Asianet Suvarna News Asianet Suvarna News

ರಾಜಕೀಯಕ್ಕೆ ಕಂಬಳಿ, ಕುಂಕುಮ ತರಬೇಡಿ: ಈಶ್ವರಪ್ಪ

  • ಕಂಬಳಿ ಕನಕದಾಸರು, ಸಂಗೊಳ್ಳಿ ರಾಯಣ್ಣ ಸೇರಿ ಅನೇಕ ಮಹಾಪುರುಷರು ಹಾಕಿಕೊಂಡ ಪವಿತ್ರವಸ್ತು
  • ಕಂಬಳಿ ಹಾಗೂ ಕುಂಕುಮ ಎರಡೂ ಪಾವಿತ್ರ್ಯತೆಯ ಸಂಕೇತ. ಕಂಬಳಿ ಹಾಗೂ ಕುಂಕುಮವನ್ನು ರಾಜಕಾರಣಕ್ಕೆ ತರಬೇಡಿ 
stop talking about blanket issue Says minister KS eshwarappa snr
Author
Bengaluru, First Published Oct 26, 2021, 6:53 AM IST

 ಸಿಂದಗಿ (ಅ.26):  ಕಂಬಳಿ ಕನಕದಾಸರು (Kanakadasa), ಸಂಗೊಳ್ಳಿ ರಾಯಣ್ಣ (Sangolli Rayanna) ಸೇರಿ ಅನೇಕ ಮಹಾಪುರುಷರು ಹಾಕಿಕೊಂಡ ಪವಿತ್ರವಸ್ತು. ಕಂಬಳಿ ಹಾಗೂ ಕುಂಕುಮ ಎರಡೂ ಪಾವಿತ್ರ್ಯತೆಯ ಸಂಕೇತ. ಕಂಬಳಿ ಹಾಗೂ ಕುಂಕುಮವನ್ನು ರಾಜಕಾರಣಕ್ಕೆ (Politics) ತರಬೇಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಾಲಿಗೆ ಬಿದ್ದು ಕೇಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS eshwarappa) ಹೇಳಿದರು.

ಸಿಂದಗಿಯಲ್ಲಿ ಸೋಮವಾರ ಬಿಜೆಪಿ (BJP) ಪರ ಪ್ರಚಾರ ನಡೆಸಿ ಮಾತನಾಡಿ ಬಿಜೆಪಿಗರಿಗೆ ಕಂಬಳಿ ಹಾಕಿಕೊಳ್ಳುವ ಯೋಗ್ಯತೆ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು. ಸಿದ್ದರಾಮಯ್ಯನವರಿಗೆ ಕಂಬಳಿ ಬಗ್ಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ. ದೇಶದ ಕೋಟಿ ಕೋಟಿ ಜನರಿಗೆ ಕಂಬಳಿ ಬಗ್ಗೆ ಗೌರವ ಇದೆ ಎಂದರು.

ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

ಈಶ್ವರಪ್ಪ ಕುರುಬನೇ ಅಲ್ಲ ಎಂಬ ಹೇಳಿಕೆಗೂ ಕುರಿತೂ ಪ್ರತಿಕ್ರಿಯಿಸಿದ ಅವರು, ಕನಕದಾಸ ಜಯಂತಿ ಮಾಡುವ ಯೋಗ್ಯತೆ ಸಿದ್ದರಾಮಯ್ಯಗೆ ಇರಲಿಲ್ಲ. ಕನಕದಾಸರ ಹೆಸರು ಹೇಳುವುದಕ್ಕೂ ಸಿದ್ದರಾಮಯ್ಯನವರಿಗೆ ಯೋಗ್ಯತೆ ಇಲ್ಲ. ನಾನು ಕುರುಬನೋ (Kuruba) ಅಲ್ವೋ ಎಂಬುದು ತೀರ್ಮಾನ ಮಾಡುವುದು ರಾಜಕಾರಣ ವೇದಿಕೆಯಲ್ಲಿ ಅಲ್ಲ. ಜಾತಿ ಇರುವುದು ಸಂಸ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಗಾಗಿ. ಕುರುಬ ಜಾತಿಯನ್ನು ರಾಜಕಾರಣಕ್ಕೆ ಬಳಸುವುದು ಸೂಕ್ತವಲ್ಲ. ನಾನು ಕರುಬ ಹೌದು, ಅದಕ್ಕಿಂತ ವಿಶೇಷವಾಗಿ ಹಿಂದುತ್ವವಾದಿ ಎಂದು ಹೇಳಿದರು.

ಕೆಲವೇ ವರ್ಷಗಳಲ್ಲೇ ಕಾಂಗ್ರೆಸ್‌ (Congress) ನಿರ್ನಾಮ ಆಗಲಿದೆ. ಉಪಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‌ ಎರಡು ಹೋಳಾಗುತ್ತದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ ಬಣ ಎಂದು ಕಾಂಗ್ರೆಸ್‌ ಇಬ್ಭಾಗವಾಗಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಂದೇ ಪಕ್ಷದಲ್ಲಿ ಇರಲು ಸಾಧ್ಯವೇ ಇಲ್ಲ ಎಂದರು.

ಯೋಗ್ಯತೆ ಬೇಕು

ಯಾರು ಬೇಕಾದರೂ ಕಂಬಳಿ ಹಾಕಿಕೊಂಡರೆ ಅದಕ್ಕೆ ಯೋಗ್ಯತೆ ಬರುವುದಿಲ್ಲ. ಹಾಲು ಮತ ಸಮಾಜವನ್ನು ಸರಿಯಾದ ರೀತಿ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಬರುತ್ತದೆ ಎಂದು ಹೇಳುವ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್‌ ನೀಡಿದ್ದಾರೆ.

ಸಿಂದಗಿಯಲ್ಲಿ (Sindagi) ಭಾನುವಾರ ಹೆಗಲ ಮೇಲೆ ಕಂಬಳಿ ಹೊದ್ದುಕೊಂಡೇ ಪ್ರಚಾರ ನಡೆಸಿದ ಅವರು ಜನಮನ ಸೆಳೆಯುವ ಪ್ರಯತ್ನ ನಡೆಸಿದರು. ಉಣ್ಣೆಯಿಂದ ನೇಯ್ದ ಕಂಬಳಿ (Blanket) ತಯಾರಿಕೆಯಲ್ಲಿ ಹಾಲು ಮತದವರ ಗೌರವ ಮತ್ತು ಪರಿಶ್ರಮ ಎರಡೂ ಅಡಗಿದೆ. ಈ ಕಂಬಳಿ ಹೊದ್ದುಕೊಳ್ಳಲೂ ಒಂದು ಯೋಗ್ಯತೆ ಇರಬೇಕು. ಯಾರು ಹಾಲು ಮತ ಸಮಾಜದ ಅಭಿವೃದ್ಧಿ ಮಾಡುತ್ತಾರೋ ಅವರಿಗೆ ಆ ಯೋಗ್ಯತೆ ದೊರೆಯುತ್ತದೆ. ಯಾವುದೇ ಸಮಾಜದ ಮತ ಸೆಳೆಯಲು ನಾನು ಕಂಬಳಿ ಹೊದ್ದುಕೊಂಡಿಲ್ಲ. ತಂದೆ ಕಾಲದಿಂದಲೂ ನನಗೆ ಕಂಬಳಿ ಜೊತೆಗೆ ಭಾವನಾತ್ಮಕ ಸಂಬಂಧ ಇದೆ ಎಂದರು.

Follow Us:
Download App:
  • android
  • ios