ಆನೆ ಉಳಿಸಲು ಕಾಲುವೆಗಿಳಿದಿದ್ದ ಫಾರೆಸ್ಟ್ ವಾಚರ್| ರಕ್ಷಣಾ ಕಾರ್ಯಾಚರಣೆ ವೇಳೆ ನೀರಿನಲ್ಲಿ ಕೊಚ್ಚಿ ಹೋದ| ಆನೆ ಉಳಿಸಲು ಹೋಗಿ ತನ್ನದೇ ಪ್ರಾಣ ಕಳೆದುಕೊಂಡ ಸಿಬ್ಬಂದಿ

ಚೆನ್ನೈ/ಮೇ.11): ಏಳು ವರ್ಷದ ಆನೆಯನ್ನು ರಕ್ಷಿಸಲು ಕಾಲುವೆಗಿಳಿದಿದ್ದ 24 ಅರಣ್ಯ ಸಿಬ್ಬಂದಿ ತಾನೇ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಈ ಸಂಬಂಧ IFS ಅಧಿಕಾರಿ ಪ್ರವೀಣ್ ಕಾಸ್ವಾನ್ ಟ್ವೀಟ್ ಮಾಹಹಿತಿ ಬಂಹಿರಂಗಪಡಿಸಿದ್ದಾರೆ. ಅರಣ್ಯ ಸಿಬ್ಬಂದಿ ಫೋಟೋ ಟ್ವೀಟ್ ಮಾಡಿರುವ ಪ್ರವೇಣ್ 'ಏಳು ವರ್ಷದ ಆನೆ ಮರಿಯನ್ನು ರಕ್ಷಿಸುವ ವಢಳಡ 24 ವರ್ಷದ ಫಾರೆಸ್ಟ್ ವಾಚರ್ ಸಿ. ಚಂದ್ರು ಮೃತಪಟ್ಟಿದ್ದಾರೆ. ಅವರು ತಮಿಳುನಾಡಿನ ಉಡ್ಮಾಲ್ಪೇಟ್ ಅರಣ್ಯ ವಿಭಾಗದ ರಕ್ಷಣಾ ತಂಡದ ಸದಸ್ಯರಾಗಿದ್ದರು. ಆನೆಯನ್ನು ಕಾಪಾಡಲು ಅವರು ಕಾಲುವೆಗಿಳಿದಿದ್ದರು. ಈ ವೇಳೆ ಕಾಲುವೆಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ' ಎಂದು ಬರೆದಿದ್ದಾರೆ.

Scroll to load tweet…

ದ ಹಿಂದೂ ಪ್ರಕಟಿಸಿರುವ ವರದಿಯನ್ವಯ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚೀ ಬಳಿ ಕಾಲುವೆಯೊಂದರಲ್ಲಿ ಏಳು ವರ್ಷದ ಗಂಡಾನೆ ಬಿದ್ದಿತ್ತು. ಈ ಮಾಹಿತಿ ಪಡೆದ ಬಳಿಕ ರಕ್ಷಣಾ ತಂಡವೊಂದು ಇಲ್ಲಿಗೆ ಆಗಮಿಸಿತ್ತು. ಆದರೆ ಈ ಕಾರ್ಯಾಚರಣೆ ವೇಳೆ ಆನೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದಾದ ಬಳಿಕ ಆ ಮೃತ ಆನೆಯ ಶವ ಕಾಲುವೆಯಿಂದ ಮೇಲೆತ್ತಲಾಯಿತು. ಆದರೆ ಕಾಲುವೆಗಿಳಿದಿದ್ದ ಚಂದ್ರೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಈ ಕಾರ್ಯಾಚರಣೆ ಶನಿವಾರ ಸಂಜೆ ಸುಮಾರು ಐದು ಗಂಟೆಗೆ ನಡೆದಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಫಾರೆಸ್ಟ್ ರೇಂಜ್ ಆಫೀಸರ್ ಸಿ. ಧನಬಲನ್ 'ಚಂದ್ರು 2019ರ ಡಿಸೆಂಬರ್‌ನಲ್ಲಿ ಸೇರ್ಪಡೆಗೊಂಡಿದ್ದರು. ಇದು ಅವರ ಮೊದಲ ಕಾರ್ಯಾಚರಣೆಯಾಗಿತ್ತು ಎಂದಿದ್ದಾರೆ.