡುವ ಆದೇಶ ಹೊರಡಿಸಿದ್ದು, ಇದಕ್ಕಾಗಿ ಕಳೆದ ಒಂದು ವರ್ಷದಿಂದ ಹೋರಾಟ ಮಾಡಿ ಪ್ರಾಣಾರ್ಪಣೆ ಮಾಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೈ ಮುಖಂಡ ಪರಮೇಶ್ವರ್ ಹೇಳಿದರು. ರೈತರ ಹೋರಾಟದಲ್ಲಿ ಪ್ರಾಣ ಅರ್ಪಣೆ ಮಾಡಿದವರಿಗೆ ಶಾಂತಿ ಕೋರಿದ ಮಾಜಿ ಡಿಸಿಎಂ ಪರಮೇಶ್ವರ್ (Dr G parameshwar) ಸೋನಿಯಾ ಗಾಂಧಿ (Sonia Gandhi) ಜನಜಾಗೃತಿ ಸಮಾವೇಶ ಮಾಡುವ ಆದೇಶ ನೀಡಿದ್ದಾರೆ. ದೇಶಾದ್ಯಂತ ಸಮಾವೇಶ ಮಾಡಲಾಗುವುದು ಎಂದರು.
ರೈತರ ಹೋರಾಟದಲ್ಲಿ 700 ಜನರು ಪಾಣ ಅರ್ಪಣೆ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೊರುತ್ತೇನೆ, ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಕಾಂಗ್ರೆಸ್ ಪಕ್ಷವನ್ನು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಕೀಳು ಮಟ್ಟದ ಪದ ಬಳಸಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ಏನು ಮಾಡಲಿಲ್ಲ ಎಂದು ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿಗಳು, ಅವರ ಸಂಪುಟ ಮುಖ್ಯಸ್ಥರು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನು ಮಾಡಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಇತಿಹಾಸ ಚರಿತೆಯನ್ನು ಬಿಜೆಪಿ ಮುಖಂಡರು ಓದಿಕೊಳ್ಳಲಿ ಎಂದು ಪರಮೇಶ್ವರ್ ಹೇಳಿದರು.
ದೇಶಕ್ಕೆ ಕಾಂಗ್ರೆಸ್ ಪಕ್ಷ ಸ್ವತಂತ್ರ ತಂದು ಕೊಟ್ಟಿದೆ. ಸ್ವಾತಂತ್ರ ಹೋರಾಟದಲ್ಲಿ ಎಲ್ಲಿದ್ದಿರಿ. ಸ್ವಾತಂತ್ರ ಬಂದಾಗಿನಿಂದ ಇಲ್ಲಿವರೆಗೂ ಕಾಂಗ್ರೆಸ್ 54 ವರ್ಷ ಆಢಳಿತ ಮಾಡುತ್ತಿದೆ. ಭವ್ಯ ಭಾರತ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಭಾಕ್ರನಾಂಗಲ್, ಎಚ್.ಎ.ಎಲ್, ಡಿಆರ್ಡಿಒ,ಎಚ್.ಎಂ.ಟಿ ಇಸ್ರೋ ವನ್ನು ನೀವು ಕಟ್ಟಿದ್ದಿರಾ..? ದೇಶದಲ್ಲಿ ಹಸಿರು ಕ್ರಾಂತಿ ನಿಮ್ಮಿಂದ ಆಯ್ತಾ ? ನಾವು ಮಾಡಿದ ಸಾಧನೆ ಮೇಲೆ ನೀವು ನಿಂತಿದ್ದೀರಾ. ಭಾರತ ಸಾಧನೆ ಮಾಡಿದೆ ಎಂದು ಪ್ರಧಾನಿ ಹೊರ ದೇಶದಲ್ಲಿ ಹೋಗಿ ಹೇಳುತ್ತಾರೆ. ಈ ಸಾಧನೆಯನ್ನು ಹೇಳಿಕೊಳ್ಳಲು ಅಡಿಪಾಯ ಹಾಕಿಕೊಟ್ಟವರು ಯಾರು ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಅಸಮಾಧಾನ ಹೊರಹಾಕಿದರು.
ನಿಮಗೆ ಜ್ಞಾನ, ಪರಿಜ್ಞಾನ ಇದೆಯಾ. ಈ ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ಮಾಜಿ ಡಿಸಿಎಂ ಕೋಮು ವಾದಿ ಪಕ್ಷ ನಿಮ್ಮದು. ಕಾಂಗ್ರೆಸ್ ಪಕ್ಷದವರು ದೇಶದ ಮನೆ ಮನೆಗೆ ಹೋಗಿ ನಮ್ಮ ಸಾಧನೆ ಹೇಳಬೇಕು. ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ನನಗೆ ವಿಶ್ವಾಸ ವಿದೆ 10 ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ (Siddaramaiah) ನಮಗೆ ಎರಡು ಕಣ್ಣುಗಳಿದ್ದಂತೆ. ತುಮಕೂರಿನಿಂದ ಕಾರ್ಯಕ್ರಮ ಶುರು ಮಾಡಿರುವುದು ಶುಭ ಸೂಚನೆಯಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಪ್ರಥಮ ಕಾರ್ಯಕ್ರಮ ಮಾಡುತ್ತವೆಯೋ ಆಗ ಕಾಂಗ್ರೆಸ್ ಅಧಿಕಾರ ಹಿಡಿದಿದೆ ಎಂದು ಅಧಿಕಾರಕ್ಕೇರುವ ಭವಿಷ್ಯವನ್ನು ನುಡಿದರು.
ಸಮಾವೇಶ ವೇದಿಕೆ ಮೇಲೆ ಒಂದೇಡೆ ರೈತರು: ತುಮಕೂರಿನಲ್ಲಿ ಕಾಂಗ್ರೆಸ್ ಜನಜಾಗೃತಿ ಅಭಿಯಾನ ಸಮಾವೇಶದ ವೇದಿಕೆ ಮೇಲೆ ಒಂದೇಡೆ ರೈತರು, ಮತ್ತೊಂದು ಕಡೆ ಮಹಿಳೆಯರು ಇರುವುದು ಕಂಡು ಬಂತು. ವೇದಿಕೆಯ ಬಲಭಾಗದಲ್ಲಿ ಸಿಲಿಂಡರ್ ಪೋಸ್ಟ್ ಹಿಡಿದು ನಿಂತಿರುವ ಮಹಿಳೆಯರು ಕಂಡು ಬಂದರು. ಅವರ ಕೈಯಲ್ಲಿ 2014 ರಲ್ಲಿ 400 ರೂ ಇಂದು 952 ರೂ ಅಂತಾ ಪೋಸ್ಟ್ ಕೊಡಲಾಗಿತ್ತು. ಎಡಭಾಗದಲ್ಲಿ ರೈತರು, ರೈತರ ಹೋರಾಟಕ್ಕೆ ಕೊನೆಗೂ ಜಯ ಅಂತಾ ಬ್ಯಾನರ್ ಹಿಡಿದು ನಿಂತಿದ್ದು ಕಂಡು ಬಂತು.