ಆನೇಕಲ್‌(ಆ.02): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆ ರೂಪಾ ತನ್ನ 2ನೇ ಹೆರಿಗೆಯಲ್ಲಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. 

ಈ ಬಗ್ಗೆ ಮಾತನಾಡಿದ ಉದ್ಯಾನವನದ ಆಡಳಿತಾಧಿಕಾರಿ ವನಶ್ರೀ ಬಿಪಿನ್‌ ಸಿಂಗ್‌ ಅವರು ತಾಯಿ ಮತ್ತು ಮರಿ ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

ಆನೆ ಮರಿ ರಕ್ಷಿಸಲು ಕಾಲುವೆಗಿಳಿದಾತ ತನ್ನದೇ ಪ್ರಾಣ ಕಳೆದುಕೊಂಡ!

2016ರಲ್ಲಿ ರೂಪಾ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಈಗಿನ ಮರಿಯನ್ನೂ ಸೇರಿಸಿದಲ್ಲಿ ಪಾರ್ಕಿನಲ್ಲಿ ಒಟ್ಟು 24 ಆನೆಗಳ ಗಜಪಡೆ ಇದ್ದು ಪ್ರವಾವಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ ಎಂದರು. ಮುಂದಿನ ಎಲ್ಲ ಭಾನುವಾರಗಳಂದು ಉದ್ಯಾನವನ ಪ್ರವಾಸಿಗರಿಗೆ ತೆರೆದಿರುತ್ತದೆ. ಮಂಗಳವಾರದ ರಜೆಯನ್ನು ಮುಂದುವರಿಯಲಿದೆ.