ಬಿಜೆಪಿಯವ್ರು ಹೇಳಿದಂತೆ ಕುಣಿಯೋಕೆ ಆಗೋಲ್ಲ, ಗುತ್ತಿಗೆದಾರ ಕುಟುಂಬಸ್ಥರಿಗೆ ನ್ಯಾಯ ಕೊಡಿಸೋ ಜವಾಬ್ದಾರಿ ನಮ್ದು: ಪ್ರಿಯಾಂಕ್ ಖರ್ಗೆ

ಬೀದರ್ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ತನಿಖೆ ಆರಂಭವಾಗಿದ್ದು, ಸಿಬಿಐ ತನಿಖೆಗೆ ಬೇಡಿಕೆ ಇಟ್ಟಿರುವ ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಸರ್ಕಾರ ಪಾರದರ್ಶಕ ತನಿಖೆ ನಡೆಸುತ್ತದೆ ಎಂದು ಭರವಸೆ ನೀಡಿದ್ದಾರೆ.

bidar contractor sachin pancal case minister Priyank kharge outraged against karnataka bjp rav

ಬೆಂಗಳೂರು (ಜ.4): ಬೀದರ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ತನಿಖೆ ಶುರು ಮಾಡಿದೆ. ಈಗಾಗಲೇ ಎರಡು ದಿನಗಳಿಂದ ಮಹಜರು ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕ ತನಿಖೆ ನಡೆಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮೃತ ಸಚಿನ್ ಸಹೋದರಿ ಸಿಬಿಐ ತನಿಖೆಗೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಹೇಳಿಕೆ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಬೇಕು ಅಂತಾ ಬಿಜೆಪಿಯವ್ರು ಹೇಳಿದ್ದಾರೆ. ಅದನ್ನೇ ಸಹೋದರಿ ಹೇಳಿದ್ದಾರೆ. ಬಿಜೆಪಿಯವ್ರು ಹೇಳಿದಾಗೆಲ್ಲಾ ಕೇಳಲು ಆಗಲ್ಲ. ಈ ಪ್ರಕರಣವನ್ನು ರಾಜ್ಯದ ಪೊಲೀಸರೇ ಪಾರದರ್ಶಕವಾಗಿ ನಡೆಸಲಿದ್ದಾರೆ, ಸಿಬಿಐ ಕೊಡುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ: ಪೊಲೀಸ್ರು ಬರೀ ನನ್ನ ತಮ್ಮನ ಬಗ್ಗೆ ತನಿಖೆ ಮಾಡ್ತಿದ್ದಾರೆ, ಸಿಐಡಿ ತನಿಖೆ ಬಗ್ಗೆ ಮೃತ ಸಚಿನ್ ಸಹೋದರಿ ಅಸಮಾಧಾನ

ಬಿಜೆಪಿ ಎಷ್ಟು ಕೇಸ್ ಸಿಬಿಐಗೆ ಕೊಟ್ಟಿದೆ?

