ಖರ್ಗೆ ಸುಪುತ್ರ ಪ್ರಿಯಾಂಕ್ ಯಾವ ಮಟ್ಟಕ್ಕೂ ಇಳಿಯಬಲ್ಲರು..! ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ವಿರುದ್ಧ ಭ್ರಷ್ಟಾಚಾರ, ಅತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳದಂತಹ ಗಂಭೀರ ಆರೋಪಗಳಿವೆ ಎಂದು ಆರೋಪಿಸಿದ್ದಾರೆ. ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕ ಬದುಕಿನ ಎಲ್ಲ ಮಟ್ಟವನ್ನು ಮೀರಿದ್ದಾರೆ ಎಂದು ಕಟುವಾಗಿ ತಿಳಿಸಿದರು. ಅಲ್ಲದೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಅತ್ಮಹತ್ಯೆಗಳು ನಡೆದಿವೆ ಎಂದು ಜೋಶಿ ಆರೋಪಿಸಿದ್ದಾರೆ.

Union minister pralhad joshi outraged against priyank kharge at mangaluru rav

ಮಂಗಳೂರು (ಜ.2): ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಸಚಿವರ ವಿರುದ್ಧ ಭ್ರಷ್ಟಾಚಾರ, ಅತ್ಮಹತ್ಯೆಗೆ ಪ್ರಚೋದನೆಯ, ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈಶ್ವರಪ್ಪ ಹಾಗೂ ಯಡಿಯೂರಪ್ಪ ಪ್ರಕರಣದಲ್ಲಿ ಆಡಿದ ಮಾತುಗಳನ್ನ ಸಿಎಂ ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಖರ್ಗೆ ಸುಪುತ್ರ ಪ್ರಿಯಾಂಕ್ ಖರ್ಗೆ ಸಾರ್ವಜನಿಕ ಬದುಕಿನ ಎಲ್ಲಾ ಮಟ್ಟವನ್ನ ಮೀರಿದವರು. ಎಷ್ಟು ಕೆಳಗಿಳಿಯಲು ಬೇಕಾದರೂ ಅವರು ಸಿದ್ಧರಿದ್ದಾರೆ. ಹೀಗಾಗಿ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಖರ್ಗೆ ಸುಪುತ್ರ ರಾಜೀನಾಮೆ ಕೊಡ್ತಾರೆ ಅನ್ನೋ ನಿರೀಕ್ಷೆ ನಮಗಿಲ್ಲ. ಆದರೆ ನಾವು ಜನರನ್ನ ಜಾಗೃತಗೊಳಿಸಲು ಹೋರಾಟ ಮುಂದುವರಿಸುತ್ತೇವೆ ಎಂದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ರಾಜೀನಾಮೆ? ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಚಂದ್ರಶೇಖರ್ ಆತ್ಮಹತ್ಯೆ ಕಾರಣದಿಂದ ವಾಲ್ಮೀಕಿ ಹಗರಣ ಹೊರಬಂತು, ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂಥ ಹಲವು ಅತ್ಮಹತ್ಯೆಗಳು ನಡೆದಿವೆ, ನಡೆಯುತ್ತಿವೆ. ಸಿದ್ದಲಿಂಗ ಸ್ವಾಮೀಜಿ ಹಾಗೂ ಹಲವರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಡೆತ್ ನೋಟ್‌ನಲ್ಲಿದೆ. ಕೇಂದ್ರದಲ್ಲಿ ಖರ್ಗೆ ಸೋನಿಯಾ, ರಾಹುಲ್ ಮೆಚ್ಚಿಸಲು ಏನೇನೋ ಮಾತನಾಡ್ತಾರೆ. ಆದರೆ ಖರ್ಗೆ ಅವರ ಹಿಂದಿನ ರಾಜಕಾರಣದಲ್ಲಿ ಈ ರೀತಿ ಇರಲಿಲ್ಲ. ಇತ್ತ ರಾಜ್ಯ ರಾಜಕಾರಣದಲ್ಲಿ ಖರ್ಗೆ ಸುಪುತ್ರ ಪ್ರಿಯಾಂಕ್ ಖರ್ಗೆ ಈಗಲೇ ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ. ನಾವು ಎಲ್ಲರೂ ಜೊತೆಯಾಗಿಯೇ ಹೋರಾಟ ಮಾಡುತ್ತೇವೆ ಎಂದರು.

ಪ್ರಹ್ಲಾದ್ ಜೋಶಿ ಅಸಮರ್ಥ ಕೇಂದ್ರ ಸಚಿವ ಅಂದ್ರೆ ಒಪ್ಪಿಕೊಳ್ತಾರಾ?: ಸಚಿವ ಪರಮೇಶ್ವರ್‌ ತಿರುಗೇಟು‌

ಇನ್ನು ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸಂಬಂದ ಪ್ರತಿಕ್ರಿಯಿಸಿದ ಸಚಿವರು, ನಾನು ಕರ್ನಾಟಕ ರಾಜ್ಯವನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತಿರೋದು. ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಅಂತಾ ನಾನು ಹೇಳಲ್ಲ.ಇಡೀ ದೇಶಾದ್ಯಂತ ಮಂಡಲ, ಬೂತ್, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಬದಲಾವಣೆ ಪ್ರೋಸೆಸ್ ಆಗ್ತದೆ. ಎಲ್ಲ ಕಡೆಯಲ್ಲೂ ಅದರ ಪ್ರಕ್ರಿಯೆ ನಡೆಯುತ್ತೆ. ಅದರಲ್ಲಿ ಇದ್ದವರೇ ಮತ್ತೊಮ್ಮೆ ಆಯ್ಕೆ ಆಗಬಹುದು. ನಾಲ್ಕೈದು ತಿಂಗಳ ಹಿಂದೆ ಕೆಲವು ಕಡೆ ರಾಜ್ಯಾಧ್ಯಕ್ಷರ ಆಯ್ಕೆಯೂ ನಡೆದಿದೆ. ಅಲ್ಲೂ ಮತ್ತೆ ಪ್ರಕ್ರಿಯೆ ನಡೆಯುತ್ತೆ. ಸದ್ಯ ಬೂತ್ ಅಧ್ಯಕ್ಷರ ಚುನಾವಣೆ ಆಗಿದೆ. ಇನ್ನು ಮಂಡಲ ಅಧ್ಯಕ್ಷರ ಚುನಾವಣೆ ಆಗಲಿದೆ ಎಂದರು.

Latest Videos
Follow Us:
Download App:
  • android
  • ios