ನಮ್ಮ ಕುಟುಂಬ ಯಾರಿಗೂ ನೋವುಂಟು ಮಾಡಲ್ಲ: ಭವಾನಿ ಕಾರು ಅಪಘಾತ ಪ್ರಕರಣಕ್ಕೆ ಕ್ಷಮೆ ಕೇಳಿದ ಎಚ್‌ಡಿ ರೇವಣ್ಣ

ಭವಾನಿ ಏನೂ ಅಹಂಕಾರ ಮಾಡಿಲ್ಲ. ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅದಕ್ಕಾಗಿ ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ‌ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನು ಗತಿ? ಹೀಗಾಗಿ ಭವಾನಿ ಸಿಟ್ಟಿನಿಂದ ಮಾತಾಡಿದ್ದಾರೆ. ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಎಚ್‌ಡಿ ರೇವಣ್ಣ ವಿಷಾದ ವ್ಯಕ್ತಪಡಿಸಿದರು

Bhavani revanna Car accident case HD Revanna reaction in suvarnasoudha at belagavi rav

ಬೆಳಗಾವಿ (ಡಿ.4): ಯಾರದೋ ಸ್ನೇಹಿತರ ಕಾರನ್ನು ತೆಗೆದುಕೊಂಡು ಹೋಗಿದ್ರು. ಅಪಘಾತ ತಪ್ಪಿಸಲು ಎಷ್ಟೇ ಸೈಡಿಗೆ ತೆಗೆದುಕೊಂಡ್ರೂ ಬೈಕಿನವನು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದಾನೆ ಭವಾನಿ ರೇವಣ್ಣರ ಕಾರು ಅಪಘಾತ ಪ್ರಕರಣಕ್ಕೆ ಶಾಸಕ ಎಚ್‌ಡಿ ರೇವಣ್ಣ ಸ್ಪಷ್ಟನೆ ನೀಡಿದರು.

ಇಂದು ಸುವರ್ಣಸೌಧದಲ್ಲಿ ಭವಾನಿ ರೇವಣ್ಣ ಕಾರು ಅಪಘಾತ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇವಣ್ಣ, ಸೈಡ್‌ಗೆ ಹೊರಟ್ಟಿದ್ದ ಕಾರಿಗೆ ಬೈಕ್‌ನವನೇ ಬಂದು ಗುದ್ದಿದ್ದಾನೆ. ಎಷ್ಟೇ ನಿಧಾನವಾಗಿ ಹೋಗಿದ್ದರೂ ಕಾರಿನ ಮಧ್ಯೆದಲ್ಲಿ ಗುದ್ದಿದ್ದಾನೆ. ಕಾರಿನಲ್ಲಿದ್ದವರಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಭವಾನಿ ಏನೂ ಅಹಂಕಾರ ಮಾಡಿಲ್ಲ. ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅದಕ್ಕಾಗಿ ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ‌ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನು ಗತಿ? ಇದನ್ನ ಬೇಕಂತಲ್ಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ ನವನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? ಅದರಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಅಪಘಾತ ಆಗಿದ್ದರೆ ಅದರ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ?. ಅದಕ್ಕಾಗಿ ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಿದ್ದಾರೆ. ಕಾರು ಅಪಘಾತ ಆಗಿರುವ ಕಾರಣ ಇನ್ ಶ್ಯೂರೆನ್ಸ್ ಗಾಗಿ ದೂರು ನೀಡಿದ್ದಾರೆಕ ಅಷ್ಟೇ. ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿರಲಿಲ್ಲ.
ಅವರ ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ ಎಂದರುk.

ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ: ಕೈ ನಾಯಕರ ವಿರುದ್ಧ ಗುಡುಗಿದ ದೇವೇಗೌಡ

ಬೈಕ್ ಸವಾರ ಮದ್ಯಪಾನ ಮಾಡಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳಲ್ಲ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಕುಟುಂಬದಿಂದ ಯಾರಿಗೂ ನೋವುಂಟು ಮಾಡುವುದಿಲ್ಲ ಎಂದರು. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದರು.

ರೇವಣ್ಣ ಪ್ರತಿಕ್ರಿಯೆಗೆ ಮಾಧ್ಯಮದವರು ಆಹ್ವಾನಿಸಿದಾಗ  ಸಿಎಂ ಸಿದ್ದರಾಮಯ್ಯನವರೇ ರೇವಣ್ಣನಿಗೆ ಮಾಧ್ಯಮ ಕರೆಯುತ್ತಿದ್ದಾರೆ ನೋಡು ಎಂದ ಸಿಎಂ ಸಿದ್ದರಾಮಯ್ಯ.

Latest Videos
Follow Us:
Download App:
  • android
  • ios