Asianet Suvarna News Asianet Suvarna News

ವಿಶ್ವಕರ್ಮರಿಗೆ ಸಾಮಾಜಿಕ ನ್ಯಾಯಕ್ಕಾಗಿ ಬೀದರ್‌-ಬೆಂಗಳೂರು ಪಾದಯಾತ್ರೆ

ದೇಶದ ಸಂಸ್ಕೃತಿ ಉಳಿಸಿದ ವಿಶ್ವಕರ್ಮ ಸಮಾಜ ಇಂದು ನಡುಬೀದಿಯಲ್ಲಿ ನಿಂತಿದೆ. ಸಮಾಜವು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕತೆಯಲ್ಲಿ ಹಿಂದುಳಿದಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಲಕ್ಷಕ್ಕೂ ಹೆಚ್ಚು ಜನರಿಂದ ಬೀದರದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

Bidar to Bangalore Padayatra for Social Justice for Vishwakarma gvd
Author
First Published Nov 21, 2022, 10:47 AM IST

ಧಾರವಾಡ (ನ.21): ದೇಶದ ಸಂಸ್ಕೃತಿ ಉಳಿಸಿದ ವಿಶ್ವಕರ್ಮ ಸಮಾಜ ಇಂದು ನಡುಬೀದಿಯಲ್ಲಿ ನಿಂತಿದೆ. ಸಮಾಜವು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಆರ್ಥಿಕತೆಯಲ್ಲಿ ಹಿಂದುಳಿದಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಲಕ್ಷಕ್ಕೂ ಹೆಚ್ಚು ಜನರಿಂದ ಬೀದರದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.

ಇಲ್ಲಿನ ನವನಗರದ ಪಂಚಾಕ್ಷರಿ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಾಗೂ ಮಹಾಸಭಾದ ಜಿಲ್ಲಾ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ವಿಶ್ವಕರ್ಮರಿಗೆ ಎಸ್‌ಟಿ ಮೀಸಲಾತಿಗಾಗಿ ನಡೆದ ‘ಜನಜಾಗೃತಿ ಅಭಿಯಾನ’ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಉತ್ತಮವಾಗಿ ಬದುಕಲು ಶಿಕ್ಷಣ, ಉದ್ಯೋಗ ಬೇಕು. ಅದನ್ನು ಪಡೆಯುವುದಕ್ಕಾಗಿ ಸಮಾಜದಲ್ಲಿ ಬಡವರಿಗೆ ಮೀಸಲಾತಿ ಅಗತ್ಯ. ಇದೊಂದು ಪರ್ವಕಾಲವಾಗಿದ್ದು, ಎಸ್‌ಟಿ ಮೀಸಲಾತಿಗಾಗಿ ವಿಶ್ವಕರ್ಮ ಸಮುದಾಯದವರು ಸಮಾಜದ ಮುನ್ನಲೆಗೆ ಬಂದು ಧ್ವನಿ ಎತ್ತಬೇಕಾಗಿದೆ. 

ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ

ರಾಜ್ಯದಲ್ಲಿ 40 ಲಕ್ಷ ಸಮಾಜದ ಜನಸಂಖ್ಯೆ ಇದೆ. ಆದರೆ ಸಮಾಜದ ಜನರು ಗಟ್ಟಿಇಲ್ಲ. ಅವರಲ್ಲಿ ಸ್ಥಿರತೆ ಇಲ್ಲವಾಗಿದೆ. ಹಾಗಾಗಿ ಯಾವುದೇ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಅಧಿಕಾರ ಸಿಕ್ಕರೆ ಮಾತ್ರ ಸಮುದಾಯದ ಬೆಳವಣಿಗೆ ಸಾಧ್ಯ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಸಲಹೆ ನೀಡಿದರು. 2ಎ ಮೀಸಲಾತಿಯಲ್ಲಿ ದೊಡ್ಡ ಸಮಾಜಗಳು ಇರುವ ಕಾರಣ ವಿಶ್ವಕರ್ಮಕ್ಕೆ ಯಾವ ಪ್ರಯೋಜನ ಆಗುತ್ತಿಲ್ಲ. ಸಮಾಜ ಹಿನ್ನೆಲೆ ಬಗ್ಗೆ ಸಮಾಜದ ಜನರಿಗೆ ತಿಳಿವಳಿಕೆ ಇಲ್ಲ. ಆದ್ದರಿಂದ ರಾಜ್ಯದ 745 ಹೋಬಳಿ, 220 ತಾಲೂಕು ಹಾಗೂ 31 ಜಿಲ್ಲೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. 

ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವಾಗಿ ಕುಕ್ಕರ್‌ ಬಾಂಬ್‌ ಸ್ಫೋಟ?

ತದನಂತರ ಬೀದರ-ಬೆಂಗಳೂರು ಪಾದಯಾತ್ರೆ ಮಾಡಲಾಗುವುದು ಎಂದು ನಂಜುಂಡಿ ತಿಳಿಸಿದರು. ಆಡಳಿತ ನಡೆಸಿದ ಬಹುತೇಕ ಪಕ್ಷಗಳಿಂದ ಸಮಾಜಕ್ಕೆ ಮಲತಾಯಿ ಧೋರಣೆ, ನಿರ್ಲಕ್ಷ್ಯ ಹಾಗೂ ಅಸಡ್ಡೆ ತೋರುತ್ತ ಬರಲಾಗಿದೆ. 24 ವರ್ಷಗಳ ನಿರಂತರ ಹೋರಾಟದಿಂದ ವಿಶ್ವಕರ್ಮ ಜಯಂತಿ ಹಾಗೂ ಅಭಿವೃದ್ಧಿ ನಿಗಮ ಮಾಡಲಾಯಿತು. ಎಲ್ಲವನ್ನು ಹೋರಾಟದಿಂದಲೇ ಪಡೆಯಬೇಕಾದ ಸ್ಥಿತಿ. ಯಾವುದನ್ನೂ ಸರ್ಕಾರ ಪ್ರೀತಿ, ಗೌರವದಿಂದ ಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಸದ್ಯ 2ಎ ಮೀಸಲಾತಿಯಲ್ಲಿದ್ದು, ಎಸ್ಟಿಮೀಸಲಾತಿ ನೀಡಲು ದೊಡ್ಡ ಮಟ್ಟದ ಹೋರಾಟಕ್ಕೆ ಧುಮುಕುತ್ತಿದ್ದೇವೆ.

Follow Us:
Download App:
  • android
  • ios