Asianet Suvarna News Asianet Suvarna News

ಸಿಎಂ ಬಸವರಾಜ ಬೊಮ್ಮಾಯಿಗೆ ಡಿಕೆ ಶಿವಕುಮಾರ ಸವಾಲ್

  • ಬಿಟ್‌ ಕಾಯಿನ್‌ ಕೇಸಲ್ಲಿ ಕಾಂಗ್ರೆಸಿಗರಿದ್ದರೆ ನೇಣಿಗೇರಿಸಿ : ಡಿಕೆಶಿ
  •  ಯಾರ ಬೆಂಬಲಕ್ಕೂ ನಾವು ನಿಲ್ಲಲ್ಲ, ತನಿಖೆಯಾಗಲಿ
  •  ನಿಮ್ಮ ಬಳಿ ಇರುವ ಮಾಹಿತಿ ಬಿಚ್ಚಿಡಿ: ಸಿಎಂಗೆ ಸವಾಲ್‌
KPCC President  DK Shivakumar Speaks about bit coin case snr
Author
Bengaluru, First Published Nov 10, 2021, 9:49 AM IST

 ಬೆಂಗಳೂರು (ನ.10):  ಬಿಟ್‌ ಕಾಯಿನ್‌ (Bit coin) ಅವ್ಯವಹಾರದಲ್ಲಿ ಕಾಂಗ್ರೆಸ್‌ನವರು (Congress) ಭಾಗಿಯಾಗಿದ್ದರೆ ಗಲ್ಲಿಗೆ ಹಾಕಲಿ. ಯಾರ ಬೆಂಬಲಕ್ಕೆ ಯಾರೂ ನಿಲ್ಲುವುದಿಲ್ಲ. ಯಾರನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ನಮ್ಮಲ್ಲೂ ದಾಖಲೆಗಳಿವೆ. ನಿಮ್ಮ ಗರ್ಭಗುಡಿಯಲ್ಲಿ ಏನೆಲ್ಲಾ ಮಾಹಿತಿ ಇದೆ, ಅದನ್ನು ಬಿಚ್ಚಿಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC President DK Shivakumar) ಆಗ್ರಹಿಸಿದ್ದಾರೆ.

"

ಕೆಪಿಸಿಸಿ (KPCC) ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ (Bit Coin) ಅವ್ಯವಹಾರದಲ್ಲಿ ಕಾಂಗ್ರೆಸ್‌ನವರಿದ್ದರೆ ನೇಣು ಹಾಕಲಿ. ನಮ್ಮ ಅಭ್ಯಂತರವಿಲ್ಲ. ಪೊಲೀಸರು (Police) ತನಿಖೆ ನಡೆಸುತ್ತಿದ್ದು ಪಕ್ಷದಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಸೂಕ್ತ ಸಮಯದಲ್ಲಿ ನೀಡಲಾಗುವುದು. ನಿಮ್ಮ ಕೈಯಲ್ಲೇ ಸರ್ಕಾರವಿದ್ದು, ನಿಮ್ಮ ಗರ್ಭಗುಡಿಯಲ್ಲಿ ಇರುವುದನ್ನು ಬಿಚ್ಚಿಡಿ. ಇ.ಡಿ. (ಜಾರಿ ನಿರ್ದೇಶನಾಲಯ)ಗೆ ಮಾಹಿತಿ ಕೊಟ್ಟಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಏನೇನು ಕೊಟ್ಟಿದ್ದಾರೆ ಎಂಬುದನ್ನು ಮೊದಲು ಬಿಚ್ಚಿಡಲಿ ಎಂದು ಒತ್ತಾಯಿಸಿದರು.

ಪೊಲೀಸರು ದಾಖಲಿಸಿರುವ ಎಫ್‌ಐಆರ್‌ (FIR), ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಹೆಸರುಗಳು, ಪ್ರಧಾನಮಂತ್ರಿಗಳಿಗೆ (Prime Minister) ಹೋಗಿರುವ ದೂರುಗಳು, ಯಾರನ್ನು ವಿವಿಧ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಬಹಿರಂಗ ಮಾಡಬೇಕು. ಕಾಂಗ್ರೆಸ್‌ನ ನಾಯಕರು ಭಾಗಿಯಾಗಿದ್ದರೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಿ. ನಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷದಿಂದ ಆಂತರಿಕ ತನಿಖೆ:  ಹಿಂದೆ ಸಂದೀಪ್‌ ಪಾಟೀಲ್‌ (sandaap patil) ಅವರು ಮಾಧ್ಯಮಗೋಷ್ಠಿ ನಡೆಸಿದ್ದು ನೆನಪಿದೆ. ಪ್ರಕರಣವನ್ನು ಇ.ಡಿ.ಗೆ  (ED)ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಪಕ್ಷದಿಂದಲೂ ಆಂತರಿಕ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದು, ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಬಹಿರಂಗಪಡಿಸುತ್ತೇವೆ. ಅವ್ಯವಹಾರದಲ್ಲಿ ಯಾರಾರ‍ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ (Araga jnanendra) ಅವರು ಮೊದಲು ಆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿ ಎಂದರು.

