Asianet Suvarna News Asianet Suvarna News

Mysuru ತಮ್ಮದೇ ಗೆಲುವಿನ ವಿಶ್ವಾಸದಲ್ಲಿ ಬಿಜೆಪಿ : ಯಾವುದು ಪ್ಲಸ್ ಪಾಯಿಂಟ್..?

  • ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಉಭಯ ಜಿಲ್ಲೆಗಳಲ್ಲಿ ಮತದಾರರೊಂದಿಗೆ ಉತ್ತಮ ಬಾಂಧವ್ಯ 
  • ತಾವು ಹೊಂದಿರುವ ಬಾಂಧವ್ಯ ಈ ಬಾರಿ ತಮ್ಮ ಗೆಲುವಿಗೆ ಪೂರಕವಾಗಲಿದೆ
  • ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌. ರಘು ಕೌಟಿಲ್ಯ ವಿಶ್ವಾಸ 
BJP candidate Raghu have confidence For Winning MLC Election in Mysuru snr
Author
Bengaluru, First Published Nov 21, 2021, 1:15 PM IST

ವರದಿ :  ಅಂಶಿ ಪ್ರಸನ್ನಕುಮಾರ್‌

ಮೈಸೂರು (ನ.21):  ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಉಭಯ ಜಿಲ್ಲೆಗಳಲ್ಲಿ ಮತದಾರರೊಂದಿಗೆ (voters) ತಾವು ಹೊಂದಿರುವ ಬಾಂಧವ್ಯ ಈ ಬಾರಿ ತಮ್ಮ ಗೆಲುವಿಗೆ ಪೂರಕವಾಗಲಿದೆ ಎಂದು ಮೈಸೂರು - ಚಾಮರಾಜನಗರ (mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ (Election) ಬಿಜೆಪಿ (BJP) ಅಭ್ಯರ್ಥಿಯಾಗಿರುವ ಆರ್‌. ರಘು ಕೌಟಿಲ್ಯ (R Raghu koutilya) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದಲ್ಲಿ (Chamarajanagar) ಶನಿವಾರ ನಡೆದ ಜನ ಸ್ವರಾಜ್‌ ಯಾತ್ರೆಯಲ್ಲಿ ಪಾಲ್ಗೊಂಡ ನಂತರ  ಅವರು, ಕಳೆದ ಬಾರಿ ಸೋತ ಅನುಕಂಪ ಕೂಡ ಇದೆ. ಅಲ್ಲದೇ ರಾಜ್ಯದಲ್ಲಿಯೇ ನಮ್ಮ ಪಕ್ಷದ ಸರ್ಕಾರವೇ ಇರುವುದು ಕೂಡ ಪ್ಲಸ್‌ ಪಾಯಿಂಟ್‌ ಆಗಲಿದೆ ಎಂದರು.

ಕಳೆದೊಂದು ವರ್ಷದಿಂದ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಈಗಾಗಲೇ 383 ಪಂಚಾಯ್ತಿಗಳಿಗೂ ಭೇಟಿ ನೀಡಿ ಸುಮಾರು 4500- 5000 ಸದಸ್ಯರನ್ನು ಭೇಟಿ ಮಾಡಿ, ಒಂದು ಸುತ್ತು ಪ್ರಚಾರ ಮುಗಿಸಿದ್ದೇನೆ. ತಾವು ಆಯ್ಕೆಯಾದರೆ ಸ್ಥಳೀಯ ಸಂಸ್ಥೆಗಳ (Local bodies) ಸದಸ್ಯರು ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗುವೆ. ಗ್ರಾಮೀಣಾಭಿವೃದ್ಧಿಗಾಗಿ ಮೇಲ್ಮನೆಯಲ್ಲಿ ಜನರ ದನಿಯಾಗುವೆ ಎಂದರು .

ನಾನು ಮೈಸೂರಿನ (Mysuru) ಮಗ, ಚಾಮರಾಜನಗರದ ಅಳಿಯ. ಬಾಲ್ಯದಿಂದಲೂ ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಸಂಘ, ಸಂಸ್ಥೆಗಳನ್ನು ಕಟ್ಟಿದ್ದೇನೆ. ಶಿಕ್ಷಣ (Education) ಸಂಸ್ಥೆಯನ್ನು ಕಟ್ಟಿಬೆಳೆಸಿದ್ದೇನೆ. ಇದೆಲ್ಲವನ್ನೂ ಜನತೆ ಗಮನಿಸಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಈ ಬಾರಿ ನನ್ನ ಕೈ ಹಿಡಿದು ಗೆಲುವಿನ ದಡ ಸೇರಿಸುತ್ತಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ (Prime Minister narendra modi) ಅವರು ಸ್ವಾವಲಂಬಿ ಭಾರತ (India) ನಿರ್ಮಾಣದ ಕನಸು ಕಂಡಿದ್ದಾರೆ. ಸ್ಥಳೀಯ ಸಂಸ್ಥೆಗಳು ಪ್ರಜಾಪ್ರಭುತ್ವದ ಅಡಿಪಾಯ. ಕೆಳಹಂತದ ಸರ್ಕಾರ ಎನಿಸಿಕೊಂಡಿರುವ ಗ್ರಾಮ ಪಂಚಾಯ್ತಿಗಳು ಕೇವಲ ಮೂಲಭೂತ ಸೌಕರ್ಯ ಒದಗಿಸಲು ಸೀಮಿತವಾಗಬಾರದು. ಅಭಿವೃದ್ಧಿ ವಿಕೇಂದ್ರೀಕರಣ ಕೂಡ ಆಗಬೇಕು. ನನ್ನ ಊರು- ನನ್ನ ಉದ್ಯೋಗ ಯೋಜನೆ ರೂಪಿಸಿ, ಉದ್ಯೋಗ ಸೃಷ್ಟಿಸುವ ಚಟುವಟಿಕೆಗಳು ನಡೆಯಬೇಕು.

ಗ್ರಾಪಂ ಸದಸ್ಯರಿಗೆ ಕನಿಷ್ಠ 10,000 ರು. ಗೌರವಧನ ನೀಡಬೇಕು. ವಾಹನ ಖರೀದಿಗೆ ಸಬ್ಸಿಡಿ ಸಾಲ ನೀಡಬೇಕು. ಜಿಲ್ಲಾ ಕೇಂದ್ರಗಳಿಗೆ ಅಧಿಕೃತ ಕೆಲಸ ಕಾರ್ಯಗಳಿಗೆ ಹೋಗಲು ಬಸ್‌, ರೈಲ್ವೆ ಪಾಸ್‌ ನೀಡಬೇಕು. ಆರೋಗ್ಯ (Health) ಹಾಗೂ ಜೀವವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಹೋರಾಟ ಮಾಡುವೆ ಎಂದು ತಿಳಿಸಿದರು.

ಗ್ರಾಪಂಗಳಿಗೆ ಎಲ್ಲಾ ವರ್ಗದ ಜನರು ಗೆದ್ದಿದ್ದಾರೆ. ಆ ಸದಸ್ಯರು ಜವಾಬ್ದಾರಿಯ ಜೊತೆಗೆ ಬದುಕನ್ನು ನಿರ್ವಹಿಸಬೇಕಾಗಿರುವುದರಿಂದ ಸ್ವಉದ್ಯೋಗ ಕೈಗೊಳ್ಳಲು ರಿಯಾಯ್ತಿ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಗೌರವಧನ ಗೌರವದ ಮೊತ್ತವಾಗಿರಬೇಕು. ಐದು ವರ್ಷ ಪೂರೈಸಿದ ಸದಸ್ಯರಿಗೆ ಅಲ್ಪ ಪ್ರಮಾಣದ ಪಿಂಚಣಿ ಕೂಡ ನೀಡಬೇಕು ಎಂದು ಆಗ್ರಹಿಸುವೆ ಎಂದರು.

ಒಟ್ಟಾರೆ ಗ್ರಾಮೀಣಾಭಿವೃದ್ಧಿ (Rural Development) ಆಗಬೇಕು. ಸಣ್ಣ ಪ್ರಮಾಣದ ಕೈಗಾರಿಕೆಗಳು ಕೂಡ ಗ್ರಾಮೀಣ ಪ್ರದೇಶದಲ್ಲಿ ಆರಂಭವಾಗಿ, ಜನ ವಲಸೆ ಹೋಗುವುದು ನಿಲ್ಲಬೇಕು. ಆ ದಿಸೆಯಲ್ಲಿ ಕಾರ್ಯ ನಿರ್ವಹಿಸುವೆ ಎಂದರು. ಮಂಗಳವಾರ ನಾಮಪತ್ರ ಕೊನೆಯ ದಿನವಾದ ನ.23 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿವುದಾಗಿ ರಘು ಹೇಳಿದರು.
 
ಬಿಜೆಪಿಯಿಂದ ಒಬಿಸಿ, ಕಾಂಗ್ರೆಸ್‌ನಿಂದ ಎಡಗೈಗೆ ಛಾನ್ಸ್‌, ಜೆಡಿಎಸ್‌ನಿಂದ ಮೇಲ್ವರ್ಗದ ಅಭ್ಯರ್ಥಿ?

ಮೈಸೂರು- ಚಾಮರಾಜನಗರ (Mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ. ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಡಿ.10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯು ಹಿಂದುಳಿದ ವರ್ಗದ ಆರ್‌. ರಘು ಕೌಟಿಲ್ಯ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದರೆ ಕಾಂಗ್ರೆಸ್‌ನಲ್ಲಿ ಸಂಪ್ರದಾಯದಂತೆ ದಲಿತ ಜನಾಂಗದ ಎಡಗೈನವರಿಗೆ ಅವಕಾಶ ಹೆಚ್ಚಿದೆ. ಹಾಲಿ ಸದಸ್ಯ ಆರ್‌. ಧರ್ಮಸೇನ ಅಥವಾ ಆರೋಗ್ಯ ಇಲಾಖೆ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ ಅವರಲ್ಲಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಕಂಡು ಬಂದಿದೆ. ಜೆಡಿಎಸ್‌ನಿಂದ (JDS) ಮೇಲ್ವರ್ಗದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

1988 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆ (Election) ನಡೆದಿದೆ. ಒಮ್ಮೆ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ (By election) ನಡೆದಿದೆ.

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಟಿ.ಎನ್‌. ನರಸಿಂಹಮೂರ್ತಿ (ಎಡಗೈ) ಜನತಾಪಕ್ಷದ ವಿ.ಎಚ್‌. ಗೌಡ (ಒಕ್ಕಲಿಗ), ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿ. ರಮೇಶ್‌ (ಎಡಗೈ)- ಜನತಾದಳದ ವೈ. ಮಹೇಶ್‌ (ಒಕ್ಕಲಿಗ), ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌. ಮಂಜುನಾಥ್‌ (ಎಡಗೈ)- ಜೆಡಿಎಸ್‌ನ ಬಿ. ಚಿದಾನಂದ (ವೀರಶೈವ ಲಿಂಗಾಯತ), ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್‌ ನಾಗರಾಜ್‌ (ಒಕ್ಕಲಿಗ)- ಬಿಜೆಪಿಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ (ವೀರಶೈವ ಲಿಂಗಾಯತ) ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2013 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧರ್ಮಸೇನ (ಎಡಗೈ) ಗೆದ್ದಿದ್ದರು.

2010 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್‌ ಅವರಿಗೆ ಎರಡನೇ ಬಾರಿ ಟಿಕೆಟ್‌ ನೀಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಟಿಕೆಟ್‌ ನೀಡಿರಲಿಲ್ಲ. ಆ ಚುನಾವಣೆಯಲ್ಲಿ ಮಂಜುನಾಥ್‌ ಸೋತರು. 2016 ರಲ್ಲಿ ನಡೆದ ಚುನಾವಣೆಯಲ್ಲಿ

ಕಾಂಗ್ರೆಸ್‌ ಹಾಗೂ ಜೆಡಿಎಸ್‌- ಎರಡೂ ಹಾಲಿ ಸದಸ್ಯರಿಗೆ ನೀಡಿದ್ದವು. ಆರ್‌. ಧರ್ಮಸೇನ (ಎಡಗೈ) ಹಾಗೂ ಸಂದೇಶ್‌ ನಾಗರಾಜ್‌ (ಒಕ್ಕಲಿಗ) ಪುನಾರಾಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು. ಏಕೆಂದರೆ ಆವರೆಗೆ ಸತತ ಎರಡನೇ ಬಾರಿಗೆ ಯಾರೂ ಆಯ್ಕೆಯಾಗಿರಲಿಲ್ಲ.

Follow Us:
Download App:
  • android
  • ios