ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯ ಮತ್ತೊಂದು ಅವಾಂತರವೀಗ ಬೆಳಕಿಗೆ ಬಂದಿದೆ. ಬಾಡಿಗೆ ಕೊಡದೆ ಮನೆ ಮಾಲಿಕನಿಗೆ ಅವಾಜ್ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು : ಬಿಗ್‌ಬಾಸ್‌ ಖ್ಯಾತಿಯ ಸುನಾಮಿ ಕಿಟ್ಟಿಮತ್ತೊಮ್ಮೆ ಕಿರಿಕ್‌ ಮಾಡಿದ ಆರೋಪ ಕೇಳಿ ಬಂದಿದ್ದು, ಮನೆ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಮನೆ ಮಾಲಿಕ ಕಿಟ್ಟಿವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಶಂಕರಮಠ ಬಳಿ ಇರುವ ಶಿವಣ್ಣ ಎಂಬುವವರಿಗೆ ಸೇರಿದ ಮನೆಯಲ್ಲಿ ಸುನಾಮಿ ಕಿಟ್ಟಿಬಾಡಿಗೆಗೆ ವಾಸವಿದ್ದ. ಆದರೆ ಕಿಟ್ಟಿಕೆಲ ತಿಂಗಳಿಂದ ಮನೆ ಬಾಡಿಗೆ ನೀಡದೆ ಸುಮಾರು 80 ಸಾವಿರಕ್ಕೂ ಅಧಿಕ ಬಾಡಿಗೆ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ.

ಶಿವಣ್ಣ ಮನೆ ಬಾಡಿಗೆ ಕೇಳಿದಾಗ ಮನೆ ಮಾಲಿಕನಿಗೆ ಕಿಟ್ಟಿಸಬೂಬು ಹೇಳಿ ಸತಾಯಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಶಿವಣ್ಣ ಮಹಾಲಕ್ಷ್ಮೀ ಲೇಔಟ್‌ಪೊಲೀಸ್‌ ಠಾಣೆಯಲ್ಲಿ ಈ ಕುರಿರು ದೂರು ನೀಡಿದ್ದರು. ಸುನಾಮಿ ಕಿಟ್ಟಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.