ಬಿಟ್‌ ಕಾಯಿನ್‌ ಅವ್ಯವಹಾರದಡಿ ಈಗಾಗಲೇ ಏಳೆಂಟು ಪ್ರಕರಣ ದಾಖಲಾಗಿವೆ. ಆರೋಪಿ ಶ್ರೀಕಿ ವಿರುದ್ಧ ಡ್ರಗ್ಸ್‌ (Drugs) ಸರಬರಾಜು ಪ್ರಕರಣವನ್ನೂ ದಾಖಲಿಸಿದ್ದಾರೆ. ಹೈಕೋರ್ಟ್‌ನಲ್ಲಿದ್ದ (High Court) ಯಾವ ಪ್ರಕರಣ ಹಿಂಪಡೆಯಲಾಯಿತು ಎಂದು ಸರ್ಕಾರ ಬಹಿರಂಗಪಡಿಸಬೇಕು. ಪಂಚನಾಮದಿಂದ ಹಿಡಿದು ಇ.ಡಿ.ಗೆ ಪ್ರಕರಣ ವಹಿಸಿರುವವರೆಗೂ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಮುಕ್ತ ಸದಸ್ಯತ್ವ:  ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ (Sonia gandhi) ಅವರ ನೇತೃತ್ವದಲ್ಲಿ ಎಲ್ಲರಿಗೂ ಮುಕ್ತ ಸದಸ್ಯತ್ವ ನೀಡಲು 12 ವರ್ಷದ ನಂತರ ನಿರ್ಧರಿಸಲಾಗಿದೆ.

ಅದರ ಅಂಗವಾಗಿ ರಾಜ್ಯದಲ್ಲಿ ನ.14ರಂದು ದೇಶದ ಮೊದಲ ಪ್ರಧಾನಿ ದಿ.ಜವಾಹರಲಾಲ ನೆಹರೂ (Javahar lal neharu) ಅವರ ಜನ್ಮದಿನದ ಅಂಗವಾಗಿ ಸದಸ್ಯತ್ವ ಅಭಿಯಾನಕ್ಕೆ ಬೆಂಗಳೂರಿನ (Bengaluru) ಅರಮನೆ  ಮೈದಾನದ (palace Ground) ಗಾಯತ್ರಿ ವಿಹಾರದಲ್ಲಿ ಚಾಲನೆ ನೀಡಲಾಗುತ್ತಿದೆ. 5 ರು. ನೀಡಿ ಸದಸ್ಯತ್ವ ಪಡೆಯಬೇಕು. ಆನ್‌ಲೈನ್‌ (Online) ಹಾಗೂ ಆಫ್‌ಲೈನ್‌ನಲ್ಲೂ ಅವಕಾಶ ಕಲ್ಪಿಸಲಾಗಿದೆ. ಹಳೆಯ ಸದಸ್ಯರು ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಬಹುದು. ಯುವ, ಮಹಿಳಾ, ಎನ್‌ಎಸ್‌ಯುಐ, ರೈತ ಸೇರಿದಂತೆ ಎಲ್ಲ ಘಟಕಗಳಲ್ಲಿ ಮತ್ತೆ ಸದಸ್ಯತ್ವಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು.

  •  ಬಿಟ್‌ ಕಾಯಿನ್‌ ಕೇಸಲ್ಲಿ ಕಾಂಗ್ರೆಸಿಗರಿದ್ದರೆ ನೇಣಿಗೇರಿಸಿ : ಡಿಕೆಶಿ
  •  ಯಾರ ಬೆಂಬಲಕ್ಕೂ ನಾವು ನಿಲ್ಲಲ್ಲ, ತನಿಖೆಯಾಗಲಿ
  •  ನಿಮ್ಮ ಬಳಿ ಇರುವ ಮಾಹಿತಿ ಬಿಚ್ಚಿಡಿ: ಸಿಎಂಗೆ ಸವಾಲ್‌
Follow Us:
Download App:
  • android
  • ios