ಗಂಗಾ ಕಲ್ಯಾಣ ಹಗರಣ ನಡೆದಾಗ, ಪಿಎಸ್‌ಐ ಹಗರಣ ನಡೆದಾಗ ಬಿಜೆಪಿಯವ್ರು ಸಿಬಿಐಗೆ ಕೊಟ್ಟಿದ್ರಾ? ಇವ್ರ ಅವಧಿಯಲ್ಲೂ ಹಗರಣಗಳು ನಡೆದವು ಅವರು ಕೊಟ್ಟರಾ? ಮಾನವ ಸಂಪನ್ಮೂಲ ಇಲ್ಲ ಸುಮ್ಮನೆ ಕೊಡಬೇಡಿ ಅಂತಾ ಸಿಬಿಐ ನವ್ರೇ ಹೇಳಿದ್ದಾರೆ. ಇವ್ರು ಹೇಳಿದಂತೆ ಮಾಡೋಕೆ ನಾವು ಅಧಿಕಾರದಲ್ಲಿರೋದಾ? ಅವರ ಸ್ಕ್ರಿಪ್ಟ್‌ಗೆ ತಕ್ಕಂತೆ ನಾವು ಕುಣಿಯೋಕೆ ಆಗುತ್ತಾ? ವಿರೋಧ ಪಕ್ಷದಲ್ಲಿದ್ದವರಿಗೆ ಜವಾಬ್ದಾರಿ ಇರಬೇಕು, ಪ್ರತಿಭಟನೆಗೆ ಬನ್ನಿ ಅಂತಾ ಮೃತ ಸಚಿವ ಕುಟುಂಬಕ್ಕೆ ಫೋರ್ಸ್ ಮಾಡ್ತಿದ್ದಾರೆ. ಪದೇ ಪದೇ ಫೋನ್ ಮಾಡಿ ಸರ್ಕಾರದ ವಿರುದ್ದ ಸ್ಟೇಟ್ ಮೆಂಟ್ ಕೇಳ್ತಿದ್ದಾರೆ. ಇದೇ ರೀತಿ ಹಿಂದೆ ಸಂತೋಷ ಕುಟುಂಬಕ್ಕೆ ಬಿಜೆಪಿಯವರು ಸಹಾಯ ಮಾಡಬೇಕಿತ್ತು? ಅವರ ಮನೆಗೆ ವಿಜಯೇಂದ್ರ ಹೋಗಿದ್ರಾ? ಎಷ್ಟು ಸಲ ಹೋಗಿದ್ರು? ಸಚಿನ್ ವಿಚಾರದಲ್ಲಿ ರಾಜಕೀಯ ಬೆರೆಸದೇ ಅವರ ಕುಟುಂಬಕ್ಕೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ ಎಂದರು.

ನಾನು ಸಚಿನ್ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದೇನೆ. ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದೇನೆ. ಈ ಬಿಜೆಪಿಯವರಿಗೆ ಸಿಬಿಐ ಮೇಲೆ ಯಾಕಷ್ಟು ಪ್ರೀತಿ? ಒಂದು ಜೀವ ಹೋಗಿದೆ ಅದಕ್ಕೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಸರ್ಕಾರದ ವಿರುದ್ಧ ಕುಟುಂಬಸ್ಥರಿಂದ ಹೇಳಿಕೆ ಕೊಡಿಸೋ ಕೆಲಸ ಬಿಜೆಪಿಯವರು ಮಾಡ್ತಿದ್ದಾರೆ. ಇವ್ರಲ್ಲಿ ಇರೋ ಹುಳುಕು ನಾವು ತಯಾರಿ ಮಾಡಿದ್ದಾ? 

ಇದನ್ನೂ ಓದಿ: ಖರ್ಗೆ ಸುಪುತ್ರ ಪ್ರಿಯಾಂಕ್ ಯಾವ ಮಟ್ಟಕ್ಕೂ ಇಳಿಯಬಲ್ಲರು..! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಕಲಬುರಗಿಯಲ್ಲಿ ಎಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ ಇವ್ರು? ವಿಪಕ್ಷ ನಾಯಕ ಅಶೋಕ್ ಮಾತಾಡಿದ್ದು ಸಂಸ್ಕೃತಿನಾ? ಸಿಟಿ ರವಿ ಹೆಣ್ಣುಮಕ್ಕಳ ಬಗ್ಗೆ ಅವ್ಯಾಚ್ಯವಾಗಿ ನಿಂದನೆ ಮಾಡ್ತಾರೆ, ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೆ ಇದೇನಾ ನಿಮ್ಮ ಸಂಸ್ಕೃತಿ? ಮಹಿಳೆಯರ ಮೇಲೆ, ಅಧಿಕಾರಿಗಳ ಮೇಲೆ ದರ್ಪ ತೋರಾದಾ ನಿಮ್ಮ ಸಂಸ್ಕೃತಿನಾ. ನನ್ನ ಬಗ್ಗೆ ಮಾತಾಡೋವಾಗ ನಾಲಿಗೆಗೆ ಲಗಾಮು ಇರಲಿ. ಬೈ ಎಲೆಕ್ಷನ್ ಸೀರಿಯಸ್ ಆಗಿ ತಗೊಂಡಿಲ್ಲ ಅಂತಾ ಬಾಲಿಶ ಹೇಳಿಕೆ ಕೊಡ್ತಾರೆ. ಹಾಗಿದ್ದ ಮೇಲೆ ಮಾಜಿ ಸಿಎಂ ಪುತ್ರನನ್ನ ಸೋಲಿಸಿದ್ದು ಏಕೆ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios