Asianet Suvarna News Asianet Suvarna News

ಬಿಟ್‌ ಕಾಯಿನ್‌ ಹಗರಣ : ಪ್ರಿಯಾಂಕ್‌ ವಿರುದ್ಧ ಮುಗಿಬಿದ್ದ ಬಿಜೆಪಿಗರು

 • ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಳಿಕ ಇದೀಗ ಬಿಟ್‌ ಕಾಯಿನ್‌ ಹಗರಣ 
 • ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ
 •  ಸಚಿವರಾದ ಕೆ.ಎಸ್‌.ಈಶ್ಪರಪ್ಪ, ಎಸ್‌.ಟಿ.ಸೋಮಶೇಖರ್‌, ವಿ.ಸೋಮಣ್ಣ ಸೇರಿದಂತೆ ಕಮಲ ಪಕ್ಷದ ಅನೇಕ ಮುಖಂಡರು ತೀವ್ರ ಆಕ್ರೋಶ 
Bit Coin case BJP Leaders slams Priyanka kharge snr
Author
Bengaluru, First Published Nov 11, 2021, 8:10 AM IST
 • Facebook
 • Twitter
 • Whatsapp

 ಬೆಂಗಳೂರು (ನ.11): ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC President DK Shivakumar) ಬಳಿಕ ಇದೀಗ ಬಿಟ್‌ ಕಾಯಿನ್‌ (Bit Coin case) ಹಗರಣ ವಿಚಾರವಾಗಿ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ವಿರುದ್ಧ ಸಚಿವರಾದ ಕೆ.ಎಸ್‌.ಈಶ್ಪರಪ್ಪ (KS eshwarappa), ಎಸ್‌.ಟಿ.ಸೋಮಶೇಖರ್‌ (St Somashekar), ವಿ.ಸೋಮಣ್ಣ ಸೇರಿದಂತೆ ಕಮಲ ಪಕ್ಷದ ಅನೇಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೃಥಾ ಆರೋಪಿಸುವುದನ್ನು ಬಿಟ್ಟು ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ.

ಕೊಪ್ಪಳ ಮತ್ತು ಗಂಗಾವತಿಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ಅವರು ಪ್ರಿಯಾಂಕ್‌ ಖರ್ಗೆ ಅವರನ್ನು ‘ವಸೂಲಿ ಕಿಂಗ್‌ ಎಂದು ಆರೋಪಿಸಿದರು. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಟ್‌ ಕಾಯಿನ್‌ (Bit coin) ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ (Congress) ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ತಾಕತ್ತಿದ್ದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರ ಹೆಸರನ್ನಾದರೂ ಹೇಳಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಗೃಹ ಸಚಿವರು ವಸೂಲಿ ಮಾಡುತ್ತಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಆದರೆ ಖರ್ಗೆ ವಸೂಲಿ ಕಿಂಗ್‌ ಎನ್ನುವುದು ಆ ಭಾಗದ ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಆರೋಪಿಸಿದರು.

ಇನ್ನು ಬೆಂಗಳೂರಲ್ಲಿ ಮಾತನಾಡಿರುವ ಸಚಿವ ವಿ.ಸೋಮಣ್ಣ, ಸರ್ಕಾರವನ್ನು ಕವಲು ದಾರಿಗೆ ತಳ್ಳಲು ಕಾಂಗ್ರೆಸ್‌ (congress) ಸುಳ್ಳು ಆರೋಪದ ಮೂಲಕ ಷಡ್ಯಂತ್ರ ಮಾಡುತ್ತಿದೆ. ಪ್ರಿಯಾಂಕ ಖರ್ಗೆ ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ರಾಜಕೀಯಕ್ಕಾಗಿ ಆರೋಪ ಮಾಡುವುದಾದರೆ ಮುಂದೆ ಚುನಾವಣೆ ಬರಲಿದೆ. ಆಗ ಹೋರಾಟ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಾತನಾಡಿರುವ ಸಚಿವ ಎಸ್‌.ಟಿ.ಸೋಮಶೇಖರ್‌, ತನಿಖೆಗೂ ಮುನ್ನವೇ ಸಿಎಂ ಬದಲಾವಣೆ ಆಗುತ್ತಾರೆ ಅಂತ ಪ್ರಿಯಾಂಕ್‌ ಖರ್ಗೆಗೆ ಕನಸು ಬಿದ್ದಿದೆಯೇ? ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಅವರು ಅವಧಿಯನ್ನು ಪೂರೈಸುತ್ತಾರೆ. ಈ ಬಗ್ಗೆ ಮಾತನಾಡುವಷ್ಟುದೊಡ್ಡಮಟ್ಟಕ್ಕೆ ಪ್ರಿಯಾಂಕ್‌ ಖರ್ಗೆ ಬೆಳೆದಿಲ್ಲ ಎಂದರು.

ಗದಗದಲ್ಲಿ ಮಾತನಾಡಿರುವ ಸಚಿವ ಸಿ.ಸಿ.ಪಾಟೀಲ್‌, ಪರಿಷತ್‌ ಚುನಾವಣೆ ಘೋಷಣೆಯಾಗಿದ್ದರಿಂದ ಕಾಂಗ್ರೆಸ್‌ ಇಂತಹ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಲು ಮುಂದಾಗಿದೆ. ಇದರಿಂದ ಅವರು ಯಶಸ್ವಿಯಾಗಲು ಸಾಧ್ಯವಿಲ್ಲ. ಸಿಎಂ ತಲೆದಂಡವಾಗಲಿದೆ ಎನ್ನುವ ಪ್ರಿಯಾಂಕ ಭವಿಷ್ಯ ಹೇಳುವುದನ್ನು ಯಾವಾಗ ಕಲಿತಿದ್ದಾರೆ, ಅವರ ಭವಿಷ್ಯ ಏನಾಗುತ್ತದೆಯೋ ನೋಡೋಣವೆಂದು ಮಾರ್ಮಿಕವಾಗಿ ನುಡಿದ್ದಾರೆ.

 • ಬಿಟ್‌ ಕಾಯಿನ್‌ ಹಗರಣ ವಿಚಾರವಾಗಿ ಬಿಜೆಪಿ ವಿರುದ್ಧ ಗಂಭೀರ ಆರೋಪ
 • ಕಮಲ ಪಕ್ಷದ ಅನೇಕ ಮುಖಂಡರು ತೀವ್ರ ಆಕ್ರೋಶ
 • ವೃಥಾ ಆರೋಪಿಸುವುದನ್ನು ಬಿಟ್ಟು ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ
 • ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದ ಬಿಜೆಪಿಗರು 
 • ಸರ್ಕಾರವನ್ನು ಕವಲು ದಾರಿಗೆ ತಳ್ಳಲು ಕಾಂಗ್ರೆಸ್‌ ಸುಳ್ಳು ಆರೋಪದ ಮೂಲಕ ಷಡ್ಯಂತ್ರ 
 • ಖರ್ಗೆಗೆ ಕನಸು ಬಿದ್ದಿದೆಯೇ? ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ
 •  ಬಸವರಾಜ ಬೊಮ್ಮಾಯಿ ಅವರು ಅವಧಿಯನ್ನು ಪೂರೈಸುತ್ತಾರೆ
 • ಈ ಬಗ್ಗೆ ಮಾತನಾಡುವಷ್ಟು ದೊಡ್ಡ ಮಟ್ಟಕ್ಕೆ ಪ್ರಿಯಾಂಕ್‌ ಖರ್ಗೆ ಬೆಳೆದಿಲ್ಲ ಎಂದರು.
Follow Us:
Download App:
 • android
 • ios