Yoga Hall in chickpet ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ವಿ.ವಿ.ಪುರಂ ವಾರ್ಡನ, ಮಾವಳ್ಳಿಯ, ಎಸ್.ಕೆ.ಲೈನ್ ನಲ್ಲಿ ನೂತನ ಯೋಗ ಸೆಂಟರ್ ಒಂದನ್ನು ಓಪನ್ ಮಾಡಲಾಗಿದೆ.
ಬೆಂಗಳೂರು (ಜೂನ್ 21): ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನಲೆಯಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿ ಯಿಂದ ಹಿಡಿದು ಸಣ್ಣ ಮಕ್ಕಳ ವರೆಗೂ ಇಂದು ರಾಷ್ಟ್ರದ ವಿವಿಧ ಕಡೆಗಳಲ್ಲಿ ಯೋಗಾಭ್ಯಾಸ ಮಾಡಿದರು. ಇನ್ನೂ ಜನಪ್ರತಿನಿಧಿಗಳಂತೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯೋಗ ಮಾಡುವ ಮೂಲಕ ವಿಶ್ವ ಯೋಗದಿನವನ್ನು ಆಚರಿಸಿದರು. ಈ ಭಾರಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಯೋಗ ದಿನಾಚರಣೆ ಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ರಾಜ್ಯದಲ್ಲಿ ಇನ್ನಷ್ಟು ಉತ್ಸಾಹದಿಂದ ಜನರು ಯೋಗ ದಿನಾಚರಣೆ ಯಲ್ಲಿ ಪಾಲ್ಗೊಂಡರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ತಮ್ಮ ಕ್ಷೇತ್ರದಲ್ಲಿ ಹೊಸದೊಂದು ಯೋಗ ಕೇಂದ್ರ ವನ್ನು ಇಂದು ಉದ್ಘಾಟನೆ ಮಾಡಿದ್ರು. ಅಲ್ಲದೇ ನೂರಾರು ಮಕ್ಕಳ ಜೊತೆ ಇಂದು ಅವರೂ ಸಹಾ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದ್ರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ವಿ.ವಿ.ಪುರಂ ವಾರ್ಡನ, ಮಾವಳ್ಳಿಯ, ಎಸ್.ಕೆ.ಲೈನ್ ನಲ್ಲಿ ಈ ನೂತನ ಯೋಗ ಸೆಂಟರ್ ಇದೆ.
ಶತಶೃಂಗ ಪರ್ವತದಲ್ಲಿ ಯೋಗ ಮಾಡಿ ದಾಖಲೆ ಸೃಷ್ಠಿಸಿದ ಕೋಲಾರ
ಈ ವೇಳೆ ಮಾತನಾಡಿದ ಶಾಸಕ ಉದಯ್ ಗರುಡಾಚಾರ್ ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಯೋಗ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು , ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಈ ದಿನ ಪ್ರಧಾನ ಮಂತ್ರಿ ಗಳಿಂದ ಹಿಡಿದು ರಾಷ್ಟ್ರದ ಕಟ್ಟ ಕಡೆಯ ಮನುಷ್ಯ ಕೂಡಾ ಯೋಗದ ಬಗ್ಗೆ ಆಸಕ್ತಿ ಹೊಂದಿದ್ದಾನೆ.
ಮಾವಳ್ಳಿ ವಾರ್ಡ್ ನಲ್ಲಿ ಹಾಳು ಬಿದ್ದ ಜಾಗವೊಂದನ್ನು ಶುದ್ದೀಕರಿಸಿ ಯೋಗ ಸೆಂಟರ್ ನಿರ್ಮಾಣ ಮಾಡಲಾಗಿದೆ. ಮೊದಲು ಈ ಜಾಗ ದುಷ್ಕರ್ಮಿಗಳಿಂದ ಹಾಳಾಗಿತ್ತು. ಹಾಗಾಗಿ ಇದನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಬಿಡಿಸಿಕೊಂಡೆವು. ಏನಾದ್ರೂ ಒಳ್ಳೆಯ ಕಾರ್ಯಕ್ಕಾಗಿ ಈ ಸ್ಥಳವನ್ನು ಬಳಸಿಕೊಳ್ಳಲು ಯೋಚಿಸಿದ್ದೆವು. ಈ ವಾರ್ಡ್ ನ ಬಹುತೇಕ ಜನರು ಯೋಗ ದಲ್ಲಿ ಉತ್ಸಾಹ ತೋರಿಸಿದ ಕಾರಣದಿಂದ ಇದನ್ನು ಯೋಗ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದೇವೆ ಎಂದು ಉದಯ್ ಗರುಡಾಚಾರ್ ಹೇಳಿದ್ರು.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಪಾರ್ಕಿಂಗ್ ಪರದಾಟ!
ನಲವತ್ತು ಲಕ್ಷ ರೂಪಾಯಿ ಖರ್ಚಿನಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಯೋಗ ಸೆಂಟರ್ ಅನ್ನು ಇಂದು ಉದ್ಘಾಟನೆ ಮಾಡಿ ಶಾಲಾ ಮಕ್ಕಳಿಂದ ಯೋಗಾಭ್ಯಾಸ ಮಾಡಿಸುವ ಮೂಲಕ ಯೋಗ ದಿನಾಚರಣೆ ಆಚರಣೆ ಮಾಡಲಾಯಿತು.