ಬಿಜಿಎಸ್‌ ಗ್ಲೇನಿಗಲ್ಸ್‌ ಆಸ್ಪತ್ರೆಯಲ್ಲಿ 12 ವರ್ಷದಲ್ಲಿ 250 ಯಕೃತ್‌ ಕಸಿ  ರಾಜ್ಯದಲ್ಲಿ ಅತೀ ಹೆಚ್ಚು ಲಿವರ್‌ ಕಸಿ ಶಸ್ತ್ರ ಚಿಕಿತ್ಸೆ ನಡೆಸಿದ ಹೆಗ್ಗಳಿಕೆ 120 ಮಿದುಳು ನಿಷ್ಕ್ರೀಯಗೊಂಡ ದಾನಿಗಳಿಂದ  119 ಜೀವಂತ ದಾನಿಗಳಿಂದ ಅಂಗಾಂಗ ಪಡೆದು ಕಸಿ ಶಸ್ತ್ರಚಿಕಿತ್ಸೆ

ಬೆಂಗಳೂರು (ಜೂನ್ 22): ಬಹು ಅಂಗಾಂಗ ಕಸಿ ಕೇಂದ್ರಗಳಲ್ಲಿ ಒಂದಾಗಿರುವ ಬಿಜಿಎಸ್‌ ಗ್ಲೇನಿಗಲ್ಸ್‌ ಆಸ್ಪತ್ರೆಯು ಕಳೆದ 12 ವರ್ಷಗಳಲ್ಲಿ 250 ರೋಗಿಗಳಿಗೆ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಲಿವರ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಹೇಶ್‌ ಗೋಪಸೆಟ್ಟಿ ಹೇಳಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ 250 ಲಿವರ್‌ ಕಸಿ ಶಸ್ತ್ರಚಿಕಿತ್ಸೆಗಳ ಪೈಕಿ 120 ಮಿದುಳು ನಿಷ್ಕ್ರೀಯಗೊಂಡ ದಾನಿಗಳಿಂದ ಹಾಗೂ 119 ಜೀವಂತ ದಾನಿಗಳಿಂದ ಅಂಗಾಂಗ ಪಡೆದು ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಉಳಿದಂತೆ 11 ರೋಗಿಗಳಿಗೆ ಕಿಡ್ನಿ-ಲಿವರ್‌ ಎರಡನ್ನೂ ಒಟ್ಟಿಗೆ ಕಸಿ ಮಾಡಲಾಗಿದೆ ಎಂದು ವಿವರಿಸಿದರು.

UTTARA KANNADAದಲ್ಲಿ ನಿಲ್ಲದ ಮಳೆಯ ಅಬ್ಬರ

ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ, ಮದ್ಯಪಾನ ಸೇರಿ ನಾನಾ ಕಾರಣಗಳಿಂದ ವಿವಿಧ ಬಗೆಯ ಲಿವರ್‌ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಲಿವರ್‌ ವೈಫಲಕ್ಕೆ ಶೇ.70 ಮದ್ಯಪಾನ ಕಾರಣವಾಗಿದ್ದರೆ, ಶೇ.20 ಫ್ಯಾಟಿ ಲಿವರ್‌ ಹಾಗೂ ಶೇ.10 ಹೆಪಟೈಟಿಸ್‌ ಬಿ ಮತ್ತು ಹೆಪಟೈಟಿಸ್‌ ಸಿ ಹಾಗೂ ಅನುವಂಶಿಕತೆ ಕಾರಣವಾಗಿರುತ್ತದೆ. ಆದರೆ ಲಿವರ್‌ ಸಮಸ್ಯೆ ಆರಂಭದಲ್ಲೇ ಗೋಚರಿಸದ ಕಾರಣ ಬಹುತೇಕರು ಶೇ.70-80 ಲಿವರ್‌ ವೈಫಲ್ಯದ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಆಗ ಲಿವರ್‌ ಕಸಿ ಒಂದೇ ಪರಿಹಾರವಾಗಿರುತ್ತದೆ ಎಂದು ಹೇಳಿದರು.

ಆಸ್ಪತ್ರೆಯ ಗ್ಯಾಸ್ಟಟೋರೆಂಟರಾಲಜಿಸ್ಟ್‌ ಡಾ ಸಿ.ಕೆ.ಆದರ್ಶ್, ಡಾ ಎ.ಎಂ.ಕುಟ್ಟಪ್ಪ, ಡಾ ಪ್ರದೀಪ್‌ ಕೃಷ್ಣ, ಡಾ ಪ್ರಮೋದ್‌, ಆರೋಗ್ಯ ಇಲಾಖೆ ಡಾ. ಕಿರಣ್‌ ಇತರರು ಇದ್ದರು. ಈ ವೇಳೆ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಹಾಗೂ ದಾನಿಗಳು ಉಪಸ್ಥಿತರಿದ್ದರು.

Yoga Hall in chickpet ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ

ಶಿವಮೊಗ್ಗದಲ್ಲಿ ಬಾಣಂತಿ ಸಾವು, ಮೆಗ್ಗಾನ್‌ ವೈದ್ಯರ ವಿರುದ್ಧ ಆಕ್ರೋಶ : ನಾಲ್ಕು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿ ಆರೈಕೆ ಪಡೆಯುತ್ತಿದ್ದ ಬಾಣಂತಿ ಮಹಿಳೆ ಆಸ್ಪತ್ರೆಯಲ್ಲೆ ಸಾವನ್ನಪ್ಪಿದ್ದಾಳೆ. ಈಕೆಯ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಆಕೆಯ ಕುಟುಂಬಸ್ಥರು ಆಸ್ಪತ್ರೆ ಬಾಗಿಲಿನ ಗಾಜುಗಳನ್ನು ಒಡೆದು ಹಾಕಿರುವ ಘಟನೆ ಮಂಗಳವಾರ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ನಡೆದಿದೆ.

ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸರಿತಾ (27) ಮಂಗಳವಾರ ಬೆಳಿಗ್ಗೆ ದಿಢೀರ್‌ ಎಂದು ಸಾವನ್ನಪ್ಪಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂಬುದು ಕುಟುಂಬಸ್ಥ ಆರೋಪ.

ಶುಕ್ರವಾರ ಮೆಗ್ಗಾನ್‌ ಹೆರಿಗೆ ವಾರ್ಡ್‌ಗೆ ಬಂದು ದಾಖಲಾದ ಸರಿತಾಗೆ ಜೂ.18ರಂದು ಸಿಜರಿನ್‌ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಗಂಡು ಮಗುವೂ ಜನಿಸಿದೆ. ಹೆರಿಗೆ ನಂತರ ಚೆನ್ನಾಗಿಯೇ ಇದ್ದ ಸರಿತಾ ಅವರಿಗೆ ಭಾನುವಾರ ಸುಸ್ತು ಕಾಣಿಸಿದೆ. ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಸೋಮವಾರ ಕೂಡ ಚಿಕಿತ್ಸೆ ಮುಂದುವರಿದಿದೆ. ಆದರೆ, ಮಂಗಳವಾರ ಬೆಳಗ್ಗೆ ಏಕಾಏಕಿ ಸರಿತಾ ಕೊನೆ ಉಸಿರೆಳೆದಿದ್ದಾರೆ.

ಈಕೆಗೆ ಭಾನುವಾರ ಸುಸ್ತು ಕಾಣಿಸಿಕೊಂಡಿದೆ. ವೈದ್ಯರು ತಪಾಸಣೆ ನಡೆಸಿ ಸೋಮವಾರ ಎರಡು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ, ಯಾವುದಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬುದನ್ನು ನಮಗೆ ತಿಳಿಸಿಲ್ಲ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದೆವು. ಆದರೆ, ಇದಕ್ಕೆ ಇಲ್ಲಿಯ ವೈದ್ಯರು ಆರೋಗ್ಯ ಚೆನ್ನಾಗಿದೆ. ಕೂಡಲೇ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದರಿಂದ ನಾವು ಸುಮ್ಮನಾಗಿದ್ದೆವು. ಆದರೆ, ಈಗ ಸರಿತಾ ಸಾವನ್ನಪ್ಪಿದ್ದಾಳೆ. ಇದಕ್ಕೆ ಯಾರು ಹೊಣೆ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅವರ ಸಂಬಂಧಿಕರು ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಕೆಲ ಹೊತ್ತಿನ ಬಳಿಕ ಪರಿಸ್ಥಿತಿ ತಿಳಿಗೊಂಡಿತು.